ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಲಕಲ್ಲ ನಗರದ ಸ್ಥಳೀಯ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆ ಹಾಗೂ ಶ್ರೀ ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ “ಆಝಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ.ಬದ್ರಶೆಟ್ಟಿಯವರು “ಅರೋಗ್ಯ ಒಂದು ಭಾಗ್ಯ” ಅದನ್ನು ಕಾಪಾಡಿಕೊಂಡು ದೀರ್ಘಕಾಲ ಸು:ಖ, ಸಂತೋಷ ನೆಮ್ಮದಿಯಿಂದ ಬಾಳಬೇಕಾದರೆ ಕ್ರಮಬದ್ಧವಾದ ವ್ಯಾಯಾಮ, ಆಹಾರ ಹಾಗೂ ಶಾಂತವಾದ ಮನಸ್ಸನ್ನು ಹೊಂದಬೇಕು. ಆಯುರ್ವೇದ ಭಾರತೀಯರು ಜಗತ್ತಿಗೆ ನೀಡಿದ ಬಹುದೊಡ್ಡ ಕಾಣಿಕೆಯಾಗಿದೆ. ಪಂಚ ಮಹಾಭೂತಗಳಿಂದ ನಿರ್ಮಾಣವಾದ ಈ ಶರೀರಕ್ಕೆ ವಾತ-ಪಿತ್ತ-ಕಫದಂತಹ ಮೂರು ದೋಷಗಳು ಕಾಡಿದರೆ ಅದರಿಂದ ಹೇಗೆ ಪಾರಾಗಬೇಕೆಂದು ಬಹು ಅಮೂಲ್ಯವಾದ ಸಲಹೆಗಳನ್ನು ನೀಡಿದರು.
ಉತ್ಕೃಷ್ಟ ಉಪನ್ಯಾಸದ ನಂತರ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮಲ್ಲಿ ಅಡಗಿದ ಸಮಸ್ಯಗಳಿಗೆ ವೈದ್ಯರಿಂದ ಪರಿಹಾರ ಕಂಡುಕೊಂಡರು. ಅದ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸಂಗಣ್ಣ ಗದ್ದಿ ಮಾತನಾಡಿ “ಕೂಡಲ ಸಂಗನ ಶರಣರ ಒಲಿಸಬಂದ ಪ್ರಸಾದ ಕಾಯವಿದು ಕೆಡಿಸಲಾಗದು” ಎಂಬ ಅಣ್ಣ ಬಸವಣ್ಣನವರ ವಾಣಿಯಂತೆ ನಾವೆಲ್ಲರೂ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು, ನಿಜವಾಗಿಯೂ ಇದೊಂದು ಉತ್ತಮ ಉಪನ್ಯಾಸ ಎಂದು ಅಭಿಮಾನದಿಂದ ಹೇಳಿದರು.
ಈ ಸಂದರ್ಭದಲ್ಲಿ ಡಾ.ಮಂಜುನಾಥ, ಶಿಕ್ಷಕ/ಶಿಕ್ಷಕಿಯರಾದ ವಿ.ಎಸ್.ಶೆಟ್ಟರ, ಎಂ.ಎಸ್. ಕುಲಕರ್ಣಿ, ಸುಮಂಗಲಾ ಜೋಗಿನ, ವಿಜಯಲಕ್ಷ್ಮಿ ಲಾಳಿ, ಗೀತಾಂಜಲಿ, ಸುಮಾ ಪಾಟೀಲ ಸಿಬ್ಬಂದಿಯವರಾದ ಯು.ಎಚ್.ಸಾಕ್ರೆ, ಸುಶೀಲಾ ರಾಠೋಡ, ಬಸು ಲಾಳಿ ಹಾಗೂ ಶಾಲೆಯ ೮,೯ ಮತ್ತು ೧೦ನೇ ತರಗತಿಯ ವಿದ್ಯಾರ್ಥಿನಿಯರು ಬಹಳ ಶಾಂತಿ ಹಾಗೂ ಶಿಸ್ತಿನಿಂದ ಭಾಗವಹಿದ್ದರು.
Be the first to comment