ವಿವಿಧ ಬೇಡಿಕೆ ಈಡೇರಿಸುವಂತೆ ಭೀಮ್ ಆರ್ಮಿ ಅನಿರ್ದಿಷ್ಟ ಧರಣಿ 

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ಹಳೆ ಬಸ್ ನಿಲ್ದಾಣದ ಡಾll ಬಿ.ಆರ್ ಅಂಬೇಡ್ಕರ್ ವೃತ್ತದ ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿಯು 100 ಹಾಸಿಗೆ ಇರುವ ಆಸ್ಪತ್ರೆ ನಿರ್ಮಾಣ, ಹಿರೇದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಕನೂರು ಕ್ಯಾಂಪಿಗೆ ಶುದ್ಧ ಕುಡಿಯುವ ನೀರು, ತೋರಣದಿನ್ನಿ ಎಸ್ಸಿ ಹಾಗೂ ಸುಂಕನೂರು ಗ್ರಾಮದ ಎಲ್ಲಾ ಜನಾಂಗದ ರುದ್ರಭೂಮಿ, ತೋರಣದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಇತರೆ ಸಮಸ್ಯೆಗಳ ಕುರಿತು ಇಂದು ಭೀಮ್ ಆರ್ಮಿ ಸಂಘಟನೆ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಗತಿಸಿದರೂ ಹಳ್ಳಿಗಳ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಸರಕಾರಗಳು ದಲಿತರ, ಬಡವರ, ಉದ್ಧಾರಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದರು ಕೂಡ ಅಧಿಕಾರಿಗಳ ದಿವ್ಯ ನಿರ್ಲಕ್ಷತೆಯಿಂದ ಹಳ್ಳಿಗಳು ಇನ್ನೂ ಉದ್ಧಾರವಾಗಿಲ್ಲ. ಉಚಿತ ಆರೋಗ್ಯ, ಶಿಕ್ಷಣ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಹೀಗೆ ಮುಂತಾದವುಗಳು ಇದುವರೆಗೂ ದೊರೆತಿಲ್ಲ ಎನ್ನುವುದೇ ಶೋಚನೀಯ ಸಂಗತಿ. ಉದಾ:- ಹಿರೇದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಕನೂರು ಕ್ಯಾಂಪಿಗೆ ಶುದ್ಧ ಕುಡಿಯುವ ನೀರು ಇಲ್ಲದಿರುವುದು ಮತ್ತು ಸಂಕನೂರು, ತೋರಣದಿನ್ನಿ ಗ್ರಾಮದಲ್ಲಿ ಎಸ್ಸಿ ಜನಾಂಗದವರು ಸತ್ತರೆ ಹೂಳಲು ಸ್ಮಶಾನ ಭೂಮಿ ಇಲ್ಲ. ಕುಡಿಯುವ ನೀರಿನ ಬಗ್ಗೆ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಜವಾಬ್ದಾರಿ ಉತ್ತರಗಳು ಬಂದವಿಲ್ಲ ಸಮಸ್ಯೆ ಬಗೆಹರಿಸುವ ಕೆಲಸವಾಗಲಿಲ್ಲ, ಮತ್ತು ಮಸ್ಕಿ ತಾಲೂಕು ಕೇಂದ್ರವಾಗಿ ಹತ್ತು ವರ್ಷಗಳು ಗತಿಸಿದರೂ ಇರುವರೆಗೂ ಒಂದು ತಾಲೂಕು ಆಸ್ಪತ್ರೆ ಇಲ್ಲಾ, ಸ್ವತಃ ಚಿಕಿತ್ಸೆಗಳಿಲ್ಲ, ಗರ್ಭಿಣಿ ಸ್ತ್ರೀಯರು ರಕ್ತಪರೀಕ್ಷೆ, ಸ್ಕ್ಯಾನಿಂಗ್, ಎಕ್ಸರೆ,ತುರ್ತುಚಿಕಿತ್ಸೆ ಈ ಯಾವ ಸೌಲಭ್ಯಗಳು ಕೂಡ ತಾಲೂಕು ಕೇಂದ್ರದಲ್ಲಿ ಇಲ್ಲದಿರುವುದು ನಮ್ಮ ತಾಲೂಕಿನ ಜನರ ದುರ್ದೈವದ ಸಂಗತಿಯಾಗಿದೆ.

