ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿ ಆಸ್ಪತ್ರೆಯಲ್ಲಿ ಡಾಕ್ಟರ್ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ ಅಂದ್ಕೊಂಡ್ರಾ ಇಲ್ಲಿ ನೋಡಿ ವೈದ್ಯರೇ ಇಲ್ಲದೇ ಪರದಾಡುವ ರೋಗಿಗಳ ಸಮಸ್ಯೆ.ತಾಲೂಕಿನ ಸುತ್ತ ಮುತ್ತಲಿನ ಹಳ್ಳಿಗಳ ಜನರು ಚಿಕಿತ್ಸೆಗೆ ಬರುತ್ತಾರೆ ಎಲ್ಲರಿಗೂ ಆರು ಹಾಸಿಗೆ ಆಸ್ಪತ್ರೆಯೇ ಆಸರೆಯಾಗಿದೆ. ತುರ್ತು ಪರಿಸ್ಥಿತಿ ಸಂದರ್ಭ ಒಂದೇ ಅಂಬ್ಯುಲೆನ್ಸ್ ಇದೆ. ಅದು ಶಾಸಕರ ಸ್ಥಳೀಯಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ತನದಂತಹ ಅಂಬ್ಯುಲೆನ್ಸ್ ಅನ್ನು ಇಂದಿಗೆ ತಿಂಗಳುಗಳೇ ಕಳೆದರೂ ಬಳಕೆಗೆ ಬಾರದ ಅಂಬ್ಯುಲೆನ್ಸ್. ಆದರೆ 108 ಅಂಬ್ಯುಲೆನ್ಸ್ ಮಾತ್ರ ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷವಾಗಿದ್ದು, ಅಂಬ್ಯುಲೆನ್ಸ್ ಇದೀಗ ಎಲ್ಲದಕ್ಕೂ ಬಳಕೆ ಆಗುತ್ತಿದೆ. ಆದ್ದರಿಂದ ಈ ಹಿಂದೆ ಹಲವು ಸರಕಾರಿ ವಾಹನಗಳು ತುಕ್ಕು ಹಿಡಿದು ಹೋಗುತ್ತಿವೆ. ಆದ ಕಾರಣ ಅಂಬ್ಯುಲೆನ್ಸ್ ಅನ್ನು ಕಾರ್ಯ ರೂಪಕ್ಕೆ ತರವ ಸಾಹಸವೇ ಮಾಡಿಲ್ಲ.
ಮೂಲೆಗೆ ತಳ್ಳಿದ ವಾಹನ: ತಾಲೂಕು ಆರೋಗ್ಯ ವೈದ್ಯಾಧಿಕಾರಿ ಬಳಸುತ್ತಿರುವ ಸರಕಾರಿ ವಾಹನ ಹಲವು ವರ್ಷಗಳ ಕಾಲ ದುರಸ್ತಿಯಲ್ಲಿರುವ ಕಾರಣ ಮೂಲೆಗೆ ಸೇರಿದೆ. ವೈದ್ಯರು ಸ್ವಂತ ವಾಹನದಲ್ಲೇ ಹಳ್ಳಿಗಳಿಗೆ, ಕೋವಿಡ್ ಲಸಿಕೆ ಮತ್ತು ಇನ್ನಿತರೇ ರೋಗ ಚಿಕಿತ್ಸೆ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಕೆಲ ತಜ್ಞ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಬಡರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ನರರೋಗ, ಕಿವಿ, ಮೂಗು ಗಂಟಲು, ಚರ್ಮ ರೋಗ, ನೇತ್ರ ತಜ್ಞ ಸೇರಿ ವೈದ್ಯರ ಸಮಸ್ಯೆ ಬಡ ರೋಗಿಗಳಿಗೆ ಕಾಡುತ್ತಿದೆ.ತಾಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಕೆಲ ವೈದ್ಯರ ಸಮಸ್ಯೆ ಬಿಗಡಾಯಿಸಿದೆ. ಸಂಭಂಧಿಸಿದ ಅಧಿಕಾರಿಗಳು ಇತ್ತ ಕಡೇ ಗಮನ ಹರಿಸಿ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಾರಾ ಎಂದು ಕಾದುನೋಡಬೇಕಾಗಿದೆ.
“ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದರೆ ವೈದ್ಯರೇ ಇರುವುದೇ ಇಲ್ಲ. ಸಿಬ್ಬಂದಿಯನ್ನು ಕೇಳಿದರೆ ಮೂಖರಂತೆ ವರ್ತಿಸುವರು. ನಿತ್ಯವೂ ಆಸ್ಪತ್ರೆಯ ಮುಂದೆ ವೈದ್ಯರಿಗಾಗಿ ಕಾಯುವ ಸಾರ್ವಜನಿಕರೂ. ಇದಕ್ಕೆ ಪರಿಹಾರ ಸಿಗುವುದಾದರೂ ಯಾವಾಗ..?”ಹೇಳಲು ಮಾತ್ರ ಮಸ್ಕಿ ತಾಲೂಕು, ಆದರೆ ತಾಲೂಕಿನಲ್ಲಿ ಇರುವುದು ಪ್ರಾಥಮಿಕ ಆರೋಗ್ಯ ಕೇಂದ್ರ. ರವಿ ಕುಮಾರ್ಸ್ಥಳೀಯ ನಿವಾಸಿ ಮಸ್ಕಿ,
Be the first to comment