ರಾಜ್ಯ ಸುದ್ದಿಗಳು
ವಿಜಯಪುರ ಜಿಲ್ಲೆ(ಮುದ್ದೇಬಿಹಾಳ):
ಐದನೇ ದಿನದ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ವಿಜಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಸಾವರ್ಜನಿಕವಾಗಿ ಖಡ್ಗ ತೋರಿಸಿದನ್ನು ಚಿತ್ರಿಕರಿಸಿ ಅವಮಾನದ ರೀತಿಯಲ್ಲಿ ನ್ಯೂಸ್ ತೋರಿಸಿದ ಹಿನ್ನೆಲೆಯಲ್ಲಿ ರಾಜ್ಯದ ಹೆಸರಾಂತ್ಯ ನ್ಯೂಸ್ ಚಾನೆಲೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಮುಟ್ಟಿಸುವ ರೀತಿಯಲ್ಲಿ ಕಮೆಂಟ್ಸ್ ವ್ಯಕ್ತವಾಗಿವೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದ ಗಣೇಶ ಮೂರ್ತಿ ವಿಸರ್ಜಿಸುವ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರಿಗೆ ಖಡ್ಗವನ್ನು ನೀಡಿ ಅದನ್ನು ಎತ್ತರಿಸಿ ತೋರಿಸುವಂತೆ ಸೂಚಿಸಿದ್ದಾರೆ. ಅದರಂತೆ ಉಪಾಧ್ಯಕ್ಷರೂ ಮಾಡಿದ್ದಾರೆ. ಆದರೆ ಅದನ್ನು ಚಿತ್ರಿಕರಿಸಿದ ರಾಜ್ಯದ ನ್ಯೂಸ್ ಚಾನೆಲ್ ‘ಪಬ್ಲಿಕ್ ಟಿವ್ಹಿ’ಯ ವರದಿಗಾರ ಅದಕ್ಕೆ ಬೆರೊಂದು ರೂಪಕೊಟ್ಟು ಪ್ರಚಾರಿಸಿದ್ದು ಸ್ಥಳೀಯ ಪ್ರಭುಗೌಡ ಅಭಿಮಾನಿಗಳನ್ನು ಕೆಣಕಿದಂತಾಗಿದೆ. ಇದಕ್ಕೆ ಸಾಮಜಿಕ ಜಾಲತಾಣ ‘ಫೇಸ್-ಬುಕ್’ನಲ್ಲಿ ಅಭಿಮಾನಿಗಳು ನ್ಯೂಸ್ ಚಾನಲ್ ವರದಿಗಾರರಿಗೆ ಬಿಸಿ ಮುಟ್ಟಿಸುವ ಉತ್ತರ ನೀಡಿದ್ದಾರೆ.
ಅವಮಾನಕ್ಕೆ ತಕ್ಕ ಉತ್ತರ ನೀಡಿದ ಅಭಿಮಾನಿಗಳು:
ಟಿವ್ಹಿ ಚಾನೆಲ್ ನಲ್ಲಿ ನ್ಯೂಸ್ ಪ್ರಸಾರ ಮಾಡುವ ಸಂದರ್ಭದ ಚಾನೆಲ್ ಅವರು ಪ್ರಭುಗೌಡ ಅವರನ್ನು ಏಚ ವಚನದ ಜೊತೆಗೆ ಇನ್ನಿತರ ಅವಮಾನದ ಪದಗಳನ್ನು ಹೇಳಿದ್ದು ಪ್ರಭುಗೌಡ ಅವರ ಅಭಿಮಾನಿಗಳಿಗೆ ಆಕ್ರೋಶಕ್ಕೆ ಒಳಮಾಡಿದೆ. ಅಲ್ಲದೇ ಪ್ರಭುಗೌಡ ದೇಸಾಯಿ ಅವರು ಎಂತಹ ವ್ಯಕ್ತಿ ಎನ್ನುವುದು ಇಡೀ ವಿಜಯಪುರ ಜಿಲ್ಲೆಗೆ ಗೊತ್ತಿದೆ. ಒಬ್ಬ ಸಜ್ಜನ ರಾಜಕಾರಣಿಯನ್ನು ಅವಮಾನಿಸುವುದು ಯಾವುದೇ ನ್ಯೂಸ್ ಚಾನೆಲ್ಗಳಿಗೂ ಶ್ರೇಯಸ್ ಅಲ್ಲಾ ಎಂದು ಹೇಳುತ್ತಿದ್ದಾರೆ.
Be the first to comment