ಲಿಂಗಸುಗೂರು.(ಅ:6) ಮಹಾರಾಷ್ಟ್ರದಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಕೃಷ್ಣಾನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಪ್ರಾರಂಭವಾಗಿದೆ. ನಾರಾಯಣಪುರ ಜಲಾಶಯಕ್ಕೆ 1 ಲಕ್ಷ 50 ಸಾವಿರ ಒಳಹರಿವಿದ್ದು, ಜಲಾಶಯದಿಂದ 17 ಗೇಟ್ ಗಳ ಮೂಲಕ ಕೃಷ್ಣಾನದಿಗೆ 1, ಲಕ್ಷ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ಕೋಯ್ನಾ ಡ್ಯಾಂನಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.ಶೀಲಹಳ್ಳಿ ಸೇತುವೆ ಪುನಃ ಮತ್ತೆ ಮುಳುಗುವ ಸ್ಥಿತಿಯಲ್ಲಿದೆ ಇದರಿಂದ ಜನರು ಆತಂಕಗೊಂಡಿದ್ದಾರೆ.
15ದಿನಗಳ ಹಿಂದಷ್ಟೇ ಲಿಂಗಸ್ಗೂರು ತಾಲೂಕಿನ ಪ್ರವಾಹ ತಗ್ಗಿದ್ದು, ಈ ಹಿಂದೆ ಸಂಭವಿಸಿದ ಭಾರೀ ಪ್ರವಾಹಕ್ಕೆ ಜನಜೀವನ ತತ್ತರಿಸಿ ಹೋಗಿತ್ತು. ನದಿ ಪಾತ್ರದ ಸುಮಾರು 7.ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿತ್ತು. ಪ್ರವಾಹದಿಂದ.ಪ್ರದೇಶದ ಬೆಳೆ ನಾಶವಾಗಿದ್ದು,ಆಸ್ತಿ ಪಾಸ್ತಿ ಹಾನಿಯಾಗಿದೆ. ಈಗಷ್ಟೇ ಆಶ್ರಯ ಕೇಂದ್ರಗಳಿಂದ ಜನರು ಗ್ರಾಮಕ್ಕೆ ಮರಳಿದ್ದರು, ಇದೀಗ ಮತ್ತೆ ಪ್ರವಾಹದ ಆತಂಕ ಆರಂಭವಾಗಿದೆ.
Be the first to comment