ರಾಜ್ಯ ಸುದ್ದಿಗಳು
ದೇವನಹಳ್ಳಿ
ಧರ್ಮ ಅಂದರೆ ಜೀವನದ ಮೌಲ್ಯವಾಗಿದೆ. ಜಗತ್ತು ಬೇರೆ ಭಾರತ ಬೇರೆ, ಮೂಲ ಚಿಂತನೆಗಳಿರುವುದು ನಮ್ಮ ದೇಶದಲ್ಲಿ ಮಾತ್ರ. ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್ ತಿಳಿಸಿದರು.ಪಟ್ಟಣದ ಆಕಾಶ್ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಂಜನೇಯಸ್ವಾಮಿ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆತ್ಮದ ಉದ್ಧಾರದ ಬಗ್ಗೆ ಯೋಚಿಸುತ್ತೇವೆ. ಎಲ್ಲರ ಸುಖವನ್ನು ನೋಡುವುದು ಆತ್ಮ. ಇದನ್ನು ಎತ್ತರಿಸುವ ಕಾರ್ಯವನ್ನು ಮಾಡುವ ದಿಕ್ಕಿನಲ್ಲಿ ಚಿಂತನೆಗಳು ನಡೆಯುತ್ತಿದೆ. ಆದರೆ, ಯುವಜನರಿಗೆ ಧರ್ಮದ ಜಾಗೃತಿಯಿಲ್ಲ. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳಲ್ಲಿ ದೇವರ ಪ್ರತಿಷ್ಟಾಪನೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವಾಗಬೇಕಾಗಿದೆ ಯುವಕರಿಗೆ ಈ ಚಿಂತನೆ ಕೊಡಬೇಕಾಗಿರುವ ಹಿರಿಯರು ಮಾಡಲಿಲ್ಲ. ಆದ್ದರಿಂದ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಸಾಗುತ್ತಿzರೆ ಎಂದರು.
ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿಯ ಬಲಿದಾನವಾಗಿದೆ. ಭಾರತೀಯರು ನಿತ್ಯ, ನಿರಂತರವಾಗಿ ಜಾಗೃತರಾಗಿಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಘಜನಿ ಮಹಮದ್ ನಿಂದ ಹಿಡಿದು ಮೌಂಟ್ ಬ್ಯಾಟನ್ ವರೆಗೂ ಹೋರಾಟ ನಡೆದಿದೆ. ಆದರೆ, ಸ್ವಾತಂತ್ರ್ಯ ಬರುವ ಒಂದು ದಿನದ ಹಿಂದೆ ದೇಶ ವಿಭಜನೆಯಾಗಿದ್ದುನೋವಿನ ಸಂಗತಿಯಾಗಿದೆ ಎಂದು ಹೇಳಿದರು.ಭಾರತ ದೇಶ ಪವಿತ್ರವಾದ ಭೂಮಿ, ವೇದಗಳ ನಾಡು, ಹಿಂದೂಸ್ಥಾನ ಎಂದು ಹೆಸರು ಪಡೆದುಕೊಂಡ ಭಾರತದಲ್ಲಿ ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಜನಿಸಿzರೆ. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿಯ ಬಲಿದಾನವಾಗಿದೆ. ಭಾರತೀಯರು ನಿತ್ಯ, ನಿರಂತರವಾಗಿ ಜಾಗೃತರಾಗಿಬೇಕು. ಇದು ಸ್ವಾತಂತ್ರ್ಯದ ಸಂದೇಶವಾಗಿದೆ. ಬಿಳಿಯರಿಂದ ಕಪ್ಪುಜನರಿಗೆ ಅಧಿಕಾರ ಹಸ್ತಾಂತರವಾದ್ದದ್ದು ಸ್ವಾತಂತ್ರ್ಯವಲ್ಲ. ದೇಶದಲ್ಲಿ ಒಂದು ಸಂಸ್ಕೃತಿ, ಧರ್ಮ ಇದೆ. ಜೀವನದ ಮೌಲ್ಯಗಳಿವೆ.ಅದನ್ನು ಉಳಿಸಲಿಕ್ಕಾಗಿ ಸ್ವಾತಂತ್ರ್ಯವನ್ನು ಸದುಪಯೋಗ ಮಾಡಬೇಕು.ಆದರೆ, ಜ್ಯಾತ್ಯಾತೀತತೆಯ ಹೆಸರಿನಲ್ಲಿ ಅಽಕಾರದ ಆಸೆಯಿಂದ ಅದನ್ನು ಪಕ್ಕಕ್ಕಿಟ್ಟಿzರೆ ಎಂದರು.ಅನ್ನಪೂರ್ಣೇಶ್ವರಿ ಕ್ಯಾಂಟೀನ್ ತಪ್ಪೇನು: ದೇಶದಲ್ಲಿ ಯಾವುದೇ ವ್ಯಕ್ತಿಗಳ ಹೆಸರುಗಳನ್ನು ಇಡುವುದಕ್ಕೆ ನಮ್ಮ ವಿರೋಧವಿದೆ. ಮನುಷ್ಯ ಎಂದ ಮೇಲೆ ಒಂದ ಒಂದು ತಪ್ಪು ಮಾಡ್ತಾರೆ. ಯಾವುದೇ ಪಕ್ಷವಿರಲಿ, ಆದರೆ, ದೇವರ ಹೆಸರು ಇಡುವುದರಲ್ಲಿ ತಪ್ಪಿಲ್ಲ. ಇದಕ್ಕೆ ವಿರೋಧ ಮಾಡುವವರಲ್ಲೂ ನಾನು ಮನವಿ ಮಾಡ್ತೇನೆ. ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು. ರಾಜಕೀಯ ಕಾರಣಕ್ಕಾಗಿ ಇದನ್ನು ಮಾಡುತ್ತಾರೆ. ದೇವರ ಹೆಸರಿನಲ್ಲಿ ರಾಜಕೀಯವಿಲ್ಲ. ವಿರೋಽಸುವವರು ಪಾಕಿಸ್ತಾನದಲ್ಲಿ ಆದರೂ ಹೋರಾಟ ಮಾಡುತ್ತಾರೆ.ಅವರು ನಮ್ಮ ದೇಶದ ಬಗ್ಗೆ ಚಿಂತನೆ ಮಾಡಲ್ಲ, ಇಲ್ಲಿನ ಮಣ್ಣಿನ ವಿಚಾರಗಳ ಆಧಾರದಲ್ಲಿ ಬದುಕೋಣ ಎಂದರು.
