ಬೀಳೂರು ಶ್ರೀ ಗುರುಬಸವ ಮಹಾಸ್ವಾಮಿಗಳ ಉತ್ಸವ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಇಳಕಲ್ಲ ತಾಲೂಕಿನ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರಿನಲ್ಲಿ ಇಂದು ಶ್ರಾವಣ ಮಾಸದ ನಿಮಿತ್ಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾದ  ಬೀಳೂರು ಶ್ರೀ ಗುರುಬಸವ ಮಹಾಸ್ವಾಮಿಗಳ ಉತ್ಸವ ಕಾರ್ಯಕ್ರಮ ಜರುಗಿತು.

ಶ್ರೀಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಪ್ರತಿವರ್ಷ ಶ್ರಾವಣ ಮಾಸದಲ್ಲಿ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳಲ್ಲಿ ಈ ಉತ್ಸವ ಆಚರಿಸುತ್ತ ಬಂದಿದ್ದು,ಅಂದು ಶ್ರೀಗಳ ಕುರಿತು ಪ್ರಬಂಧ ಸ್ಪರ್ಧೆ,ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಪ್ರಥಮ ಹತ್ತನೆ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನಿತಾ ಆಸಂಗಿ,ದ್ವಿತೀಯ ಅಕ್ಷತಾ ಆಸಂಗಿ,ತೃತೀಯ 9ನೇ ತರಗತಿಯ ವಿದ್ಯಾರ್ಥಿನಿ ಪ್ರಿಯಾಂಕಾ ಮಂಡಿ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮ ಕುರಿತು ಶಿಕ್ಷಕರಾದ ಸಿದ್ಧರಾಜ ಕೆಂಧೂಳಿ ಮಾತನಾಡಿ ಶ್ರೀ ಗಳು ಶಿವನಗೌಡ ಮತ್ತು ಚನ್ನಮ್ಮ ದಂಪತಿಯ ಮಗನಾಗಿ 1843ರಲ್ಲಿ ಕಲಬುರ್ಗಿ ಜಿಲ್ಲೆಯ ಶಿವಪ್ಪಯ್ಯನಹಂಗರಗಿ ಗ್ರಾಮದಲ್ಲಿ ಜನಿಸಿದರು.ಮುಂದೆ ಬೀಳೂರು ಮಠಕ್ಕೆ ಪೀಠಾಧಿಪತಿಗಳಾಗಿ ಜನರ ಸಂಕಷ್ಟವನ್ನು ನಿವಾರಣೆ ಮಾಡುವ ಮೂಲಕ ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ  ಮುಖ್ಯೋಪಾಧ್ಯಾಯರಾದ ಶ್ರೀಕಾಂತ ದಾಸರ ಶ್ರೀಗಳು ಒಂದು ರೂಪಾಯಿ ನಾಣ್ಯವನ್ನು ತಮ್ಮ ಜೋಳಿಗೆಯಲ್ಲಿ ಸಂಗ್ರಹಿಸುವುದರ ಮೂಲಕ 1906 ರಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದರು ಇಂದು ಆ ಶಿಕ್ಷಣ ಸಂಸ್ಥೆ ರಾಜ್ಯಾಧ್ಯಂತ 100ಕ್ಕೂ ಅಂಗ ಸಂಸ್ಥೆಗಳನ್ನು ಪ್ರಾರಂಭಿಸಿದೆ ಅದೆ ನಮ್ಮ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಸ್ಥೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಬಿ.ಹೆಳವರ, ಬಿ.ಎಸ್.ಕಮತರ,ವಾಯ್.ಎಸ್.ವಾಲಿಕಾರ,ಆಯ್.ಎಸ್.ಮಂಡಿ ಉಪಸ್ಥಿತರಿದ್ದರು.ಶಿಕ್ಷಕರಾದ ಎಸ್.ಬಿ.ಯಾವಗಲ್ಲಮಠ ಸ್ವಾಗತಿಸಿ ನಿರೂಪಿಸಿದರು.

Be the first to comment

Leave a Reply

Your email address will not be published.


*