ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹುನಗುಂದ ವತಿಯಿಂದ ಹುನುಗುಂದ (ಹೊಸ), ಹುನಗುಂದ(ಹಳೆ),ಇಲಕಲ್ಲ, ಕಂದಗಲ್, ಮರೋಳ,ಸೂಳೆಭಾವಿ,ವಡಗೇರಿ, ಗುಡೂರ ಮತ್ತು ಬೇವಿನಮಟ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರವ ಮೆಟ್ರಿಕ್ ಪೂರ್ವ ಬಾಲಕರ /ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಖಾಲಿ ಇರುವ ವಿದ್ಯಾರ್ಥಿಗಳ ಸ್ಥಾನಗಳಿಗೆ ಹೊಸದಾಗಿ ಸೇರಬಯಸುವ ವಿದ್ಯಾರ್ಥಿ ಗಳಿಗೆ ಅನ್ ಲೈನ್ ಮ‌ೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ೧೫/೧೧/೨೦೨೧ ರವರಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹುನಗುಂದ ನಗರದ ವಾರ್ಡ ನಂ.೧೦ ಮೇಗಲ್ ಪೇಟೆಯ ರಾಜೀವ ಗಾಂದಿ ಶಾಲೆಯ ಹಿಂಭಾಗದಲ್ಲಿರುವ ತಾಲೂಕ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ ಎನ್ ಖ್ಯಾಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Be the first to comment

Leave a Reply

Your email address will not be published.


*