ದೇಶ ರಾಮ ರಾಜ್ಯವಾಗಬೇಕು: ದೇಶ ರಾಮ ರಾಜ್ಯವಾಗಬೇಕಾಗಿದೆ. ಇದು ಗಾಂಽಜಿ ಅವರ ಕನಸು ಆಗಿದೆ. ಶ್ರೀರಾಮ ಈ ದೇಶದ ಅಸ್ಮಿತೆಯಾಗಿzರೆ. ಆದರ್ಶ ಪುರುಷನಾಗಿ ಸರ್ವಶ್ರೇಷ್ಟನಾಗಿzನೆ. ಹಂತ ಹಂತದಲ್ಲಿ ರಾಮನ ಆದರ್ಶನಗಳನ್ನು ಮುಂದಿನ ಪಿಳೀಗೆಗೆ ತಿಳಿಸುವ ಕಾರ್ಯವಾಗುತ್ತದೆ ಎಂದರು. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿz, ಹಿಂದೂ ಧರ್ಮ, ಮತ್ತು ಸಂಸ್ಕೃತಿ, ಹಾಗೂ ಭಾರತೀಯತನವನ್ನು ಉಳಿಸಲಿಕ್ಕಾಗಿ ಜಗತ್ತಿನಲ್ಲಿ ಮತಗಳಿವೆ. ಒಬ್ಬ ವ್ಯಕ್ತಿಯನ್ನು ದೇವರೆಂದು ಪೂಜಿಸುತ್ತಾರೆ. ಆದರೆ, ಧರ್ಮಗಳಿಲ್ಲ, ನಮ್ಮದು ಎ ಧರ್ಮಗಳನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ಸಮಾಜವಾಗಿದೆ. ಯಡಿಯೂರಪ್ಪ ಅವರ ನಂತರ ಬಸವರಾಜ ಬೊಮ್ಮಾಯಿ ಅವರು ಧರ್ಮ ಈ ದಾರಿಯಲ್ಲಿ ಸಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ಆಕಾಶ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಮುನಿರಾಜು ಮಾತನಾಡಿ, ದೇವಾಲಯಗಳ ನಿರ್ಮಾಣದಿಂದ ಜಾತಿ, ಮತ, ಬೇಧಗಳನ್ನು ತೊರೆದು ಎಲ್ಲರೂ ಸಾಮರಸ್ಯದಿಂದ ಬದುಕುವಂತಹ ದಾರಿ ಮಾಡಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ. ದೇವಾಲಯಗಳನ್ನು ಎಲ್ಲರನ್ನೂ ಒಟ್ಟುಗೂಡಿಸುವ ಮತ್ತು ಎಲ್ಲರೂ ಸಕಾರಾತ್ಮಕವಾದ ಭಾವನೆಗಳನ್ನು ಮೂಡಿಸುವಂತಹ ಶಕ್ತಿಯನ್ನು ಹೊಂದಿಕೊಳ್ಳುವುದರಿಂದ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ರೋಗಿ ಶೀಘ್ರವಾಗಿ ಗುಣಮುಖರಾಗಿ ಹೋಗಲಿ, ಅವರನ್ನು ಗುಣಪಡಿಸುವಂತಹ eನವನ್ನು ವೈದ್ಯರಿಗೆ ಭಗವಂತ ನೀಡಲಿ ಎಂದು ಪ್ರತಿನಿತ್ಯ ಪೂಜಾ ಕಾರ್ಯಗಳನ್ನು ನೆರವೇರಿಸುವುದಾಗಿ ಹೇಳಿದರು.ಈ ವೇಳೆಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಆಕಾಶ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷೆ ಪುಷ್ಪ ಮುನಿರಾಜು, ಉಪಾಧ್ಯಕ್ಷ ಅಮರ್‌ಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಸೇರಿದಂತೆ ಹಲವಾರು ಇದ್ದರು.
Be the first to comment