ಹುಣಸಗಿ :(ಅ:4) ಕಳೆದ 13 ದಿನಗಳಿಂದ ಕೃಷ್ಣಾ ನದಿಯಲ್ಲಿ ಸ್ಥಗಿತಗೊಂಡಿದ್ದ ನೀರಿನ ಹರಿವಿನ ಪ್ರಮಾಣ ಮತ್ತೆ ಆರಂಭವಾಗಿದ್ದು , ನದಿಗೆ ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ನೀರು ಹರಿಸಲಾಗುತ್ತಿದೆ ಎಂದು ಡ್ಯಾಂ ಡಿವಿಜನ್ ಮೂಲಗಳು ತಿಳಿಸಿವೆ . “ ಸೋಮವಾರ ರಾತ್ರಿ 35 ಸಾವಿರ ಇದ್ದ ಒಳಹರಿವು ಮಂಗಳವಾರ ಬೆಳಿಗ್ಗೆ 55 ಸಾವಿರಕ್ಕೆ ಏರಿಕೆಯಾಗಿತ್ತು . ಸಂಜೆ ಇನ್ನೂ ಹೆಚ್ಚಾಗಿದ್ದು 70
ಸಾವಿರ ಒಳಹರಿವು ದಾಖಲಾಗಿದೆ .
ಜಲಾಶಯದ ಮಟ್ಟ 492 . 23 ಕಾಯ್ದುಕೊಂಡು 66 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ ‘ ಎಂದು ಗ್ರಾಂ ಡಿವಿಜನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್ . ಎಲ್ . ಹಳ್ಳುರ ತಿಳಿಸಿದ್ದಾರೆ . ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ | ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು | ಹರಿದು ಬರುತ್ತಿದೆ ತಿಳಿಸಿದರು
Be the first to comment