ರೇಷ್ಮೆ ದ್ವಿತಳಿ ಪ್ರೇರೇಪಣಾ ತರಬೇತಿ ಕಾರ್ಯಕ್ರಮ

ವರದಿ: ಹೈದರ್‌ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ:

CHETAN KENDULI

ದೇವನಹಳ್ಳಿ ತಾಂತ್ರಿಕ ಸೇವಾ ಕೇಮದ್ರದ ವ್ಯಾಪ್ತಿಯ ತಾಲೂಕಿನ ಕೆ.ಹೊಸೂರು ಗ್ರಾಮದಲ್ಲಿ ರೇಷ್ಮೆ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನ ದ್ವಿತಳಿ ಪ್ರೇರೇಪಣಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ತಲಘಟ್ಟಪುರ ರೇಷ್ಮೆ ವಿಜ್ಞಾನಿ ಡಾ.ರಮೇಶ್ ಮಾತನಾಡಿ, ರೈತರು ಇಲಾಖೆಯಿಂದ ಸಿಗುವ ಹಲವಾರು ಯೋಜನೆಗಳನ್ನು ಪಡೆದುಕೊಳ್ಳಬೇಕು. ರೇಷ್ಮೆ ಬೆಳೆಯುವ ರೈತರು ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಹಿಪ್ಪುನೇರಳೆ ತೋಟ ಮಾಡುವವರು ರೋಗ ಮತ್ತು ಕೀಟಗಳನ್ನು ತಾಂತ್ರಿಕತೆ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯಬಹುದಾಗಿದೆ. ಇಲಾಖೆಯ ಸೌಲಭ್ಯಗಳನ್ನು ಪ್ರತಿ ರೈತರು ಪಡೆದುಕೊಳ್ಳಲು ಈ ಕಾರ್ಯಕ್ರಮವನ್ನು ರೂಪಿಸಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಕೊಯಿರ ಗ್ರಾಪಂ ಅಧ್ಯಕ್ಷೆ ರಮ್ಯ.ವಿ.ಶ್ರೀನಿವಾಸ್, ಸದಸ್ಯೆ ವೀಣಾರವಿಕುಮಾರ್, ಕೃಷಿಕ ಸಮಾಜದ ನಿರ್ದೇಶಕ ಎಚ್.ಎಂ.ರವಿಕುಮಾರ್, ರೇಷ್ಮೇ ಇಲಾಖೆ ಜಂಟಿ ನಿರ್ದೇಶಕ ಬೈರಪ್ಪ, ಜಿಲ್ಲಾ ಉಪನಿರ್ದೇಶಕ ಪ್ರಭಾಕರ್, ತಾಲೂಕು ಸಹಾಯಕ ನಿರ್ದೇಶಕ ಬೋಜಣ್ಣ, ರೇಷ್ಮೆ ಇಲಾಖಾಧಿಕಾರಿಗಳು, ರೈತರು ಇದ್ದರು.

Be the first to comment

Leave a Reply

Your email address will not be published.


*