ಜಿಲ್ಲಾ ಸುದ್ದಿಗಳು
ಶ್ರೀ ಶ್ರೀಮದ್ ವಿರಾಟ್ ಪೋತಲೂರು ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಯ ದೇವಾಲಯ ಉದ್ಘಾಟಿಸಿ ಒಂದು ವರ್ಷ ಕಳೆದಿದೆ. ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ನಾಗಸುಂದರಮೂರ್ತಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಜ್ಞಾನ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸ್ವಾಮಿಗೆ ವಿಶೇಷವಾಗಿ ಹೂವಿನ ಅಲಂಕಾರವನ್ನು ಮಾಡಲಾಗಿದ್ದು, ಉಪಕರ್ಮದ ದಿನ ಮತ್ತು ಪೌರ್ಣಮಿ ಪ್ರಯುಕ್ತ ಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದೆ. ಭಕ್ತಾಧಿಗಳು ಬಂದು ಸ್ವಾಮಿಯ ದರ್ಶನ ಪಡೆದು, ಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಸ್ವಾಮಿ ಕಾಲಜ್ಞಾನದ ಮಹಾ ಅವತಾರ ಪುರಷನಾಗಿ ಜನಿಸಿ, ತಮ್ಮ ಜೀವನ ಸಂದೇಶ, ಮಾರ್ಗದರ್ಶನ ಮತ್ತು ಕಾಲಜ್ಞಾನದ ಮೂಲಕ ಯಾವುದೇ ಜಾತಿ, ಧರ್ಮ ಭೇದ-ಭಾವವಿಲ್ಲದೆ, ಆಧ್ಯಾತ್ಮ ವಿದ್ಯೆಯನ್ನು ಕರುಣಿಸಿದ್ದಾನೆ. ಈ ಕ್ಷೇತ್ರವು ಪವಿತ್ರ ಪಾವನಧಾಮವಾಗಿದೆ ಎಂದು ಹೇಳಿದರು.
*ದೇವಾಲಯಕ್ಕೆ ಕೊಡುಗೆ*: ಭಕ್ತಾಧಿಗಳಾದ ಸುಶೀಲಮ್ಮ, ಮಕ್ಕಳು ಮತ್ತು ಕುಟುಂಬಸ್ಥರು ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಮತ್ತು ಗೋವಿಂದಮ್ಮ ದೇವಿಯ ಉತ್ಸವ ಮುರ್ತಿಗಳನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸ್ವಾಮಿ ಅವರ ಕುಟುಂಬಕ್ಕೆ ಮತ್ತು ಬರುವ ಭಕ್ತಾಧಿಗಳಿಗೆ ಸಕಲ ಸಿದ್ಧಿ ಕರುಣಿಸಲಿ, ಅವರ ಜೀವನ ಸದಾ ಸುಖಕರವಾಗಿರಲಿ ಎಂದು ಹಾರೈಸಿದರು. ಈ ವೇಳೆಯಲ್ಲಿ ಭಕ್ತಾಧಿಕಾಗಳಾದ ಅರವಿಂದ್, ಮುನಿಆಂಜಿನಪ್ಪ, ಶಂಕರ್, ವಸಂತ, ಕಾಳಿಂಗ, ಹರೀಶಚಾರ್ಯ ಮತ್ತು ಭಕ್ತಾಧಿಗಳು ಇದ್ದರು.
Be the first to comment