ಗಮನಿಸಿ:ನವಂಬರ್ 20ರ ವರೆಗೆ ‘ಹಿಂದುಳಿದ ವರ್ಗಗಳ ವಸತಿ ನಿಲಯ’ಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹುನಗುಂದ ವತಿಯಿಂದ ಕಾರ್ಯ ನಿರ್ವಹಿಸುತ್ತಿರವ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಹುನಗುಂದ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯ ಇಲಕಲ್ಲ ಮತ್ತು ಹುನಗುಂದಗಳಲ್ಲಿ ಖಾಲಿ ಇರುವ ವಿದ್ಯಾರ್ಥಿಗಳ ಸ್ಥಾನಗಳಿಗೆ ಹೊಸದಾಗಿ ಸೇರಬಯಸುವ ವಿದ್ಯಾರ್ಥಿ ಗಳಿಗೆ ಅನ್ ಲೈನ್ ಮ‌ೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ೨೦/೧೧/೨೦೨೧ ರವರಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ

www.bcwd.karnataka.gov.in ನ್ನು ಅಥವಾ ಹುನಗುಂದ ನಗರದ ವಾರ್ಡ ನಂ.೧೦ ಮೇಗಲ್ ಪೇಟೆಯ ರಾಜೀವ ಗಾಂದಿ ಶಾಲೆಯ ಹಿಂಭಾಗದಲ್ಲಿರುವ ತಾಲೂಕ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ ಎನ್ ಖ್ಯಾಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Be the first to comment

Leave a Reply

Your email address will not be published.


*