ಜಿಲ್ಲಾ ಸುದ್ದಿಗಳು
ಹುಬ್ಬಳ್ಳಿ
ಅಡುಗೆ ಎಣ್ಣೆ ಪೂರೈಸುವುದಾಗಿ 27 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಗೋಕುಲ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಭದ್ರೆಯ ಕಾಲೋನಿ ಮೂಲದ ಬೆಂಗಳೂರು ನಿವಾಸಿ ಮೊಹಮ್ಮದ್ ರಿಜ್ವಾನ್ ಅಶ್ರಫ್ ಬಂಧಿತ ಆರೋಪಿಯಾಗಿದ್ದಾನೆ.
ಮೊಹಮ್ಮದ್ ಅನ್ಸಾರ್ ಎಂಬುವರು ಸಹೋದರ ಮೊಹಮ್ಮದ್ ಜುಬೇರ್, ಮೊಹಮ್ಮದ್ ಸ್ಮಾಯಿಲ್ ಹಾಗೂ ಮೊಹಮ್ಮದ್ ರಿಜ್ವಾನ್ ಅಶ್ರಫ್ ಜತೆ ಸೇರಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಟಾವರ್ ಸ್ಟಾರ್ ಕಾಂಕ್ಯಾಕ್ಟಿಂಗ್ ಟ್ರೇಡಿಂಗ್ ಅಂಡ್ ಮ್ಯಾನುಫ್ಯಾಕ್ಟರಿಂಗ್ ಎಂಬ ಕಂಪನಿ ಹೆಸರಲ್ಲಿ ಅಡುಗೆ ಎಣ್ಣೆ ಟ್ರೇಡಿಂಗ್ ಕಂಪನಿ ಆರಂಭಿಸಿದ್ದರು.
ಗ್ರಾಹಕರೊಬ್ಬರಿಗೆ ಅಡುಗೆ ಎಣ್ಣೆ ಪೂರೈಸಲೆಂದು ಹುಬ್ಬಳ್ಳಿಯ ಚನ್ನಬಸವೇಶ್ವರ ಆಯಿಲ್ ಮಿಲ್ ಜತೆ ಮಾತುಕತೆ ನಡೆಸಿದ್ದು, 27 ಲಕ್ಷ ರೂ.ಪಾವತಿಸಿದ್ದರು. 30 ಟನ್ ಎಣ್ಣೆಯನ್ನು ಉಡುಪಿಯ ಗ್ರಾಹಕರಿಗೆ ತಲುಪಿಸುವಂತೆ ಪಾಲುದಾರರಾದ ಚನ್ನಬಸವೇಶ್ವರ ಆಯಿಲ್ ಮಿಲ್ ಮಾಲೀಕರು ತಿಳಿಸಿದ್ದರು. ಆದರೆ, ಮೊಹಮ್ಮದ್ ರಿಜ್ವಾನ್ ಅಶ್ರಫ್ ಹಾಗೂ ಮಹಮ್ಮದ್ ಇಸ್ಮಾಯಿಲ್ ಹಣ ಪಡೆದು ಪರಾರಿಯಾಗಿದ್ದರು.ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನನ್ವಯ ಬೆಂಗಳೂರಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.
Be the first to comment