ಬಂಗಾರದ ಚೈನ್ ಕದ್ದು ಪರಾರಿಯಾಗಿದ್ದ ಆರೋಪಿಗಳು ಅಂದರ್

ವರದಿ ಸ್ಪೂರ್ತಿ ಎನ್ ಶೆಟ್

ಜಿಲ್ಲಾ ಸುದ್ದಿಗಳು 

ಶಿರಸಿ

ತಾಲೂಕಿನ ‘ರತ್ನದೀಪ’ ಎಂಬ ಹೆಸರಿನ ಜ್ಯೂವೇಲರಿ ವರ್ಕ್ಸ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಚೈನ್ ಕದ್ದು ಕಾರಿನಲ್ಲಿ ಪರಾರಿಯಾದ ಬಗ್ಗೆ ಶಿರಸಿ ಠಾಣಾ ವ್ಯಾಪ್ತಿಯಲ್ಲಿ ಹಲವು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು.ತನಿಖೆಗಿಳಿದ ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಶ್ವಿಯಾಗಿದ್ದಾರೆ.

CHETAN KENDULI

ನಿಲೇಶ ವಾಸುದೇವ ರೇವಣಕರ (32),ರಾಘವೇಂದ್ರ ಬಾಲಕೃಷ್ಣ ದೈವಜ್ಞ (35) ಬಂದಿತ ಆರೋಪಿಗಳು.ಬಂದಿತರಿಂದ ಅಂದಾಜು 53,130 ರೂಪಾಯಿ ಮೌಲ್ಯದ 11.50 ಗ್ರಾಂ ಚೈನ್,49,000 ಸಾವಿರ ಮೌಲ್ಯದ 22.28 ಗ್ರಾಂ ಚಿನ್ನ ಒಟ್ಟು 1.02.672 /- ರೂಪಾಯಿ ಮಾಲ್ಯದ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ ಮಾರುತಿ ಸುಝುಕಿ ಕಾರನ್ನು ವಶಪಡಿಸಿಕೊಂಡಿದ್ದಾರೆ. 

ಈ ಪ್ರಕರಣದಲ್ಲಿ ರವಿ ಡಿ. ನಾಯ್ಡ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ರಾಮಚಂದ್ರ ನಾಯಕ ಸಿ.ಪಿ.ಐ ಹಾಗೂ ತನಿಖಾ ತಂಡದ ಸದಸ್ಯರುಗಳಾದ ರಾಜಕುಮಾರ ಉಕ್ಕ ಪಿ.ಎಸ್.ಐ, ಶಿರಸಿ ನಗರ ಠಾಣೆ – ಮೋಹಿನಿ ಶೆಟ್ಟಿ ಮ.ಪಿ.ಎಸ್.ಐ ಶಿರಸಿ ನಗರ ಠಾಣೆ . ಹಾಗೂ ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ಮಹ್ಮದ ಶಫಿ, ಚೇತನಕುಮಾರ, ಎಚ್. ರಾಮಯ್ಯ, ಪ್ರಶಾಂತ ಪಾವಸ್ಕರ, ಗಣಪತಿ ಪಟಗಾರ, ಸದ್ದಾಂ ಹುಸೇನ, ಮಂಗಳಮೂರ್ತಿ ಶಿರಹಟ್ಟಿ, ಫಕೀರ ವಣ್ಣೂರ, ಸುಭಾಷ ನಜೀರ, ಅಶೋಕ ಚಾಲಕರುಗಳಾದ ಪಾಂಡು ನಾಗೋಜಿ, ಶಿವಪ್ಪ ಇವರುಗಳು ಈ ಕಾರ್ಯಾಚರಣೆಯಲ್ಲಿದ್ದು, ಈ ತಂಡವನ್ನು ಶಿವಪ್ರಕಾಶ ದೇವರಾಜು ಪೊಲೀಸ ಅಧೀಕ್ಷಕರು ಪ್ರಶಂಶಿಸಿರುತ್ತಾರೆ.

Be the first to comment

Leave a Reply

Your email address will not be published.


*