ರಾಜ್ಯದಲ್ಲಿ ಸಿಗಲಿದೆ ಮೂವರಿಗೆ ಡಿಸಿಎಂ ಸ್ಥಾನ…?

Reported by: ಚೇತನ ಕೆಂದೂಳಿ

ರಾಜ್ಯ ಸುದ್ದಿ:

ಮುದ್ದೇಬಿಹಾಳ:

ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಸಂಪುಟದಲ್ಲಿ ಒಟ್ಟು 3ಡಿಸಿಎಂ ಸ್ಥಾನಗಳನ್ನು ರಚಿಸಲ ಹೈಕಮಾಂಡ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಾತಿ ಲೆಕ್ಕಾಚಾರದಲ್ಲಿ ಒಂದು ಹೆಜ್ಜೆ ಮುಂದೆ ಬಂದಿರುವ ಬಿಜೆಪಿ ಹೈಕಮಾಂಡ ರಾಜ್ಯ ದಲಿತ, ಕುರುಬ ಹಾಗೂ ಒಕ್ಕಲಿಗ ಸಮುದಾಯದ ಮೂವರಿಗೆ ಡಿಸಿಎಂ ಸ್ಥಾನ ನೀಡುವ ಪ್ರಸ್ತಾಪವನ್ನು ಹೈಕಮಾಂಡ ಮಾಡಿದೆ.



ದಲಿತ ಕೋಟಾದಲ್ಲಿ ಗೋವಿಂದ ಕಾರಜೋಳ, ಕುರುಬ ಕೋಟಾದಲ್ಲಿ ಕೆ.ಎಸ್.ಈಶ್ವರಪ್ಪ ಹಾಗೂ ಒಕ್ಕಲಿಗ ಕೋಟಾದಲ್ಲಿ ಡಾ.ಅಶ್ವತ್ಥ ನಾರಾಯಣ ಅವರ ಹೆಸರುಗಳು ಕೇಳಿಬರುತ್ತಿವೆ ಎಂದು ಹೇಳಲಾಗಿದೆ.



ಶನಿವಾರ ಬೆಳಗ್ಗೆ ಬೆಂಗಳೂರಿನ ಕೆಲವು ಶಾಸಕರನ್ನು ಕರೆಸಿಕೊಂಡು ಡಿಸಿಎಂ ಸ್ಥಾನ ನೀಡುವ ವಿಚಾರದ ಕುರಿತು ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ಸದ್ಯ ಡಿಸಿಎಂ ಹುದ್ದೆ ಸೃಷ್ಟಿಗೆ ಹೈಕಮಾಂಡ್ ಸೂಚಿಸಿರುವ ಕಾರಣ ಸಿಎಂ ವಿಚಲಿತರಾದಂತೆ ಗೋಚರಿಸುತ್ತಿದೆ.

ಇನ್ನು ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಬಂದಿಲ್ಲ, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ಶಾಸಕರು ಶನಿವಾರ ಸಂಜೆ ಬೆಂಗಳೂರಿಗೆ ಹಿಂದಿರುಗುವ ಸಾಧ್ಯತೆ ಇದೆ.

ಪಕ್ಷ ಮತ್ತು ಸರಕಾರಕ್ಕೆ ಮುಜುಗರವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ನೀವು ರಾಜ್ಯಕ್ಕೆ ಬೇಕಾದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಿ ಅದನ್ನು ನಮಗೆ ತಿಳಿಸಿ ಸಾಕು ಎಂದು ಗೃಹ ಸಚಿವ ಅಮಿತ್ ಶಾ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ.

ಅನರ್ಹ ಶಾಸಕರು ಅಶ್ವತ್ಥ ನಾರಾಯಣ ಹಾಗೂ ಬಿವೈ ರಾಘವೇಂದ್ರ ಅವರ ಜೊತೆ ಮಾತುಕತೆ ನಡೆಸಲು ನಿರಾಕರಿಸಿದ್ದರು. ಅಮಿತ್ ಶಾ ಅಥವಾ ಯಡಿಯೂರಪ್ಪ ಅವರೊಂದಿಗೇ ನಾವು ಮಾತನಾಡುತ್ತೇವೆ ಎಂದಿದ್ದರು.

Be the first to comment

Leave a Reply

Your email address will not be published.


*