ರಾಜ್ಯ ಸುದ್ದಿ:
ಮುದ್ದೇಬಿಹಾಳ:
ಪ್ರತಿ ವರ್ಷ ಶ್ರಾವಣ ಮಾಸದ ಕೊನೆ ಸೋಮವಾರದಂದು ನಡೆಯುವ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮದ ಕೊಟ್ಟೂರ ಬಸವೇಶ್ವರ ಜಾತ್ರೆಯು ಖ್ಯಾತ ಜಾನಪದ ಕಲಾವಿದ ಶಬ್ಬೀರ ಡಾಂಗೆ ಅವರಿಂದ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಜಾನಪದದಲ್ಲೆ ಗ್ರಾಮಸ್ಥರು ಮುಳುಗಿದರು.
ಹೌದು, ಶಬ್ಬೀರಡಾಂಗೆ ಎಂದರೆ ಇಡೀ ಉತ್ತರ ಕರ್ನಾಟಕವೇ ತಿರುಗಿ ನೋಡುವಂತಾಗುತ್ತದೆ. ಅವರೇ ಕಂಠವೆಂದರೆ ಹಾಗೆ ಗ್ರಾಮೀಣ ಜನರು ಎಲ್ಲಿಲ್ಲದ ಉತ್ಸಾಹದಿಂದ ಜಾತ್ರೆಯಲ್ಲಿ ಕುಣಿತಕ್ಕೆ ಮುಂದಾಗುತ್ತಾರೆ.
ಕೋಳೂರ ಜನರ ನಾಡಿಮಿಡಿತ ಅರಿತ ಕಲಾವಿದ ಶ್ರೀಶೈಲ:
ಕೊಟ್ಟೂರ ಬಸವೇಶ್ವರ ಜಾತ್ರೆಯ ಮನರಂಜನೆಯ ಜವಾಬ್ದಾರಿಯನ್ನು ಹೊತ್ತ ಖ್ಯಾತ ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಕೋಳೂರ ಜನರಿಗೆ ಸಂಪೂರ್ಣವಾಗಿ ಮನರಂಜನೆಯನ್ನು ತಮ್ಮ ನೇತೃತ್ವದ ಇಂಚರ ಮೆಲೋಡಿಸ್ ಸಾಂಸ್ಕೃತಿಕ ಕಲಾತಂಡದಿಂದ ನೀಡಿದರು.
ಪಿಎಸ್ಐ ಅವರಿಂದ ಹಾಡಿಸಿದ ಶ್ರೀಶೈಲ ಹೂಗಾರ:
ಕೋಳೂರ ಗ್ರಾಮದ ಕೊಟ್ಟೂಉ ಬಸವೇಶ್ವರ ಜಾತ್ರೆಯಲ್ಲಿ ತಮ್ಮ ತಂಡದೊಂದಿಗೆ ಮನುರಂಜನೆ ನೀಡುತ್ತಿದ್ದ ಶ್ರೀಶೈಲ ಹೂಗಾರ ಅವರು ಜಾತ್ರೆಗೆ ಬಂದುಬಸ್ತಗಾಗಿ ಆಗಮಿಸಿದ್ದ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರಲ್ಲಿನ ಕಲೆಯನ್ನು ಗುರುತಿಸಿ ಅವರಿಂದಲೂ ಸಹ ಹಾಡನ್ನು ಹಾಡಿಸಿದರು. ಪಿಎಸ್ಐ ಅವರು ಹಾಡುತ್ತಿದ್ದಂತೆ ಜನರು ಕಿಕ್ಕಿರುದು ಕಿಣಿದಿದ್ದು ಕಂಡುಬಂದಿತು.
Super sir