ಬಾಗಲಕೋಟೆ ತೋವಿವಿಗೆ ಹೆಮ್ಮೆಯ ಗರಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನವರು ಕೊಡಲ್ಪಡುವ 2019-20 ಮತ್ತು 2020-21ನೇ ಸಾಲಿನ ಸ್ನಾತಕೋತ್ತರ ಶಿಷ್ಯವೇತನ ಪ್ರಶಸ್ತಿಯು ಭಾರತದ ತೋಟಗಾರಿಕೆ ಹಾಗೂ ಅರಣ್ಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ತೋವಿವಿ ಬಾಗಲಕೋಟೆಯು ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.

ಸದರಿ ಪ್ರಶಸ್ತಿ ಸೆಪ್ಟೆಂಬರ್ 28 ರಂದು ದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಪ್ಲೆಕ್ಸ್‍ನಲ್ಲಿ ಜರುಗಿದ ಸಮಾರಂಭದಲ್ಲಿ ತೋವಿವಿ ಬಾಗಲಕೋಟೆಯ ಗೌರವಾನ್ವಿತ ಕುಲಪತಿಗಳಾದ ಡಾ.ಕೆ.ಎಂ. ಇಂದಿರೇಶ ಅವರು ಭಾ.ಅ.ಕೃ.ಪ. ನವದೆಹಲಿಯ ಮಹಾಪ್ರಬಂಧಕರಾದ ಡಾ. ತ್ರಿಲೋಚನ ಮಹಾಪಾತ್ರ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 2008 ರಲ್ಲಿ ಆರಂಭವಾಗಿದ್ದು ಇದರ ಅಡಿಯಲ್ಲಿರುವ 9 ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸ್ನಾತಕ ಪದವಿ ಮತ್ತು 3 ಮಹಾವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಬೋಧಿಸಲಾಗುತ್ತಿದೆ. 2019-20 ನೇ ಸಾಲಿನಲ್ಲಿ 58 ಕಿರಿಯ ಶಿಷ್ಯವೇತನ, 06 ಹಿರಿಯ ಶಿಷ್ಯವೇತನ ಮತ್ತು 2020-21 ನೇ ಸಾಲಿನಲ್ಲಿ 43 ಕಿರಿಯ ಶಿಷ್ಯವೇತನ, 11 ಹಿರಿಯ ಶಿಷ್ಯವೇತನ ಪಡೆದು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ತೋವಿವಿಯ ಕುಲಪತಿಗಳು, ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಸಮಸ್ತ ಬೋಧಕ ಸಿಬ್ಬಂದಿಯು ವಿದ್ಯಾರ್ಥಿ ವೃಂದಕ್ಕೆ ಅಭಿನಂದಿಸಿರುತ್ತಾರೆ. ಸದರಿ ಪ್ರಶಸ್ತಿಯು ತೋವಿವಿಗೆ ದೊರೆತಿರುವುದು ಇದು ಸತತ ಮೂರನೆಯ ಬಾರಿಯಾಗಿದೆಯೆಂದು ಹೆಮ್ಮೆಯಿಂದ ವಿಷಯವಾಗಿದೆ ಎಂದು ಶಿಕ್ಷಣ ನಿರ್ದೇಶಕ ಡಾ. ಎಂ.ಎಸ್. ಕುಲಕರ್ಣಿ ತಿಳಿಸಿದ್ದಾರೆ. ಅಲ್ಲದೆ ಪ್ರತಿ ಮಹಾವಿದ್ಯಾಲಯದಲ್ಲಿಯೂ ಈ ಶಿಷ್ಯವೇತನ ಪರೀಕ್ಷೆಗಳಿಗಾಗಿ ಸಂಯೋಜಕರು ನಿಯೋಜಿತರಾಗಿದ್ದು ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಶೇಷ ತರಗತಿಗಳನ್ನು ಮತ್ತು ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಈ ವ್ಯವಸ್ಥೆಯಿಂದ ಹೆಚ್ಚು ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಷ್ಯವೇತನ ಪಡೆದುಕೊಳ್ಳುವಂತಾಗಿದೆ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*