ಸೆಪ್ಟೆಂಬರ್ 22 ರಂದು ಬೆಂಗಳೂರುನಲ್ಲಿ ಜೇನುಗೂಡು ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


    ರಾಜ್ಯ ಸುದ್ದಿಗಳು



   ಬೆಂಗಳೂರು:: (ಸೆ:19)   ಜೇನುಗೂಡು   ವಿಶ್ವಕರ್ಮ ಬಳಗದ ವತಿಯಿಂದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮವು ಭಾನುವಾರ ಸೆಪ್ಟೆಂಬರ್ 22 ರಂದು ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ನಂದಿನಿ ಬಡಾವಣೆ, ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಉತ್ತರ ಭಾರತದಲ್ಲಿ ವಿಶ್ವಕರ್ಮ ಮಹೋತ್ಸವವನ್ನು ಪ್ರತಿ ರಾಜ್ಯದಲ್ಲಿ ವಿಶೇಷವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಉತ್ಸವವು ದಕ್ಷಿಣ ಭಾರತದಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿದೆ.
ಭಾರತದಲ್ಲಿ ಅಸಂಖ್ಯಾತ ಜಾತಿ ಸಮುದಾಯಗಳಿಗೆ ತನ್ನದೇ ಆದ ಶಿಲ್ಪ ಮತ್ತು ಕರಕುಶಲ ಕ್ಷೇತ್ರದಲ್ಲಿ ಸೇವೆಗಳನ್ನು ಮಾಡಿಕೊಡುವ “ವಿಶ್ವಕರ್ಮ” ಸಮುದಾಯವೂ ಒಂದು. ಕಬ್ಬಿಣನ, ಮರ, ಕಂಚು, ಬಂಗಾರ ಮತ್ತು ಶಿಲೆಗಳನ್ನು ಆಧರಿಸಿ ಗುಡಿಗೋಪುರಗಳನ್ನು ಆರಂಭಿಸಿ, ತಮ್ಮ ಕಲಾ ನೈಪುಣ್ಯತೆಯಿಂದ ಸೌಧಗಳನ್ನು ನಿರ್ಮಿಸಿಕೊಡುತ್ತಾ, ರೈತಾಪಿ ಜನರ ಕೃಷಿ ಸಲಕರಣೆ ಮಾಡುತ್ತಾ ಸರ್ವ ಜನಾಂಗದ ನೆಚ್ಚಿನ ಸಮುದಾಯ ವಿಶ್ವಕರ್ಮ ಸಮುದಾಯವಾಗಿರುತ್ತದೆ.
ಈ ಸಮುದಾಯದ ಮೂಲ ಪುರುಷ ಶ್ರೀ ಭಗವಾನ್ ವಿಶ್ವಕರ್ಮ, ತ್ರೇತಾಯುಗದಲ್ಲಿ ಲಂಕಾಪಟ್ಟಣ, ದ್ವಾಪರಯುಗದ ಮಹಾಭಾರತದಲ್ಲಿ ಉಲ್ಲೇಖ ಏರುವ ಧ್ವಾರಕಾನಗರವನ್ನು ನಿರ್ಮಿಸಿದವರು ಎಂಬ ಪ್ರತೀತಿ ಹಿಂದೂ ಪುರಾಣದಲ್ಲಿ ಉಲ್ಲೇಖವಾಗಿದೆ ವಿಶ್ವಕರ್ಮ ಜಯಂತೋತ್ಸವ ಅಂಗವಾಗಿ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಜಾನಪದ ತಂಡದೊಂದಿಗೆ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ವಿಶ್ವಕರ್ಮ ಮೂರ್ತಿ ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಸನ್ಮಾನ್ಯ ಡಿ.ವಿ.ಸದಾನಂದಗೌಡರು ಹಾಗೂ ಮಾನ್ಯ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ನೆರವೇರಿಸಲಿದ್ದಾರೆ.
ದಿವ್ಯ ಸಾನಿಧ್ಯ ಮತ್ತು ಆಶೀರ್ವಚನ ಪರಮಪೂಜ್ಯ ಶ್ರೀ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಶ್ರೀ ಆದಿಲಕ್ಷ್ಮೀ ಸಂಸ್ಥಾನ ಹಾಗೂ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸೂರ್ಯನಾರಾಯಣ ಸ್ವಾಮೀಜಿ ವಿಶ್ವಕರ್ಮ ಏಕದಂದಿಗೆ ಮಠ.
ಅಧ್ಯಕ್ಷತೆ ವಹಿಸುವರು ಗೋಪಾಲಯ್ಯನವರು ಶಾಸಕರು ಮಹಾಲಕ್ಷ್ಮಿ ಲೇಔಟ್.
ಧ್ವಜಾರೋಹಣ ಎಸ್.ಹರೀಶ್ ಮಾಜಿ ಮಹಾಪೌರರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಾಗೂ ವಿವಿಧ ಕ್ರೀಡಾಕೂಟ ವಿಜೇತರಿಗೆ ಬಹುಮಾನ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಹಾಗೂ ಜೇನುಗೂಡು ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು ಹಾಗೂ ಮಾಜಿ ಉಪಮಹಾಪೌರರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ ನೆರವೇರಿಸಲಿದ್ದಾರೆ.
ಸಮಸ್ತ ಬಾಂಧವರು ಒಗ್ಗೂಡಿ ವಿಶ್ವಕರ್ಮ ಜಯಂತೋತ್ಸವವನ್ನು ಯಶಸ್ವಿಗೊಳಿಸೋಣ ಎಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಶ್ರೀ ಆದಿಲಕ್ಷ್ಮೀ ಸಂಸ್ಥಾನ,
ಜೇನುಗೂಡು ವಿಶ್ವಕರ್ಮ ಬಳಗದ ಅಧ್ಯಕ್ಷರಾದ ಸುದರ್ಶನ ಮೂರ್ತಿ, ಅಧ್ಯಕ್ಷರಾದ ಕೆ.ಎನ್.ಶ್ರೀಧರ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*