CHETAN KENDULI

ಒಂದು ಹೆರಿಗೆ ಮಾಡಿಸಲು ಖಾಸಗಿ ಆಸ್ಪತ್ರೆಗೆ ಹೋದರೆ ಮೂವತ್ತು ಸಾವಿರದಿಂದ ಕನಿಷ್ಠ 40 ಸಾವಿರದವರೆಗೆ ಸಾರ್ವಜನಿಕರು ಬಿಲ್ ಕಟ್ಟುತ್ತಿದ್ದಾರೆ. ಒಂದು ದಿನಕ್ಕೆ ರೂಪಾಯಿ 150 ದುಡಿಯುವ ಕಾರ್ಮಿಕ ಬಡವರು ಇಷ್ಟು ಹಣವನ್ನು ಈ ದುಬಾರಿ ಕಾಲದಲ್ಲಿ ಬಡವರು ಕಟ್ಟಲು ಸಾಧ್ಯವೇ ಎನ್ನುವುದು ತಾವುಗಳು ಯೋಚನೆ ಮಾಡಬೇಕಿದೆ.ತೋರಣದಿನ್ನಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 2018-19 ರಿಂದ 13ನೇ ಹಣಕಾಸು ಯೋಜನೆ, 14ನೇ ಹಣಕಾಸು ಯೋಜನೆ, 15ನೇ ಹಣಕಾಸು ಯೋಜನೆ, ಶಾಸನಬದ್ಧ ವಸೂಲಿ ಅನುದಾನ ಇತರ ಇವುಗಳಲ್ಲಿ ಎಲ್ಲದರಲ್ಲಿ ಕೂಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಕೃಷ್ಣ ಹುನುಗುಂದಾ ರವರು ಸರಕಾರದ ಹಣವನ್ನು ಲೂಟಿ ಮಾಡಿದ್ದಾರೆ. ಪೈಪ್ಲೈನ್ ಮಾಡುವ ಹೆಸರಿನಲ್ಲಿ, ಲೈಟ್ ಹಾಕುವ ಹೆಸರಿನಲ್ಲಿ, ಮೋಟಾರ್ ರಿಪೇರಿ ಹೆಸರಿನಲ್ಲಿ ನಿನಿಗೆ ಅನೇಕ ರೀತಿ ಭೋಗಸ್ ಬಿಲ್ಲುಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದಾರೆ.ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೇಕಡಾ 22% ಅನುದಾನದಲ್ಲಿ ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡುತ್ತಿದ್ದರು. ಆದರೆ ಕೃಷ್ಣ ಪಿ.ಡಿ.ಓ ಬಡ ದಲಿತರ ಮಕ್ಕಳಿಗೆ ಪುಸ್ತಕ ನೀಡದೆ ವಂಚಿಸುತ್ತಿದ್ದಾರೆ. ಎಲ್ಲಾ ಅನುದಾನದಲ್ಲಿ ಎಸ್ಸಿ, ಎಸ್ಟಿ ಗೆ ಮೀಸಲಿಡಬೇಕು ಅನುದಾನದಲ್ಲಿ ಯಾವುದು ಇಲ್ಲದೆ ಮನಸ್ಸೋ ಇಚ್ಛೆ ಬಂದಹಾಗೆ ತಾವೇ ಕಾನೂನುಗಳನ್ನು ಮಾಡಿಕೊಂಡು ಲೂಟಿ ಮಾಡಿದ್ದಾರೆ. ವಿದ್ಯಾರ್ಥಿಗಳು ಪುಸ್ತಕ ಕೇಳಿದರೆ ಅವಾಚ್ಯಶಬ್ದಗಳಿಂದ ಗದರಿಸಿ ಗೂಂಡಾಗಿರಿ ಮಾಡುತ್ತಿದ್ದಾರೆ. ಪ್ರಸ್ತಾಪಿಸಲಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ತಹಶೀಲ್ದಾರರ ಪರವಾಗಿ ತಹಶೀಲ್ದಾರ್ ಕಛೇರಿ ಅಧಿಕಾರಿಯೊಬ್ಬರಿಗೆ ಭೀಮ್ಆರ್ಮಿ ಸಂಘಟನೆಯು ಮನವಿ ಮಾದಿತು. 

 

ಇದೇ ಸಂದರ್ಭದಲ್ಲಿಗಂಗಪ್ಪ ತೊರಣದಿನ್ನಿ, ಹನುಮಂತ ದಿನಸಮುದ್ರ, ಚಾಂದ್ ಪಾಷ ಬೆಳ್ಳಿಗನೂರು, ದೇವರಾಜ ಮಡಿವಾಳ ಮಸ್ಕಿ, ಚಂದ್ರಶೇಖರ್ ಕ್ಯಾತ್ನಟ್ಟಿ, ಬಸವರಾಜ ಬಾಗಲವಾಡ, ಬಸವರಾಜ್ ಹಿರೆದಿನ್ನಿ, ರವಿಕುಮಾರ್ ಸಂಕನೂರ್, ಸೇರಿದಂತೆ ಇನ್ನಿತರರು ಧರಣಿಯಲ್ಲಿ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*