ಸರಕಾರದ ಆದೇಶ ಪತ್ರಗಳು ಇದ್ದರೂ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಸಲು ಅಡ್ಡಿ!* _ಸರ್ವೇ ನಂ. 40ರ ಸರ್ಕಾರಿ ಗೋಮಾಳದ ಮೂರು ಎಕರೆ ಜಾಗದಲ್ಲಿ 53 ಅರ್ಜಿದಾರ ಮತ್ತು ಗುತ್ತಿಗೆದಾರನ ಜಟಾಪಟಿ!_

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಕೂಗಳತೆ ದೂರದಲ್ಲಿರುವ ದೇವನಹಳ್ಳಿ ತಾಲೂಕಿನ ಮಾಯಸಂದ್ರ ಗ್ರಾಮದ ಸರ್ವೆನಂ.೪೦ರ ಸರಕಾರಿ ಗೋಮಾಳದ ಅಧಿಸೂಚಿತ ಜಾಗದಲ್ಲಿ ಜ್ಯೋತಿಪುರದ ಈಶ್ವರ್‌ಬಾಬು ಗ್ರೇಗ್ರಾನೈಟ್ ಕಲ್ಲುಗಣಿಗಾರಿಕೆ ನಡೆಸಲು ಮುಂದಾಗಿದ್ದು, ಇದೇ ಜಾಗದ ನಮೂನೆ ೫೩ಅರ್ಜಿ ಹಾಕಿಕೊಂಡಿರುವ ಯಶೋಧಮ್ಮ ಎಂಬುವವರು ಸಾಗುವಳಿ ಚೀಟಿ ಜಾಗಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇವರಿಬ್ಬರಲ್ಲಿ ಜಟಾಜಟಿ ಫೈಟ್ ನಡೆಯುತ್ತಿರುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಸರ್ವೆ ನಂ.೪೦ರಲ್ಲಿ ಸುಮಾರು ೩೨ ಎಕರೆ ಸರಕಾರಿ ಗೋಮಾಳವಿದ್ದು, ಅದರಲ್ಲಿ ಗ್ರೈಗ್ರಾನೈಟ್ ಕಲ್ಲು ಗಣಿಗಾರಿಕೆ ಈಗಾಗಲೇ ಸುತ್ತಲು ನಡೆಯುತ್ತಿದ್ದು, ಇದೀಗ ಇದೇ ಸರ್ವೆನಂ.೪೦ರಲ್ಲಿ ಗ್ರಾನೈಟ್ ಕಲ್ಲುಗಣಿಗಾರಿಕೆ ಅನುಮತಿದಾರರು ಮತ್ತು ಸಾಗುವಳಿ ಸಿಗದ ನಮೂನೆ ೫೩ ಅರ್ಜಿದಾರರ ಮದ್ಯೆ ಜಟಾಜಟಿ ನಡೆದಿದ್ದು, ಈಗಾಗಲೇ ಪೊಲೀಸ್ ಠಾಣೆಯಲ್ಲಿಯೂ ಸಹ ಪ್ರಕರಣಕ್ಕೆ ಸಂಬಂಧಿಸಿದಂತೆ, ಚರ್ಚಿಸಲಾಗಿದ್ದು, ಇತ್ಯರ್ಥಗೊಂಡಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕೆಂಬುವುದು ಯಶೋಧಮ್ಮ ಮತ್ತು ಈಶ್ವರ್‌ಬಾಬು ಇಬ್ಬರೂ ಒತ್ತಾಯಿಸಿದ್ದಾರೆ.

CHETAN KENDULI

ಮಾಯಸಂದ್ರ ೫೩ಅರ್ಜಿ ಹಾಕಿದ ಯಶೋದಮ್ಮ ಮಾತನಾಡಿ, ಸುಮಾರು ೨೫ ವರ್ಷಗಳಿಂದ ಈ ಜಾಗದಲ್ಲಿ ಬೆಳೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ೫೩ ಅರ್ಜಿಯನ್ನು ಸಹ ಹಾಕಿದ್ದೇವೆ. ಇದುವರೆಗೂ ನಮಗೆ ಸಾಗುವಳಿ ಚೀಟಿ ಬಂದಿರುವುದಿಲ್ಲ. ಸರಕಾರದಿಂದ ಇದೀಗ ಏಕಾಏಕೀ ಜ್ಯೋತಿಪುರ ಗ್ರಾಮದ ಈಶ್ವರಬಾಬು ಎಂಬುವವರು ಎರಡು ವರ್ಷದಿಂದ ನಾವು ಹಾಕಿರುವ ಬೆಳೆ ನಾಶ ಮಾಡುತ್ತಾ ಬಂದಿದ್ದಾರೆ. ರಾತ್ರೋರಾತ್ರಿ ಜೆಸಿಬಿ ಮೂಲಕ ಸರಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರಕಾರದಿಂದ ಆದೇಶ ಪಡೆದುಕೊಂಡು ಗ್ರೇಗ್ರಾನೈಟ್ ಕಲ್ಲುಗಣಿಗಾರಿಕೆ ನಡೆಸಲು ಮುಂದಾಗಿರುವ ಗುತ್ತಿಗೆದಾರ ಜ್ಯೋತಿಪುರ ಈಶ್ವರ್‌ಬಾಬು ಮಾತನಾಡಿ, ನಮಗೂ ಅವರಿಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಸರಕಾರಕ್ಕೆ ಗ್ರೇ-ಗ್ರಾನೈಟ್ ಗಣಿಗಾರಿಕೆ ನಡೆಸಲು ೨೦೧೩ರಲ್ಲಿ ಅಪ್ಲಿಕೇಷನ್ ಹಾಕಲಾಗಿತ್ತು. ೨೦೧೩ರಲ್ಲಿ ೫೩ ಅರ್ಜಿ ಹಾಕಿದ್ದೇವೆ ಎಂದು ಅರಣ್‌ಕುಮಾರ್ ಎಂಬುವವರು ಇಲ್ಲಿಗಲ್ ಗಣಿಗಾರಿಕೆ ನಡೆಸುತ್ತಿದ್ದರು. ಇವರ ಮೇಲೆ ಎಫ್‌ಐಆರ್ ಸಹ ಆಗಿರುತ್ತದೆ. ನಾವು ಸರಕಾರದ ಆದೇಶದಂತೆ, ಲೀಗಲ್ ಆಗಿ ಗ್ರೇಗ್ರಾನೈಟ್ ಗಣಿಗಾರಿಕೆ ನಡೆಸಲು ಸರಕಾರದಿಂದ ನೊಟೀಫಿಕೇಷನ್ ಸಹ ಪಡೆದುಕೊಂಡಿದ್ದೇವೆ. ಇಸಿ ಒಂದು ಆಗಬೇಕಿದೆ. ಅಷ್ಟರೊಳಗೆ ಇವರು ಇಲ್ಲಸಲ್ಲದ ತೊಂದರೆಯನ್ನು ನಮಗೆ ನೀಡುತ್ತಿದ್ದಾರೆ. ಇಸಿ ಬಂದ ನಂತರ ಕೂಡಲೇ ಪೊಲೀಸರ ರಕ್ಷಣೆ ಪಡೆದುಕೊಂಡು ಕೆಲಸ ಪ್ರಾರಂಭಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶ್ವನಾಥಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಸಹ ಇವರಿಬ್ಬರ ಮಧ್ಯೆ ಜಟಾಜಟೀ ನಡೆಯುತ್ತಲೇ ಇದೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

Be the first to comment

Leave a Reply

Your email address will not be published.


*