ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧ: ಮತ್ತೊಮ್ಮೆ ಪರಿಶೀಲನೆಗೆ ಮುಂದಾದ ಪರಿಸರ ಇಲಾಖೆ …!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು

ಹೊನ್ನಾವರ:

CHETAN KENDULI

ವಾಣಿಜ್ಯ ಬಂದರು ವಿಸ್ತರಣೆಯ ಸಾಗರಮಾಲಾ ಯೋಜನೆ ಕಾರವಾರದ ಮೀನುಗಾರರಿಂದ ಸಾಕಷ್ಟು ವಿರೋಧಕ್ಕೆ ಗುರಿಯಾಗಿತ್ತು. ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಕೈಬಿಡುವಂತೆ ಮೀನುಗಾರರು ರಸ್ತೆಗಿಳಿದು ತೀವ್ರ ಹೋರಾಟ ನಡೆಸಿದ್ದರು. ಪರಿಣಾಮ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಪರಿಸರ ಇಲಾಖೆ ಸ್ಥಳೀಯವಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಲು ಮುಂದಾಗಿದೆ. ಈ ವೇಳೆ ಮೀನುಗಾರರು ಯೋಜನೆಯನ್ನು ವಿರೋಧಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ.

ತಾಲ್ಲೂಕಿನ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲಾಗುತ್ತಿರುವ ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಕಾಸರಕೋಡ ಗ್ರಾಮದ ಹತ್ತಕ್ಕೂ ಹೆಚ್ಚು ಸಂಘಟನೆಗಳು, ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ನೂರಾರು ಸಂಖ್ಯೆಯ ಮಹಿಳೆಯರು ಮಕ್ಕಳು ಸಾರ್ವಜನಿಕರು, ಬುಧವಾರ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ರವರ ನೇತೃತ್ವದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶ್ರೀ ಬ್ರಜೇಶಕುಮಾರ್ IಈS. ರವರನ್ನು ಭೇಟಿ ಮಾಡಿ ಕಾಸರಕೋಡಿನ ವಾಣಿಜ್ಯ ಬಂದರು ಕಾಮಗಾರಿ ಯೋಜನೆಯನ್ನು ಕೈಬಿಡುವಂತೆ ವಿನೂತನ ಮಾದರಿಯ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸ್ವಾಗತಿಸಿ, ೨೫ಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಿ ಅಭಿವೃದ್ಧಿಯ ಹೆಸರಿನಲ್ಲಿ ಶುದ್ಧ ಪರಿಸರವನ್ನು ಹಾಳು ಮಾಡುವ, ಮೀನುಗಾರರ ಬದುಕನ್ನು ಹೊಸಕಿಹಾಕುವ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರುವ ಪ್ರಯತ್ನಗಳು ಆಗುತ್ತಿದೆ. ಇದು ಸರಿಯಲ್ಲ ಎನ್ನುವುದನ್ನು ಜಾತಾ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಬ್ರಜೇಶಕುಮಾರ್ ಅವರ ಗಮನಸೆಳೆದ ವಿದ್ಯಮಾನ ಇಂದು ಸಂಜೆ ಕಾಸರಕೋಡ ಇಕೋ ಬೀಚ್ ಹತ್ತಿರ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ನಡೆಯಿತು .

ಒಟ್ಟಾರೇ ಬಂದರು ವಿಸ್ತರಣೆ ಹೆಸರಿನಲ್ಲಿ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸುವುದರೊಂದಿಗೆ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ಮೀನುಗಾರರ ಬೇಡಿಕೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಮಾಹಿತಿ ಪಡೆದುಕೊಂಡ ಪರಿಸರ ಇಲಾಖೆ ಯಾವ ವರದಿ ನೀಡಲಿದೆ ಎನ್ನುವುದನ್ನು ಕಾದುನೋಡಬೇಕು.

ಮನವಿ ನೀಡುವ ನಿಯೋಗದಲ್ಲಿ ಚಂದ್ರಕಾಂತ ಕೊಚರೇಕರ,ಕಡಲ ವಿಜ್ಞಾನಿ ಪ್ರಕಾಶ್ ಮೇಸ್ತ, ಗಣಪತಿ ತಾಂಡೇಲ, ಜಗದೀಶ್ ತಾಂಡೇಲ್, ರಾಜೇಶ್ ತಾಂಡೇಲ್, ವಿವನ್ ಫರ್ನಾಂಡಿಸ್, ಅಹ್ಮದ್ ಕೋಯಾ,ರೇಣುಕಾ ತಾಂಡೇಲ, ರೇಣುಕಾ ಗಣಪತಿ ತಾಂಡೇಲ, ಪ್ರೀತಿ ತಾಂಡೇಲ್, ಸೇರಿದಂತೆ ನೂರಾರು ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*