ಗ್ರಾಮ ಪಂಚಾಯತಿ : ಆರೋಗ್ಯ ಅಮೃತ ಅಭಿಯಾನ:ಕೋವಿಡ್ ಕಿಟ್ ಸದುಯೋಗಕ್ಕೆ ಶಾಸಕ ಚರಂತಿಮಠ ಕರೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡ ಆರೋಗ್ಯ ಅಮೃತ ಅಭಿಯಾನದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಕಾರ್ಯಪಡೆಗಳಿಗೆ ಶಾಸಕ ವೀರಣ್ಣ ಚರಂತಿಮಠ ಕೋವಿಡ್ ಕಿಟ್‍ಗಳನ್ನು ವಿತರಿಸಿದರು.

ತಾಲೂಕಾ ಪಂಚಾಯತ ಸಭಾಭವನದಲ್ಲಿಂದು ಕರ್ನಾಟಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಹೆಲ್ತ ಪ್ರಮೋಷನ್ ಟ್ರಸ್ಟ್ ಸಹಯೋಗದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಕೋವಿಡ್ ಕಿಟ್ ವಿತರಿಸಿ ಮಾತನಾಡಿದ ಅವರು ಆರೋಗ್ಯಕ್ಕೆ ತಪಾಸಣೆಗೆ ಸಂಬಂಧಿಸಿದ ವಿವಿಧ ಉಪಕರಣ ಗಳನ್ನೊಳಗೊಂಡ ಕಿಟ್‍ಗಳನ್ನು ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ನೀಡಲಾಗುತ್ತಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಕೋವಿಡ್ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಆರೋಗ್ಯ ತಪಾಣೆಗೆ ಕಿಟ್‍ನ್ನು ನೀಡಿದ್ದು, ತಮ್ಮ ತಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಜನರ ಆರೋಯ ತಪಾಸಣೆ ಕೈಗೊಳ್ಳಬೇಕು. ತಪಾಸಣೆ ಮಾಡಲು ಆರೋಗ್ಯ ಇಲಾಖೆಯವರು ಬಂದಾಗಿ ಗ್ರಾಮೀಣ ಜನರನ್ನು ಆರೋಗ್ಯ ತಪಾಸಣೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಗ್ರಾ.ಪಂ ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಜವಾಬ್ದಾರಿ ವಹಿಸುವ ಅಗತ್ಯವಿವೆ ಎಂದರು.

ಆರೋಗ್ಯ ಇಲಾಖೆಯ ಲಾಲಪ್ಪ ಪಮ್ಮಾರ ಗ್ರಾಮ ಪಂಚಾಯತ ಕಾರ್ಯಪಡೆಗಳ ಸಿಬ್ಬಂದಿಗಳಿಗೆ ವಿತರಿಸಲಾದ ಕೋವಿಡ್ ಕಿಟ್‍ನಲ್ಲಿರುವ ಆರೋಗ್ಯ ತಪಾಸಣೆಯ ಪ್ರತಿಯೊಂದು ಉಪಕರಣಗಳ ಬಳಕೆಯ ಬಗ್ಗೆ ಸಂಪೂರ್ಣ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನದ ಕಲ್ಲಾಪೂರ, ಆರೋಗ್ಯ ಇಲಾಖೆಯ ಡಾ.ರಾಹುಲ್ ಸೇರಿದಂತೆ ಬಾಗಲಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*