ರಾಜ್ಯ ಸುದ್ದಿಗಳು
ಮಸ್ಕಿ
ಪಟ್ಟಣದ ಬಸವೇಶ್ವರ ನಗರದಲ್ಲಿನ ತಹಶೀಲ್ದಾರರ ಹಾಗೂ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ಕಾರ್ಯಾಲಯದಲ್ಲಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಭೂಮಿಯ ಪ್ರಮಾಣ ಪತ್ರಗಳ ಅರ್ಜಿಯ ಪರಿಶೀಲನೆ ಮತ್ತು ಹಾಗೂ ಹೋಗುಗಳ ಕುರಿತು ಒಂದಿಲ್ಲ ಒಂದು ವಿಚಾರವಾಗಿ ಬರುವ ಶ್ರೀ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವವರು ಯಾರೂ..?
ಕಛೇರಿಯಲ್ಲಿ ವಿಚಾರಿಸಲು ತಹಶೀಲ್ದಾರರೇ ಇಲ್ಲಾ, ಹಾಗೆಯೇ ಈ ಹಿಂದೆ ದೊಡ್ಡಪ್ಪ ರವರು ಭೂ ಹಿಡುವಳಿ ಪ್ರಮಾಣ ಪತ್ರ ವನ್ನು ದಿನಾಂಕ:-16-10-2021 ರಂದು ಆರ್ಜಿ ಸಲ್ಲಿಸಿದ್ದು, ಇದೇ ವಿಚಾರವಾಗಿ ಸಂಭಂಧಿಸಿದ ಅಧಿಕಾರಿಗಳಲ್ಲಿ ವಿಚಾರಿಸಲು ಹೋದರೆ ಅರ್ಜಿದಾರನಿಗೆ ಇನ್ನೂ ಆಗುತ್ತೇ ಇರಪ್ಪಾ…? ಟೈಮ್ ಇಡಿಯುತ್ತೆ. 25 ರಿಂದ 30 ರೂಪಾಯಿಯಲ್ಲಿ ಆಗುವಂತಹ ಕೆಲಸಗಳಿಗೆ 400 ರುಪಾಯಿ ಕರ್ಚು ಮಾಡಿದರೂ ಕೆಲಸವೇ ಆಗುತ್ತಿಲ್ಲ ಎಂದು ಅರ್ಜಿದಾರನಾದ ಶಾಮಿದ್ ಸಾಬ್ ಗುಡಿಹಾಳ ಇವರ ಗೋಳು ಕೇಳೋರುಯಾರು…? ಹಾಗೆಯೇ ದಿನ ನಿತ್ಯವೂ ದೂರದ ಊರಿನಿಂದ ಬರುವ ಸಾರ್ವಜನಿಕರೂ ತಮ್ಮ ಮಕ್ಕಳ ಜೊತೆಗೆ ಬರುವರು. ಊಟ, ನೀರು, ಬಿಸಿಲನ್ನು ಲೆಕ್ಕಿಸದೆ ಸರತಿಯಲ್ಲಿಯೇ ಕಾದು ನಿಂತು ಕೆಲಸವಾಗದೇ ಇದ್ದಾಗ, ಸಾರ್ವಜನಿರು ಕೂಲಿನಾಲಿ ಬಿಟ್ಟು ಇಲ್ಲಿಗೆ ಬಂದರೆ ದಿನವಿಡೀ ಸರ್ವರ್ ದೋಷವಿದೆ, ಅಧಿಕಾರಿ ಬಂದಿಲ್ಲಾ, ಎಂದು ಕಾಲಹರಣ ಮಾಡಿಸುವ ಅಧಿಕಾರಿಗಳು ಸೇರಿದಂತೆ ಇಡೀ ತಹಶೀಲ್ದಾರರ ಕಛೇರಿಗೆ ಶಾಪವನ್ನು ಹಾಕುತ್ತಾ ಹೋಗುವ ಸಾರ್ವಜನಿಕರು.
ಕಂದಾಯ ಇಲಾಖೆಯ ಪ್ರಕಾರ ಕಛೇರಿ ಸಮಯ ನಿಗದಿಪಡಿಸಿದೆಯೋ… ಇಲ್ಲವೋ… ಗೊತ್ತಿಲ್ಲಾ, ಆದರೆ ಕಛೇರಿಗೆ ಬರುವುದೇ ಬೆಳಗ್ಗೆ 10:30 ಯಿಂದ 11 ಗಂಟೆಗೆ ಆದರೂ ಕಛೇರಿಯಲ್ಲಿರುವಷ್ಟು ಸಮಯದಲ್ಲಾದರು ಇರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುವುದನ್ನು ಬಿಟ್ಟು, ಅರ್ಜಿಯ ಪರಿಶೀಲನೆಯನ್ನು ಮಾಡುವುದಕ್ಕೆ ಹಿಂದೇಟು ಹಾಕುವುದಾದರೇ…? ಕಛೇರಿಯಲ್ಲಿರುವುದು ಮತ್ತು ಇಲ್ಲದಿರುವುದು ವ್ಯರ್ಥವೇ ವ್ಯರ್ಥ ಎಂಬುದು ಸಾರ್ವಜನಿಕರ ಅಳಲಾಗಿದೆ.
ಈ ಕಛೇರಿಯ ವಿಶೇಷತೆಯೆಂದರೆ ಮಧ್ಯವರ್ತಿಗಳ ಮೂಲಕ ಬರುವ ಅರ್ಜಿಗಳಿಗೆ ಮಾತ್ರ ಮಾನ್ಯತೆ. ಆದ್ರೇ ಸ್ವತಃ ಅರ್ಜಿದಾರನೇ ಬಂದು ಅರ್ಜಿಯ ಬಗ್ಗೆ ಮಾಹಿತಿ ಪಡೆಯಲು ಬಂದರೆ ಯಾವುದೇ ರೀತಿಯ ಮಾನ್ಯತೆ ನೀಡುವುದಿಲ್ಲ.ಅರ್ಜಿಗಳನ್ನು ಹಾಕಿದ ಅರ್ಜಿದಾರರ ಸಮಸ್ಯೆಗೆ ಸ್ಪಂದಿಸುವವರು ಯಾರು…? ಎಂದು
ಸಾಮಾಜಿಕ ಕಳಕಳಿಯುಳ್ಳ ದಲಿತ ಯುವ ಹೋರಾಟಗಾರ ಮಲ್ಲಿಕ್ ಮುರಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Be the first to comment