ಲಿಂಗಸುಗೂರ::(ಅ:02)ಲಿಂಗಸ್ಗೂರು
ತಾಲ್ಲೂಕಿನ ಮಾವಿನಬಾವಿ ಪಂಚಾಯತ ವ್ಯಾಪ್ತಿಯಲ್ಲಿ ಬರುವ ರಾಂಪೂರ ಗ್ರಾಮವು ಮುಖ್ಯಮಂತ್ರಿ ಮಾದರಿ ಗ್ರಾಮ ವಿಕಾಸ ಯೋಜನೆ ಅಭಿವೃದ್ಧಿ ಪಡಿಸಲು ಆಯ್ಕೆದು ಶಾಸಕರಾದ ಡಿಎಸ್ ಹುಲಿಗೇರಿ ಅವರು ರಾಂಪೂರ ಗ್ರಾಮದಿಂದ ಭೂಪುರ ಹೊರಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಗುದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು
ಮುಖ್ಯಮಂತ್ರಿ ಮಾದರಿ ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆ ಆಗಿರುವ ರಾಂಪೂರ ಗ್ರಾಮದಲ್ಲಿ ಕೆಂಚಮ್ಮನ ದೇವಸ್ಥಾನ.ಸಿಸಿ ರಸ್ತೆ. ಗ್ರಂಥಾಲಯ ನಿರ್ಮಾಣ ಗ್ರಾಮದ ಸ್ವಚ್ಛತೆ ಕಾಮಗಾರಿಗಳು 1. ಕೋಟಿ 60 ಲಕ್ಷ ರೂಪಾಯಿ ವೆಚ್ಚದ ನೀಲಿ ನಕ್ಷೆಯ ವಿವಿಧ ಕಾಮಗಾರಿಗಳು ಇದ್ದು ಇವುಗಳಗೆ ಶಾಸಕರು ಚಾಲನೆ ನೀಡಿದರು
ಇದೇ ಸಂದರ್ಭದಲ್ಲಿ
ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಿಂಗಸುಗೂರು ಶಾಸಕರು ಗ್ರಾಮಕ್ಕೆ ಬರುವ ಪ್ರತಿಯೊಂದು ಕಾಮಗಾರಗಳು ಮಾರ್ಚ್ ಅಂತ್ಯದೊಳಗೆ ಬಳಸಿಕೋಳಬೇಕು ಅಂದಗಾ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಗ್ರಾಮಗಳಿಗೆ ತರಲು ಸಾಧ್ಯ ಎಂದರು
ಕೆರೆಗೆ ನೀರು ತುಂಬಲು ರಾಂಪೂರ ಏತ ನೀರಾವರಿ ಕಾಲುವೆ ಮೂಲಕ ಕಾಲುವೆ ನಿರ್ಮಾಣ ಮಾಡುವಂತೆ ಕೆ ಬಿ ಜೆ ಎನ್ ಎಲ್ ಸೂಚಿಸಿದೆನೆ ಎಂದು ತಿಳಿಸಿದರು ಇನ್ನೂ ಗ್ರಾಮ ಪಂಚಾಯತಗೆ ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಸ್ಪಂದಿಸಬೇಕು ಅವರು ಸಲ್ಲಿಸುವ ಬೇಡಿಕೆಗಳನ್ನು ಪೂರೈಸಿ ಎಂದು ಗ್ರಾಮ ಪಂಚಾಯತ್ PDO ಗಂಗಮ್ಮ ನವರಿಗೆ ಕಡಕ್ಕಾಗಿ ಸೂಚಿದರು
ಈ ಸಂದರ್ಭದಲ್ಲಿ
ಲಿಂಗಸುಗೂರು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೂಪನಗೌಡ ಪಾಟೀಲ ಕರಡಕಲ್ ,ಜಿಲ್ಲಾ ಪಂಚಾಯತ್ ಸದಸ್ಯರು ಸಂಗಣ್ಣ ದೇಸಾಯಿ ಗುತ್ತಿಗೆದಾರರ ವೆಂಕಟೇಶ ರಾಠೋಡ ಪರಶುರಾಮ ನಗನೂರು ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತ ರಾಂಪುರ್. ಮಾನಬಾವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಮ್ಮ
ಉಪಸ್ಥಿತರು
Be the first to comment