ಭಟ್ಕಳ ತಾಲೂಕ ಬಿ.ಜೆ.ಪಿ ವಿವಿಧ ಘಟಕ ಹಾಗೂ ತಾಲೂಕ ಸರಕಾರಿ ಆಸ್ಪತ್ರೆ ಸಹಯೋಗದಲ್ಲಿ ರಕ್ತಧಾನ ಶಿಬಿರ

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳ್

ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 71 ನೇ ಜನ್ಮದಿನದ ಪ್ರಯುಕ್ತ ಭಟ್ಕಳದ ಭಾರತೀಯ ಜನತಾ ಪಾರ್ಟಿಯ ವಿವಿಧ ಮೋರ್ಚಾ, ಪ್ರಕೋಷ್ಟ ಹಾಗೂ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ *ಸೇವೆ ಮತ್ತು ಸಮರ್ಪಣೆ ಅಭಿಯಾನದ 17 ನೇ ದಿನದ ಅಂಗವಾಗಿ *ಭಟ್ಕಳದ ಆಸರಕೇರಿಯ ಶ್ರೀ ವೆಂಕಟ್ರಮಣ ಸಭಾಭವನ* ದಲ್ಲಿ ಇಂದು (ದಿನಾಂಕ 03-10-2021 ರಂದು ರವಿವಾರ) ಬೆಳಿಗ್ಗೆ 9-30 ರಿಂದ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿ ರಕ್ತನಿಧಿಯವರ ಸಹಕಾರದೊಂದಿಗೆ *”ರಕ್ತದಾನ ಶಿಬಿರ* ಹಾಗೂ

CHETAN KENDULI

ಡಾ. ಯಜ್ಞೇಶ್ ಕಿಡಿಯೂರ. MBBS, MD (Int Med) ಇವರ ಸಹಯೋಗದಲ್ಲಿ *”ಉಚಿತ ಆರೋಗ್ಯ ತಪಾಸಣಾ ಶಿಬಿರ”* ಹಾಗೂ “HEGDE EYE FOUNDATION” ನ ಡಾ. ಕೆ ಹರ್ಷಿತ್ ಹೆಗಡೆ. MS, (OPHTH) FCRS ಇವರ ಸಹಯೋಗದಲ್ಲಿ *”ಉಚಿತ ನೇತ್ರ ತಪಾಸಣಾ ಶಿಬಿರ”ವನ್ನು ನಡೆಸಲಾಯಿತು.

ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಶ್ರೇಯಾ ಮಹಾಲೆ ಅವರು ವಂದೇ ಮಾತರಂ ಗೀತೆ ಹಾಡುವುದರ ಮೂಲಕ ಪ್ರಾರಂಭವಾದ ಆರೋಗ್ಯ ಶಿಬಿರದ ಸಭಾ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ಸುನಿಲ್ ಬಿ.ನಾಯ್ಕ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ್ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಭಾಕಾರ್ಯಕ್ರಮದ ವೇದಿಕೆಯಲ್ಲಿ ವಿಭಾಗ ಸಹ-ಪ್ರಭಾರಿಗಳಾದ ಶ್ರೀ ಏನ್. ಎಸ್. ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗೋವಿಂದ ನಾಯ್ಕ, ಶಿವಮೊಗ್ಗದ ಪ್ರಭಾರಿ ಶ್ರೀ ಆರ್ ಡಿ ಹೆಗಡೆ, ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಸುಬ್ರಾಯ ದೇವಾಡಿಗ,ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ರಾಜೇಶ್ ನಾಯ್ಕ, ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀ ರವಿ ನಾಯ್ಕ ಜಾಲಿ,ಮಾಜಿ ಸೈನಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀ ಶ್ರೀಕಾಂತ ನಾಯ್ಕ,ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ತಾಲೂಕು ವೈದ್ಯಾಧಿಕಾರಿಗಳಾದ ಡಾ. ಸವಿತಾ ಕಾಮತ್, ಉಡುಪಿಯ ರಕ್ತನಿಧಿ ಕೇಂದ್ರದ ವೈದ್ಯರಾದ ಡಾ. ವೀಣಾ, ಶಿಬಿರದ ವೈದ್ಯರುಗಳಾದ ಡಾ. ಯಜ್ಞೇಶ್ ಕಿದಿಯೂರು, ಡಾ. ಹರ್ಷಿತ ಹೆಗಡೆ, ಡಾ. ರವಿ ಮೊದಲಾದವರು ಉಪಸ್ಥಿತರಿದ್ದರು.

ಮಂಡಲದ ಅಧ್ಯಕ್ಷರು ಸರ್ವರನ್ನೂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಹನ ನಾಯ್ಕ ಸರ್ವರನ್ನೂ ವಂದಿಸಿದರು. ಶ್ರೀ ಭಾಸ್ಕರ್ ದೈಮನೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಹಾಗೂ ಜಿಲ್ಲಾ ಪದಾಧಿಕಾರಿಗಳು, ವಿವಿಧ ಮೋರ್ಚಾ ಹಾಗೂ ಪ್ರಕೋಷ್ಠದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

Be the first to comment

Leave a Reply

Your email address will not be published.


*