ಮಗುವನ್ನು ಕಚ್ಚಿಕೊಂಡು ಹೋಗಲು ಹೊಂಚುಹಾಕುತ್ತಿದ್ದ ಚಿರತೆ : ಸ್ವಲ್ಪದರಲ್ಲೇ ಬಚಾವಾದ ಮಗು…!!!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕುಮಟಾ:

CHETAN KENDULI

ಬರ್ಗಿಯ ನಾರಾಯಣ ನಾಯ್ಕ ಎನ್ನುವವರ ಮನೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯ ಹಿಂಬದಿಯ ತೆರೆದ ಬಾಗಿಲಿನ ಮೂಲಕ ಬಂದ ಚಿರತೆ, ಒಳಗೆ ಆಟವಾಡುತ್ತಿದ್ದ ಮಗುವನ್ನು ಕಚ್ಚಿಕೊಂಡು ಹೋಗಲು ಹೊಂಚು ಹಾಕಿ ಮೆಲ್ಲಗೆ ನಡೆದು ಬರುತ್ತಿದ್ದ ಹೊಂಚುಹಾಕುತ್ತಿದ್ದ ಚಿರತೆಯನ್ನು ಪಾಲಕರು ಓಡಿಸಿ ಮಗುವನ್ನು ರಕ್ಷಿಸಿದ್ದಾರೆ. ಚಿರತೆಯ ಸಂಚಾರದಿಂದ ಆತಂಕಗೊಂಡಿರುವ ಸ್ಥಳೀಯರು ಅದನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಮನೆಯ ದುರಸ್ತಿ ಕೆಲಸ ನಡೆಯುತ್ತಿದ್ದ ಕಾರಣ ಹಿಂಬದಿ ಬಾಗಿಲು ತೆರೆದೇ ಇತ್ತು. ಚಿರತೆ ಕಳ್ಳ ಹೆಜ್ಜೆಯಿಟ್ಟು ಮಗುವಿನತ್ತ ಬರುವುದ‌ನ್ನು ನೋಡಿದ ನನ್ನ ಮಗಳು ಜೋರಾಗಿ‌ ಕಿರುಚಿ ಮಗುವನ್ನು ಬಾಚಿಕೊಂಡು ಬಂದಳು. ಆದರೆ, ಚಿರತೆ‌ ಮಾತ್ರ ಅಲ್ಲಿಂದ ಕದಲಲಿಲ್ಲ. ನಾವೆಲ್ಲ‌ ದೊಣ್ಣೆ ತೆಗೆದುಕೊಂಡು ಬಂದು ಕೂಗಾಡಿದಾಗ ಚಿರತೆ ನಿಧಾನವಾಗಿ‌ ಹಿಂದೆ ಸರಿದು ಹೊರಗೆ ಹೋಯಿತು. ಅರಣ್ಯ‌ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ’ ಎಂದರು.

ಈ‌ ಪ್ರದೇಶ ಕಾಡಿಗೆ‌ ಸಮೀಪ ಇರುವುದರಿಂದ ಇಲ್ಲಿ ಚಿರತೆಗಳು ಸಂಚರಿಸುತ್ತಿರುತ್ತವೆ. ಕಳೆದ ವರ್ಷ ಬಾವಿಯೊಳಗೆ ಚಿರತೆಯೊಂದು‌ ಬಿದ್ದಿತ್ತು’ ಎಂದರು. ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ನರೇಶ್, ‘ಘಟನೆಯ ಬಗ್ಗೆ ಸ್ಥಳೀಯರು ಶನಿವಾರ ಮಾಹಿತಿ ನೀಡಿದ್ದಾರೆ. ಬರ್ಗಿಯಿಂದ 5 ಕಿ.ಮೀ. ದೂರದ ಪಡುವಣಿ ಹಾಗೂ ಗೋಕರ್ಣದಲ್ಲೂ ಚಿರತೆ ಬಂದಿದ್ದ ಕಾರಣ ಬೋನು ಸದ್ಯ ಗೋಕರ್ಣದಲ್ಲಿದೆ. ಅದನ್ನು ತಕ್ಷಣ ತಂದು ಬರ್ಗಿಯಲ್ಲಿ ಇಡಲಾಗುವುದು. ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Be the first to comment

Leave a Reply

Your email address will not be published.


*