ರಾಜ್ಯ ಮಟ್ಟದ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳ ಸಭೆ

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜದೂರು ಸಂಘ ಸಂಯೋಜಿತದಲ್ಲಿ ವಿಶ್ವ ಕರ್ಮ ಸ್ಮರಣೆಯೊಂದಿಗೆ ರಾಜ್ಯ ಮಟ್ಟದ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆ ಹೊನ್ನಾವರದಲ್ಲಿ ನಡೆಯಿತು. ಹೊನ್ನಾವರ ಪಟ್ಟಣದ ಕಿಂತಾಲ್ ಕೇರಿ ಸುವರ್ಣಕಾರರ ಕೋ ಆಪ್ರೇಟಿವ್ ಸೊಸೈಟಿಯ ಸಭಾಭವನದಲ್ಲಿ ಸಭೆ ನಡೆಯಿತು. ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಸಾಫ್ಟ್ವೇರ್ ಬದಲಾವಣೆಯ ಕೆಲಸ ನಡೆದು ಸೇವಾ ಸಿಂಧು ಸಾಫ್ಟವೇರ್ ಬಂದಾಗಿರುವ ಮತ್ತು ಅಡೆತಡೆಯ ಸಮಸ್ಯೆ ಕುರಿತು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ 2017 ರಿಂದ 2020 ರವರೆಗೆ ಎಲ್ಲಾ ಧನ ಸಹಾಯಕ್ಕಾಗಿ ಸಲ್ಲಿಸಿದ ಅರ್ಜಿಯ ಹಣ ಬರದ ಬಾಕಿ ಉಳಿದಿರುವ ಕಡತಗಳ ಬಗ್ಗೆ ಕೋವಿಡ್ ಸಂದರ್ಭದ ಸರ್ಕಾರದ ಧನ ಸಹಾಯದ ಬರದೇ ಇದ್ದ ಬಾಕೀ ಉಳಿದಿರುವ ಫಲಾನುಭವಿಗಳ ಹಣ ಜಮಾ ಆಗದೇ ಉಳಿದಿರುವ ಬಗ್ಗೆ ಕಟ್ಟಡ ಕಾರ್ಮಿಕರ ಸಂಘಟನೆಯ ಹೆಸರಿನಲ್ಲಿ ಮರು ನೊಂದಣಿ ಮಾಡಿ ಸಂಘದಲ್ಲಿ ರಾಜ್ಯದ ವಂತಿಕೆಯನ್ನು ಕೊಡದೆ ಸಂಘಟನೆ ನಡೆಸುವವರ ಬಗ್ಗೆ ಚರ್ಚೆ ನಡೆಯಿತು.

CHITAN KENDULI

ರಾಜ್ಯದ ವಿವಿಧ ಭಾಗದಿಂದ ನೊಂದಾಯಿತವಾದ ಕಟ್ಟಡ ಕಾರ್ಮಿಕ ಸಂಘದ ತಾಲೂಕಾಧ್ಯಕ್ಷರುಗಳು ಆಗಮಿಸಿ ರಾಜ್ಯ ಮತ್ತು ರಾಷ್ಟ್ರ ಘಟಕದ ಅಧ್ಯಕ್ಷರುಗಳೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಭಾರತೀಯ ಮಜದೂರ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಿ ಟಿ ಪಾಟೀಲ್ ಬಿ ಎಮ್ ಎಸ್ , ಸಂಘಟನೆಯ ರಾಜ್ಯ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ, ಬಿ ಎಮ್ ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವಿಶಂಕರ್ ರೆಡ್ಡಿ ಅಲ್ಲೂಲ್, ಗೌರವಾಧ್ಯಕ್ಷ ಟಿ.ವಿ ರಾಮಮೂರ್ತಿ, ರಾಜ್ಯ ಉಪಾಧ್ಯಕ್ಷ ಕಲಿಂಮುಲ್ಲಾ ಕಂಬಳಿ, ರಾಜ್ಯ ಉಪಾಧ್ಯಕ್ಷ ನಾಗೇಶ್ ಎಲ್ ನಾಯ್ಕ, ರಾಜ್ಯ ಉಪಾಧ್ಯಕ್ಷೆ ತಾಹೀರಾ, ರಾಜ್ಯ ಖಜಾಂಚಿ ಕಮಲಮ್ಮ, ಪ್ರಶಾಂತ್ ಕಲಾದಗಿ, ರಾಜ್ಯ ಸದಸ್ಯ ಈಶ್ವರ ನಾಯ್ಕ, ಬಿ ಎಮ್ ಎಸ್ ಕಾರ್ಯದರ್ಶಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಜಯರಾಜ್ ಶಾಲಿಯಾನ ಮತ್ತಿತರರು ಉಪಸ್ತಿತರಿದ್ದರು. 

Be the first to comment

Leave a Reply

Your email address will not be published.


*