ಜಿಲ್ಲಾ ಸುದ್ದಿಗಳು
ಮಸ್ಕಿ:
ಬಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ನಂಜಲದಿನ್ನಿ ಯಿಂದ ಮೇರಿನಾಳ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಸುಮಾರು ಒಂದರಿಂದ ಎರಡು ಕಿಲೋ ಮೀಟರ್ ವರೆಗೂ ಅಲ್ಲಲ್ಲಿ ರಸ್ತೆಯೂ ಕೆಸರು ಗದ್ದೆಯಂತಿದೆ. ಇಂತಹ ರಸ್ತೆಯಲ್ಲಿ ವಾಹನಗಳು ದಾಟುವುದು ಏನು ಸಾರ್ವಜನಿಕರೇ ಬರಿಗಾಲಿನಲ್ಲಿ ಹೋಗಲು ಕೂಡಾ ಸಾಧ್ಯವಿಲ್ಲ.
ಇಂತಹ ರಸ್ತೆಯೂ ಇದ್ದರು ಇಲ್ಲದಂತಾಗಿದೆ, ಸಂಬಂಧಪಟ್ಟ ಅಧಕಾರಿಗಳೇ ಇತ್ತ ಕಡೆ ಗಮನ ಹರಿಸಿ ನೋಡಿ ಈ ರಸ್ತೆಯ ಅವಸ್ಥೆಯನ್ನು ನಿಮ್ಮ ದಿವ್ಯ ನಿರ್ಲಕ್ಷ್ಯದಿಂದ ಸಾವಿರಾರು ಜನರು ತೊಂದರೆ ಅನುಭವಿಸುವಂತಾಗಿದೆ. ಈ ಮಾರ್ಗವಾಗಿ ಹೋಗುವ ಎಲ್ಲಾ ಸಾರ್ವಜನಿಕರೂ ಕೆಸರುಗದ್ದೆಯಂತಿರುವ ಈ ರಸ್ತೆಯನ್ನು ದಾಟುತ್ತಾ ಸಂಬಂಧ ಪಟ್ಟ ಅಧಿಕಾರಿಗಾಳಿಗೆ ಶಾಪ ಹಾಕುತ್ತಾ ತೆರಳುವ ದುಸ್ಥಿತಿ ಉಂಟಾಗಿದೆ.
“ದಿನ ನಿತ್ಯವೂ ನಂಜಲದಿನ್ನಿ-ಮೇರಿನಾಳ ಗ್ರಾಮದ ಮಾರ್ಗವಾಗಿ ಹೋಗುವ ವಾಹನ ಸವಾರರೆಲ್ಲರೂ ಗದ್ದೆಯ ಹೊಲದಲ್ಲಿ ವಾಹನ ಚಲಾಯಿಸಿದಂತಾಗುತ್ತದೆ. ಸುತ್ತ ಮುತ್ತಲಿನ ಗ್ರಾಮಸ್ತರ ಕಷ್ಟವನ್ನು ಅರಿತು ಮಸ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್. ಬಸನಗೌಡ ತುರುವಿಹಾಳ ರವರು ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ರಸ್ತೆ ನಿರ್ಮಿಸಿ ಕೊಡಬೇಕೆಂದು ತಮ್ಮಲ್ಲಿ ವಿನಮ್ರ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.”
-ಹುಲುಗಪ್ಪ ಅಡವಿಭಾವಿ ಡಿ. ಎಸ್. ಎಸ್ ತಾಲೂಕ ಘಟಕ ಉಪಾಧ್ಯಕ್ಷರು ಮಸ್ಕಿ,
ವರದಿ:ಗ್ಯಾನಪ್ಪ ದೊಡ್ಡಮನಿ ಮಸ್ಕಿ,
Be the first to comment