ವಿಶ್ವನಾಥಪುರ ಗ್ರಾಪಂನ ಮೊದಲ ಹಂತದ ಗ್ರಾಮಸಭೆ ಯಶಸ್ವಿ ದಿನ್ನೇ ಸೋಲೂರು ಗ್ರಾಮದಲ್ಲಿ ೨೦೨೧-೨೨ನೇ ಸಾಲಿನ ಗ್ರಾಮ ಸಭೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಗ್ರಾಮಾಂತರ ಪ್ರದೇಶದ ಗ್ರಾಮೀಣ ಭಾಗದ ಪ್ರತಿ ಹಳ್ಳಿಯ ಜನರಿಗೆ ಗ್ರಾಪಂ ಮೂಲಕ ಸೌಲಭ್ಯ ಮತ್ತು ಸೌಕರ್ಯ ಒದಗಿಸಿಕೊಡುವ ಕೇಂದ್ರ ಸ್ಥಾನ ಮತ್ತು ಸ್ಥಳೀಯ ಸರಕಾರ ಗ್ರಾಮ ಪಂಚಾಯಿತಿ ಆಗಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ದಿನ್ನೆ ಸೋಲೂರು ಗ್ರಾಮದಲ್ಲಿ ೨೦೨೧-೨೨ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದಲ್ಲಿ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಗ್ರಾಮ ಪಂಚಾಯಿತಿ ಮಾದರಿಯಾಗುತ್ತದೆ ಎಂದು ಹೇಳಿದರು.

CHETAN KENDULI

ಗ್ರಾಪಂ ಉಪಾಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಗ್ರಾಪಂ ವತಿಯಿಂದ ಚೇರ್ ಮತ್ತು ಡೆಸ್ಕ್ ವಿತರಿಸಲಾಗುತ್ತಿದೆ…ವಿಶ್ವನಾಥಪುರ ಗ್ರಾಮದೊಳಗಿನ ರಸ್ತೆ ಮತ್ತು ಸೀಕಾಯನಹಳ್ಳಿ ಗ್ರಾಮದ ರಸ್ತೆ ಹದಗಟ್ಟಿರುವುದರಿಂದ ತಮ್ಮ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಮಂಜೂರು ಮಾಡಿಕೊಡಬೇಕು ಮತ್ತು ವಿದ್ಯುತ್ ಮುಕ್ತ ಗ್ರಾಮಗಳನ್ನಾಗಿಸಲು ತಮ್ಮ ಅನುದಾನದಲ್ಲಿ ವಿದ್ಯುತ್ ಬದಲಿಗೆ ಸೋಲಾರ್ ಅಳವಡಿಕೆಗೆ ಅನುದಾನ ಬಿಡುಗಡೆ ಮಾಡಿಕೊಟ್ಟರೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಶಾಸಕರನ್ನು ಮನವಿ ಮಾಡಿದರು.ಗ್ರಾಮ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಲಾಯಿತು. ಘನತ್ಯಾಜ್ಯ ವಿಲೇವಾರಿ ಬಗ್ಗೆ ಚರ್ಚಿಸಿ ಪ್ರತಿ ಮನೆಯಲ್ಲಿಯೂ ತ್ಯಾಜ್ಯ ಸಂಗ್ರಹಣೆ ಮಾಡಬೇಕು. ೨೦೨೧-೨೨ನೇ ಸಾಲಿನ ಗ್ರಾಪಂ ನಿಧಿಯ ಕ್ರಿಯಾ ಯೋಜನೆ, ೧೫ನೇ ಹಣಕಾಸಿನ ಯೋಜನೆಯ ಕ್ರಿಯಾ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆ (ನರೇಗಾ) ಕ್ರಿಯಾ ಯೋಜನೆ, ಗ್ರಾಪಂ ಅಯವ್ಯಯವನ್ನು ಪಂಚಾಯಿತಿಯ ಎಲ್ಲಾ ಯೋಜನೆಗಳ ಜಮಾ-ಖರ್ಚು, ಎಲ್ಲಾ ವಸತಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲಾಯಿತು. ನಿವೇಶನಗಳ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ, ಫಲಾನುಭವಿಗಳನ್ನು ಗುರ್ತಿಸುವ ಕಾರ್ಯ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಜಾಗವನ್ನು ಗುರುತಿಸಿ ಸ್ಥಳ ಮಂಜೂರು ಮಾಡಲು ಸಭೆಯಲ್ಲಿ ಅಧ್ಯಕ್ಷರ ಮತ್ತು ಶಾಸಕರ ಸಮ್ಮೂಕದಲ್ಲಿ ತೀರ್ಮಾನಿಸಿ ಮತ್ತು ಅನುಮೋದನೆ ಪಡೆಯಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ ದ್ವಿತೀಯ ಪಿಯುಸಿ ಮತ್ತು ಪದವಿಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಗ್ರಾಪಂ ವತಿಯಿಂದ ಸಹಾಯದನದ ಚೆಕ್‌ಗಳನ್ನು ವಿತರಿಸಲಾಯಿತು. ಈ ವೇಳೆ ಗ್ರಾಪಂ ಅಧ್ಯಕ್ಷೆ ಮಂಗಳಾ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ರಾಮಮೂರ್ತಿ, ಗ್ರಾಪಂ ಪಿಡಿಒ ಗಂಗರಾಜು.ಬಿಎಸ್, ಕಾರ್ಯದರ್ಶಿ ಎಂ.ಪದ್ಮಮ್ಮ, ಲೆಕ್ಕಸಹಾಯಕ ನಾಗರಾಜು, ಸದಸ್ಯರು ತಾಲೂಕು ಮಟ್ಟದ ಇಲಾಖಾಧಿಕಾರಿಗಳು, ಮುಖಂಡರು ಇದ್ದರು.

Be the first to comment

Leave a Reply

Your email address will not be published.


*