ಬೆಂಗಳೂರುಗೆ ಬೆಳಕು ಚಲಿದ ಒಕ್ಕಲಿಗರಿಗೆ ಮೇಯರ ಸ್ಥಾನ ನೀಡಿ:: ಒಕ್ಕಲಿಗ ಸಂಘಟನೆಗಳ ಆಗ್ರಹ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


  ರಾಜಕೀಯ ಸುದ್ದಿಗಳು


ಬೆಂಗಳೂರು:(ಸೆ:22)ಒಕ್ಕಲಿಗ ಕುಲತಿಲಕ ಕೆಂಪೇಗೌಡರಿಂದ ನಿರ್ಮಾಣವಾದ ಬೆಂಗಳೂರು ಮಹಾನಗರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳಲು ಒಕ್ಕಲಿಗ ಸಮುದಾಯದವರ ತ್ಯಾಗ, ಅಪಾರ ಕೊಡುಗೆಯಿದೆ. ರಾಜಧಾನಿಯ ಬೆಳವಣಿಗೆಗೆ ಸಮುದಾಯ ಸರ್ವಸ್ವವನ್ನೂ ಅರ್ಪಿಸಿದೆ. ಸಾವಿರಾರು ಎಕರೆ ಫಲವತ್ತಾದ ಭೂಮಿ, ಬಾಳಿ ಬದುಕಿದ ನೆಲವನ್ನು ನೀಡಿರುವುದಲ್ಲದೆ ನಗರೀಕರಣದ ಸುಳಿಗೆ ಸಿಲುಕಿ ಅನೇಕ ಕಷ್ಟನಷ್ಟ ಅನುಭವಿಸಿದೆ.

ರಾಜಾಳ್ವಿಕೆ ಹಾಗೂ ಪ್ರಜಾಪ್ರಭುತ್ವ ಬಂದ ನಂತರವೂ ಸಮುದಾಯ ನಗರದ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಂಡಿದೆ. ಜನಾಂಗದ ಆಡಳಿತಕಾರರು ಕೂಡಾ ಬೆಂಗಳೂರನ್ನು ಅಗಾಧವಾಗಿ ಅಭಿವೃದ್ದಿಪಡಿಸಿ ಬೆಳೆಸಿದ್ದಾರೆ. ಸರ್ವ ಜನಾಂಗಗಳೊಂದಿಗೆ ವಕ್ಕಲಿಗರು ಬೆರೆತು ಸೌಹಾರ್ದಯುತ, ಶಾಂತಿ ಸುವ್ಯವಸ್ಥೆಯ ವಾತಾವರಣ ಸೃಷ್ಟಿಗೆ ಕೈಜೋಡಿಸಿದ್ದಾರೆ. ಇಂತಹ ಬೆಂಗಳೂರಿನಲ್ಲಿ ಇದೀಗ ಸಮುದಾಯವನ್ನು ರಾಜಕೀಯವಾಗಿ ಮುಗಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂಬ ಭಾವನೆ ನಮ್ಮಲ್ಲಿ ಮೂಡಿದೆ. ಕಳೆದ 17 ವರ್ಷಗಳಿಂದ ಮಹಾನಗರದ ಆಡಳಿತ, ಪ್ರಥಮ ಪ್ರಜೆ ಮೇಯರ್ ಪಟ್ಟ ಒಕ್ಕಲಿಗರಿಗೆ ಸಿಕ್ಕಿಲ್ಲ.

ಈ ಬಾರಿ ಒಕ್ಕಲಿಗರಿಗೆ ನೀಡುವಂತೆ ರಾಜಕೀಯ ಪಕ್ಷಗಳ ಮೇಲೆ ಸಮುದಾಯದ ಹಕ್ಕೊತ್ತಾಯವನ್ನು ಬೆಂಗಳೂರುನಲ್ಲಿ ಸುದ್ದಿ ಗೋಷ್ಠಿ ಮಾಡಿ ಮಂಡಿಸಿದರು ಈ‌ ಸಂದರ್ಭದಲ್ಲಿ ಒಕ್ಕಲಿಗರ . ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ. ನಾಗರಾಜ್, ಸಮಾಜ ಹಿರಿಯ ಮುಖಂಡರು ಸಮಾಜದ ಹಿತೈಷಿಗಳು ಹಾಜರಿದ್ದರು

Be the first to comment

Leave a Reply

Your email address will not be published.


*