೩೦ ವರ್ಷ ಭೂಮಿ ಹಕ್ಕು ಅವಲೋಕನ ಕೂಟ: ಕಾಗೋಡ ತಿಮ್ಮಪ್ಪ ಅವರಿಂದ ಉದ್ಘಾಟನೆ….!!!

ವರದಿ: ಕುಮಾರ್ ನಾಯ್ಕ

ಜಿಲ್ಲಾ ಸುದ್ದಿಗಳು

ಶಿರಸಿ:

CHETAN KENDULI

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಶ್ರಯದಲ್ಲಿ ೩೦ ವರ್ಷ ಭೂಮಿ ಹಕ್ಕು ಹೋರಾಟ- ಒಂದು ಅವಲೋಕನ ಚಿಂತನ ಕೂಟವನ್ನ ದಿನಾಂಕ ಸಪ್ಟೆಂಬರ್, ೧೨ ಮುಂಜಾನೆ ೧೦:೩೦ ಕ್ಕೆ ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.


ಸದ್ರಿ ಕಾರ್ಯಕ್ರಮವನ್ನು ಮಾನ್ಯ ಶ್ರೀ ಕಾಗೋಡ ತಿಮ್ಮಪ್ಪ ಸಾಮಾಜಿಕ ಚಿಂತಕರು ಉದ್ಘಾಟಿಸಲಿದ್ದು, ರಾಜ್ಯ ಹೋರಾಟ ಸಮಿತಿ ಪದಾಧಿಕಾರಿಗಳಾದ ರಮೇಶ ಹೆಗಡೆ ಆಗುಂಬೆ, ತಿ.ನ.ಶ್ರೀನಿವಾಸ ಸಾಗರ, ಪ್ರಜಾಶಕ್ತಿ ಬೋರಯ್ಯ ಚಿತ್ರದುರ್ಗ, ರಾಮ ಕೆ ಕೊಡಗು, ಕುಮಾರ ಸಮತಲ ಕೊಪ್ಪಲ, ಕಂಸುಸಾಬ ಸಿದ್ಧಿ ಧಾರವಾಡ, ಶಂಕರ ಗದಗ, ಪಂಪಾವತಿ ಬಳ್ಳಾರಿ, ಕುಬೇರಪ್ಪ ಹಾವೇರಿ ಮುಂತಾದವರು ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅವಲೋಕನ ಚಿಂತನ ಕೂಟದಲ್ಲಿ ಭಾಗವಹಿಸಬೇಕಾಗಿ ಕೋರಿಕೆ.


ಸದ್ರಿ ಸಭೆಯಲ್ಲಿ ೩೦ ವರ್ಷ ಹೋರಾಟದ ಅವಲೋಕನ, ಮುಂದಿನ ಹೋರಾಟದ ರೂಪುರೇಷೆ ಹಾಗೂ ಸಂಘಟನೆಗೆ ಹೊಸ ಅಧ್ಯಕ್ಷ ಆಯ್ಕೆ ಕುರಿತು ಚಿಂತಿಸಿ ಕಾರ್ಯರೂಪ ನಿರೂಪಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*