ರಾಜ್ಯ ಸುದ್ದಿಗಳು
ನಾಲತವಾಡ: ಖೋಟಾ ನೋಟು ಚಲಾವಣೆ ಮಾಡಲು ಪ್ರಯತ್ನಿಸಿದ ಇಬ್ಬರನ್ನು ಪೊಲೀಸರು ನಾಲತವಾಡ ಪಟ್ಟಣದಲ್ಲಿ ಬಂಧಿಸಿದ್ದಾರೆ.
ಅಸಲಿ ನೋಟುಗಳಂತೆ ಕಾಣುವ ೧೦೦ ರೂ. ಮುಖಬೆಲೆಯ ನಕಲಿ ನೋಟನ್ನು ಕೊಟ್ಟು ಚಿಲ್ಲರೆ ಮಾಡಿಸಲು ಪ್ರಯತ್ನಿಸುತ್ತಿದ್ದಾಗ ಅಂಗಡಿಯವ ಖೋಟಾ ನೋಟಿನ ಅಸಲಿಯತ್ತನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ರವಿವಾರ ಬೆಳಗ್ಗೆ ಆರೋಪಿಗಳನ್ನು ಪೋಲಿಸರು ಬಂದಿಸಿದ್ದಾರೆ.
ಪಟ್ಟಣದಲ್ಲಿ ಈ ಹಿಂದೆ ೫೦ ರೂಪಾಯಿ ಮುಖಬೆಲೆಯ ಖೋಟಾ ನೋಟು ಚಲಾವಣೆಯಾದ ಬೆನ್ನಲ್ಲೆ ರವಿವಾರ ಬೆಳಗ್ಗೆ ೧೦೦ ರೋಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆ ಮಾಡುವ ಸಮಯದಲ್ಲಿ ಅಂಗಡಿಕಾರಿನಿಗೆ ಸಂಶಯ ಬಂದಿದ್ದರಿಂದ ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ, ಖೋಟಾ ನೋಟು ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ನೋಟು ಚಲಾವಣೆಗೆ ಯತ್ನಿಸಿದ ಇಬ್ಬರನ್ನು ಬಂಧಿಸಿದ್ದಾರೆ.
ಖೋಟಾ ನೋಟು ಜಾಲದ ಪತ್ತೆ ಹಚ್ಚಿ ವಿಚಾರಣೆ ಮಾಡುತ್ತಿರು ಮುದ್ದೇಬಿಹಾಳ ಪೋಲಿಸರು
ನಾಲತವಾಡ ಪಟ್ಟಣದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದವರು ಮೂಲತ ಬಸವಬಾಗೇವಾಡಿಯ ಇಂದಿರಾ ನಗರ ನಿವಾಸಿಗಳು ಎಂದು ತನಿಖೆ ವೇಳೆ ತಿಳಿದು ಬಂದಿದೆ ಸುಮನ್ ಬಂಗಾರಿ, ಸೋಹೆಲ್ ಇನಾಂದಾರ ಎಂಬ ಇಬ್ಬರು ಆರೋಪಿಗಳನ್ನು ಬಂದಿಸಿದ್ದೆವೆ ಅವರು ಬಳಿ ೧೦೦ ರೂಪಾಯಿ ಮುಖಬೆಲೆಯ ಸುಮಾರು 11300 ಸಾವಿರ ಹಣ ಪತ್ತೆಯಾಗಿದು ಸ್ಥಳಕ್ಕೆ ಈ ಮುದ್ದೆಬಿಹಾಳ ಪಿ ಎಸ ಆಯ್ ಮಲ್ಲಪ್ಪ ಮಡ್ಡಿ ಸಿ ಪಿ ಆಯ್ ರವಿಕುಮಾರ್ ಕಪತ್ಯನವರು ಆಗಮಿಸಿ ಪ್ರಕಣ ದಾಖಲಿಸಿಕೊಂಡು ಈ ಖೋಟಾ ನೋಟಿ ಜಾಲ ಪತ್ತೆಗೆ ವಿಶೇಷ ತಂಡ ರಚಿಸಲಾಗುವುದು ಎಂದು ತಿಳಿಸಿದರು.
Be the first to comment