ರಾಜ್ಯ ಸುದ್ದಿಗಳು
ಬೆಂಗಳೂರು: ಕೇಂದ್ರ ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) ಅನ್ವಯ ಸೆ. 3ರಿಂದ ಹೆಚ್ಚಳಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಪರಿಸ್ಕರಿಸಿ ರಾಜ್ಯ ಸರ್ಕಾರ ಶನಿವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಸಂಚಾರ ನಿಯಮ ಉಲ್ಲಂಘನೆ; ರಾಜ್ಯ ಸರ್ಕಾರ ಪರಿಷ್ಕರಿಸಿದ ದಂಡ
ನಿಯಮ ಉಲ್ಲಂಘನೆ; ದಂಡದ ಮೊತ್ತ (₹ಗಳಲ್ಲಿ)
1; ಟಿಕೆಟ್ ಇಲ್ಲದೆ ಪ್ರಯಾಣ; ₹ 500
2; ಮಾಹಿತಿ ನೀಡದಿದ್ದರೆ; ₹ 1,000
3; ಅನಧಿಕೃತ ವ್ಯಕ್ತಿಗಳಿಗೆ ವಾಹನ ನೀಡಿದ ಮಾಲೀಕನಿಗೆ; ದ್ವಿ ಚಕ್ರ– ₹ 1,000, ಲಘು–₹ 2,000, ಇತರ–₹ 5,000
4; ಅನಧಿಕೃತ ವ್ಯಕ್ತಿಯಿಂದ (ನಿಗದಿತ ವಯಸ್ಸು ಆಗದೆ) ವಾಹನ ಚಾಲನೆ; ದ್ವಿ ಚಕ್ರ– ₹ 1,000, ಲಘು–₹ 2,000, ಇತರೆ–₹ 5,000
5; ಪರವಾನಿಗೆ ಸಂಬಂಧಿಸಿದ ನಿಯಮ ಉಲ್ಲಂಘನೆ; ₹ 10 ಸಾವಿರ
6; ನೋಂದಣಿ ಸಂಖ್ಯೆ ತಿರುಚುವುದು; ₹ 1 ಲಕ್ಷ
7; ಆಕಾರ ಬದಲಿಸಿದ ವಾಹನಗಳ ನೋಂದಾಯಿಸಿದ ಸಾರಿಗೆ ಇನ್‌ಸ್ಪೆಕ್ಟರ್‌ಗಳಿಗೆ; ₹ 10,000
8; ಅತಿವೇಗ ಚಾಲನೆ; ದ್ವಿ ಚಕ್ರ, ತ್ರಿ ಚಕ್ರ, ಲಘು– ₹ 1,000, ಭಾರಿ–₹ 2,000
9; ಅಪಾಯಕಾರಿ ಚಾಲನೆ; ಪ್ರಥಮ ಬಾರಿಗೆ ( ದ್ವಿ ಚಕ್ರ, ತ್ರಿ ಚಕ್ರ)– ₹ 1500; ಲಘು– ₹ 3000, ಇತರೆ – ₹ 5000. ಎರಡನೇ ಬಾರಿಗೆ– ₹ 10,000
10; ದೈಹಿಕ ಸಮರ್ಥರಿಲ್ಲದೆ ಚಾಲನೆ; ಪ್ರಥಮ– ₹ 1000. ಎರಡನೇ ಬಾರಿ– ₹ 2,000
11; ರೇಸಿಂಗ್; ಪ್ರಥಮ– ₹ 5000. ಎರಡನೇ– ₹ 10,000
12; ಸುರಕ್ಷಿತವಲ್ಲದ ವಾಹನಗಳ ಚಾಲನೆ; ದ್ವಿ ಚಕ್ರ, ತ್ರಿ ಚಕ್ರ– ₹ 1,500; ಇತರೆ– ₹ 3,000. ವಾಯುಮಾಲಿನ್ಯಕ್ಕೆ– ದ್ವಿ ಚಕ್,ತ್ರಿ ಚಕ್ರ– ₹ 1,500. ಇತರೆ– ₹ 3,000. ಶಬ್ಧಮಾಲಿನ್ಯಕ್ಕೆ – ದ್ವಿ ಚಕ್ರ, ತ್ರಿ ಚಕ್ರ–₹ 1,500. ಇತರೆ– ₹ 3,000.
