ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಬಚ್ಚಹಳ್ಳಿ ಸರಕಾರಿ ಪ್ರೌಢಶಾಲೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ (ಬೆವರೇಜ್ ಕೋಆಪರೇಟಿವ್ ಲಿಮಿಟೆಡ್) ವತಿಯಿಂದ ಸಿಎಸ್‌ಆರ್ ನಿಧಿಯಲ್ಲಿ ೨ಲಕ್ಷ ರೂ. ವೆಚ್ಚದಲ್ಲಿ ಹೈಟೇಕ್ ಗ್ರಂಥಾಲಯ ಅಭಿವೃದ್ಧಿಗೆ ನೆರವು ನೀಡುವುದರ ಮೂಲಕ ಲೋಕಾರ್ಪಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಪಾನೀಯ ನಿಗಮ ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ.ಸುನಿತಾ ಮಾತನಾಡಿ, ಅಗಾಧ ಜ್ಞಾನ ಸಂಪಾದನೆಗೆ ಗ್ರಂಥಾಲಯದಲ್ಲಿರುವ ಪುಸ್ತಕ ಬಂಡಾರದಿಂದ ಮಾತ್ರ ಸಾದ್ಯವಾಗುತ್ತದೆ. ಸುಸ್ಸಜ್ಜಿತವಾದ ಗ್ರಂಥಾಲಯದ ಸದುಪಯೋಗವನ್ನು ಪ್ರತಿ ವಿದ್ಯಾರ್ಥಿ ಮತ್ತು ಗ್ರಾಮಸ್ಥರು ಪಡೆದುಕೊಳ್ಳುವಂತಾಗಬೇಕು. ಕಳೆದ ೨೫ವರ್ಷದಿಂದ ಗುರುಗಳ ಮಾರ್ಗದರ್ಶನದಲ್ಲಿ ಬಂದಿದ್ದೇನೆ. ಗ್ರಂಥಾಲಯ ಮಕ್ಕಳಿಗೆ ಸೀಮಿತವಲ್ಲ, ಇಡೀ ಗ್ರಾಮಕ್ಕೆ ತೆರದ ಗ್ರಂಥಾಲಯ ವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಶಾಲೆಗೆ ಯಾವುದೇ ರೀತಿಯಲ್ಲಿ ಸಹಕಾರ ಬೇಕಾದರೂ ಜೊತೆಗಿರುತ್ತೇವೆ. ಲೈಬ್ರರಿ ಮಾಡಿರುವ ಕೆಲಸಕ್ಕೆ ಸಾರ್ಥಕವೆನಿಸುತ್ತಿದೆ. ನಮ್ಮ ಗುರುಗಳು ಹೇಳುತ್ತಿದ್ದರು ಶಾಲಾ ಹಂತದಲ್ಲಿ ಮೊದಲ ಬೆಂಚ್‌ನಲ್ಲಿ ಕುಳಿತುಕೊಳ್ಳುವವರು ನಮ್ಮಜೊತೆ ಕೆಲಸ ಮಾಡುತ್ತಾರೆ. ಮಧ್ಯದಲ್ಲಿ ಕುಳಿತವರು ಸರಕಾರಿ ಹುದ್ದೆಗೆ ಹೋಗುತ್ತಾರೆ. ಕೊನೆಗೆ ಕೂತಿರುವವರೆಲ್ಲಾ ರಾಜಕೀಯಕ್ಕೆ ಹೋಗುತ್ತಾರೆಂದು ಹೇಳಿದ್ದರು. ಅದರಂತೆ ಆಯಿತು ಕೂಡಲ. ಮೂಲತಃ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದೇನೆ. ಮಕ್ಕಳು ಸಹ ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು. ಪುಸ್ತಕ ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಗಂಗಮಾರೇಗೌಡ ಮಾತನಾಡಿ, ಸರ್ಕಾರ ಪ್ರೌಡ ಶಾಲೆಗಳನ್ನು ಪ್ರಾರಂಭಿಸಿ ೨೦ ದಿನಗಳಾಗಿವೆ. ೧೦ನೇ ತರಗತಿ ಮಕ್ಕಳು ಗಮನವಿಟ್ಟು ಓದಬೇಕು. ಇದು ಬಹಳ ಮುಖ್ಯವಾದ ಘಟ್ಟ ವಾಗಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರತಿ ಮಕ್ಕಳು ಒಂದು ಗುರಿ ಇಟ್ಟುಕೊಂಡು ವಿಧ್ಯಾಭ್ಯಾಸ ಮಾಡಬೇಕು. ಶಾಲೆಗೆ ಉತ್ತಮ ಗ್ರಂಥಾಲಯಕ್ಕೆ ಸಹಕಾರ ನೀಡಿದ ಸಂಸ್ಥೆಗೆ ನಮ್ಮ ಇಲಾಖೆ ಅಬಾರಿಯಾಗಿದೆ. ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಈ ವೇಳೆಯಲ್ಲಿ ಶಿಕ್ಷಣ ತಜ್ಞ ಹಾಗೂ ಬೆಂಗಳೂರು ನಿವೃತ್ತ ಪ್ರಾಧ್ಯಾಪಕ ಡಾ.ನಾಗರಾಜಯ್ಯ, ಕೆಎಸ್‌ಬಿಸಿಎಲ್ ವ್ಯವಸ್ಥಾಪಕ ಕುಮಾರಸ್ವಾಮಿ, ಬಿಇಒ ಅಶ್ವತ್ಥ್ ನಾರಾಯಣ, ಕುಂದಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ವೀಣಾರಾಣಿ, ಬಚ್ಚಹಳ್ಳಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದಪ್ಪ, ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕ ಮುರಳಿ, ಗ್ರಾಮದ ಮುಖಂಡರಾದ ನವೀನ್, ಮುನಿಯಪ್ಪ, ಬೆಂಗಳೂರು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಯಪ್ಪ, ಕುಂದಾಣ ಕ್ಲಸ್ಟರ್ ಸಿಆರ್‌ಪಿ ನಾಗೇಶ್, ಟಿಪಿಇಒ ಜನಾರ್ಧನ್, ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್, ಶಾಲಾ ಶಿಕ್ಷಕರು, ಗ್ರಾಮಸ್ಥರು ಇದ್ದರು.
Be the first to comment