ಜಿಲ್ಲಾ ಸುದ್ದಿಗಳು
ಹೊನ್ನಾವರ
ಕಾಸರಕೋಡು ಟೊಂಕಾ ಭಾಗದಲ್ಲಿನ ಖಾಸಗಿ ವಾಣಿಜ್ಯ ಬಂದರು ವಿವಾದ ಇದೀಗ ಮತ್ತೆ ಜಾಗ್ರತವಾಗಿದೆ. ಕಂಪನಿಯವರು ಮತ್ತು ಮೀನುಗಾರರ ನಡುವಿನ ಆರೋಪ , ಪ್ರತ್ಯಾರೋಪ, ದೂರು ಹಾಗೂ ಪ್ರತಿ ದೂರಿಗೆ ವೇದಿಕೆಯಾಗುತ್ತಿದೆ.ಕಂಪನಿಯ ಕೆಲಸಗಾರರು ನಮಗೆ ಸ್ಥಳೀಯರಿಂದ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ ಬೆನ್ನಲ್ಲೇ ಮೀನುಗಾರರು ತಮಗೆ ಕಂಪನಿ ಕೆಲಸಗಾರರು ಎಂದು ಹೇಳಿಕೊಳ್ಳುವ ಗೂಂಡಾ ಪ್ರವ್ರತ್ತಿಯ ಕೆಲವರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸ್ಥಳೀಯರು ರಸ್ತೆ ನಿರ್ಮಾಣಕ್ಕೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ ಮತ್ತು ಮೀನುಗಾರಿಕೆ ಬಳಕೆ ಭೂಮಿಯಲ್ಲಿ ವಾಣಿಜ್ಯ ಬಂದರಿಗೆ ಸಬಂಧಿಸಿದ ರಸ್ತೆ ನಿರ್ಮಾಣಕ್ಕೆ ಅನುಮತಿಯನ್ನು ಸಂಬಂಧಪಟ್ಟ ಯಾವುದೇ ಇಲಾಖೆ ಕಂಪನಿಗೆ ನೀಡಿಲ್ಲ ಆದರೂ ಕಾಂಟ್ರಾಕ್ಟ್ರ್ ಲೈಸೆನ್ಸ್ ಇಲ್ಲದ ರಮೇಶ್ ತಿಮ್ಮಪ್ಪ ನಾಯ್ಕ ಎಂಬಾತ ಗೂಂಡಾಗಳ ಮೂಲಕ ತನ್ನ ಕಂಪನಿ ಶ್ರೀ ಚಕ್ರ ಸಿಬ್ಬಂದಿಗಳೊಂದಿಗೆ ಇಲ್ಲಿಗೆ ಬಂದು ಈ ಭಾಗದ ಮಹಿಳೆಯರನ್ನು , ವಯಸ್ಸಾದವರನ್ನು, ಎಳೆಯ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಸಿ ಬೈದು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ದುಬಾರಿ ಬೆಲೆಯ ಮೋಟಾರ್ ವಾಹನದಲ್ಲಿ ಬರುವ ಕಪ್ಪು ಸಮವಸ್ತ್ರದ ಗೂಂಡಾ ಗುಂಪೊಂದು ಬಡ ಕೂಲಿ ಕಾರ್ಮಿಕರು ಎಂದು ಗುರುತಿಸಿಕೊಂಡು ಮೀನುಗಾರರ ವಾಸ್ತವ್ಯ ಇರುವಲ್ಲಿಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಈ ಹಿಂದೆ ಹಲವರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಸಾಂಪ್ರದಾಯಿಕ ಮೀನುಗಾರರ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಮಹಿಳೆಯರ ಮಾನ,ಪ್ರಾಣ,ಜೀವ ರಕ್ಷಣೆಗಾಗಿ ಪೋಲೀಸ್ ಇಲಾಖೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಶ್ರೀ ಚಕ್ರ ಎಕ್ಸಿಮ್ ಕಂಪನಿಯ ಬಗ್ಗೆ ಕಾರ್ಮಿಕ ಇಲಾಖೆಯು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಹಶೀಲ್ದಾರ್ ನಾಗರಾಜ್ ನಾಯ್ಕ ರು ಮನವಿ ಸ್ವೀಕರಿಸಿ ನಂತರ ಪೋಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮೀನುಗಾರ ಮುಖಂಡರು, ಗ್ರಾಮಸ್ಥರು ಹಾಗೂ ಮಹಿಳೆಯರು ಉಪಸ್ತಿತರಿದ್ದರು.
Be the first to comment