ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ತಡರಾತ್ರಿ ಇಳಕಲ್ ನಗರದಲ್ಲಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಮನೆಗೆ ಭೇಟಿ ನೀಡಿದ್ದರು.
ಅಲ್ಲಿ ಅಲ್ಪೋಪಹಾರ ಸೇವಿಸಿದ ನಂತರ ಕೆಲಹೊತ್ತು ವಿಜಯಾನಂದ ಅವರೊಂದಿಗೆ ಚರ್ಚಿಸಿದರು. ವಿಜಯಾನಂದ ಪತ್ನಿ ವೀಣಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ವಿನಯ್ ಕುಲಕರ್ಣಿ ಭೇಟಿ ಬೆನ್ನಲ್ಲೇ ಅವರ ಅಭಿಮಾನಿಗಳು ಕೂಡಾ ಕಾಶಪ್ಪನವರ್ ನಿವಾಸಕ್ಕೆ ಹಾಜರಾಗಿ, ಸೆಲ್ಪಿಗೆ ಮುಗಿಬಿದ್ದರು. ಉಭಯ ಮುಖಂಡರು ಪಂಚಮಸಾಲಿ ಸಮಾಜದ ಸಂಘಟನೆ ಕುರಿತು ಹಾಗೂ ಮುಂದಿನ ರಾಜಕೀಯ ಬೆಳವಣಿಗೆ ಕುರಿತ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ವಿನಯ ಕಲಕುರ್ಣಿ ಅವರು ಹಿಂದೆ ಸಚಿವರಾಗಿದ್ದ ಸಮಯದಲ್ಲಿ ಹುನಗುಂದ ಮತಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವಿಜಯಾನಂದ ಕಾಶಪ್ಪನವರಿಗೆ ಸಾಥ್ ನೀಡಿದ್ದರು. ಇಬ್ಬರೂ ಪಂಚಮಸಾಲಿ ಸಮುದಾಯದ ಮುಖಂಡರಾದ ಹಿನ್ನಲೆಯಲ್ಲಿ, ಮೀಸಲಾತಿ ಹೋರಾಟ ಹಾಗೂ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ತಮ್ಮ ನಿವಾಸಕ್ಕೆ ಬಂದ ವಿನಯ್ ಕುಲಕರ್ಣಿ ಅವರಿಗೆ ವಿಜಯಾನಂದ ಕಾಶಪ್ಪನವರ ಸನ್ಮಾನಿಸಿದರು.
Be the first to comment