13; ನೋಂದಣಿ ಮಾಡಿಸದೆ ಚಾಲನೆ; ದ್ವಿ ಚಕ್ರ, ತ್ರಿ ಚಕ್ರ–₹ 2,000. ಲಘು–₹ 3,000. ಇತರೆ–₹ 5,000.
14; ಪರ್ಮಿಟ್ ಇಲ್ಲದೆ ಚಾಲನೆ; ಪ್ರಥಮ–₹ 5000. ಎರಡನೇ–₹ 10,000
15; ಹೆಚ್ಚು ಭಾರ ಸಾಗಣೆ; ₹ 5,000, (ಪ್ರತಿ ಟನ್‌ಗೆ ₹ 2,000)
16; ಹೆಚ್ಚು ಪ್ರಯಾಣಿಕರು; ಪ್ರಯಾಣಿಕನಿಗೆ ತಲಾ ₹ 200
17; ಸೀಟ್ ಬೆಲ್ಟ್ ಇಲ್ಲದಿದ್ದರೆ; ₹ 500
18; ಹೆಲ್ಮೆಟ್ ರಹಿತ ಚಾಲನೆ (ಸವಾರ/ ಹಿಂಬದಿ ಸವಾರ); ತಲಾ ₹ 500
19; ಹೆಲ್ಮೆಟ್ ರಹಿತ ಚಾಲನೆ; ₹ 500
20; ತುರ್ತು ವಾಹನಗಳಿಗೆ ದಾರಿ ಬಿಡದಿರುವುದು; ₹ 1,000
21; ನಿಶ್ಯಬ್ಧವಲಯದಲ್ಲಿ ಶಬ್ಧ ಮಾಡಿದರೆ; ದ್ವಿ ಚಕ್ರ, ತ್ರಿ ಚಕ್ರ–₹ 500. ಇತರೆ– ₹ 1,000
22 ವಿಮೆ ಇಲ್ಲದ್ದಕ್ಕೆ; ದ್ವಿ ಚಕ್ರ, ತ್ರಿ ಚಕ್ರ–₹ 1,000. ಲಘು– ₹ 2,000. ಇತರೆ– ₹ 4,000
23; ಏಕಮುಖ ರಸ್ತೆಯಲ್ಲಿ ಚಾಲನೆ; ₹ 1,000
24; ಸಾಮಾನ್ಯ ನಿಯಮ ಉಲ್ಲಂಘನೆಗಳಿಗೆ; ಪ್ರಥಮ– ₹ 500. ಎರಡನೇ ಬಾರಿಗೆ– ₹ 1,000
ಮೋಟಾರು ವಾಹನ (ತಿದ್ದುಪಡಿ) ಮಸೂದೆ ಜಾರಿ ಬರುತ್ತಿದ್ದಂತೆ ರಾಜ್ಯದ ಎಲ್ಲೆಡೆ ಸಂಚಾರಿ ಪೊಲೀಸರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಭಾರಿ ಮೊತ್ತದ ದಂಡ ವಿಧಿಸುತ್ತಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಜೋರು ಚರ್ಚೆ ನಡೆಯಿತು. ದಂಡದ ಪ್ರಮಾಣವನ್ನು ಇಳಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡವೂ ಹೆಚ್ಚಾಗಿತ್ತು. ಹಲವರು ದಂಡ ಮೊತ್ತ ಹೆಚ್ಚಳ ಕ್ರಮವನ್ನು ಸ್ವಾಗತಿಸಿದ್ದರು.
Be the first to comment