ಜಾನುವಾರುಗಳಿಗೆ ಜಂತುನಾಶಕ ಲಸಿಕೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:(ಕೆಲೂರ) ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿಂದು ಜಾನುವಾರುಗಳಿಗೆ ಜಂತುನಾಶಕ ಹಾಕುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಇವರ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಯಿತು.

ಜಾನುವಾರುಗಳ ಹೊಟ್ಟೆಯಲ್ಲಿನ ಜಂತುಗಳ ತಡೆಗಟ್ಟುವಿಕೆ ಪಶುಗಳಿಗೆ ಹೊಟ್ಟೆ ಜಂತು ಹುಳುಗಳುಗಳಿಗಾಗಿ ಜಂತುನಾಶಕ ಔಷಧಿಗಳನ್ನು ನೀಡಲಾಗುವುದಿಲ್ಲ. ಇದರಿಂದಾಗಿ ಪಶುಗಳ ಆರೋಗ್ಯದ ತೊಂದರೆಯ ಜೊತೆಗೆ ಪಶುಪಾಲಕರಿಗೆ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಜಾನುವಾರುಗಳ ಹೊಟ್ಟೆಯಲ್ಲಿ ಪರಾವಲಂಭಿ ಜಂತುಗಳ ಬಾಧೆಯಿಂದ ಸಮಸ್ಯೆಗಳಾಗುತ್ತವೆ. ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ನೀಡಿದರೆ, ಪಶು ಸಂಗೋಪನೆಯು ಲಾಭದಾಯಕವಾಗಿರುತ್ತದೆ. ಜಾನುವಾರುಗಳಲ್ಲಿನ ಹೊಟ್ಟೆ ಜಂತುಗಳ ಸಮಸ್ಯೆ ಇದ್ದಾಗ ಹುಳುಗಳು ಪಶುಆಹಾರದ 30% ರಿಂದ 40% ರಷ್ಟು ತಿನ್ನುತ್ತವೆ ಅದಕ್ಕಾಗಿ ಸರಿಯಾದ ಸಮಯಕ್ಕೆ ಜಂತುನಾಶಕ ಔಷಧಿಗಳನ್ನು ನೀಡುವುದರಿಂದ ಜಾನುವಾರುಗಳಲ್ಲಿ ಹೊಟ್ಟೆ ಜಂತುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಜಾನುವಾರುಗಳಲ್ಲಿನ ಜಂತುಗಳ ಲಕ್ಷಣಗಳು:
* ಜಾನುವಾರು ಮಣ್ಣನ್ನು ತಿನ್ನಲು ಪ್ರಾರಂಭಿಸಿದಾಗ ಜಾನುವಾರು ಸುಸ್ತು ಮತ್ತು ದುರ್ಬಲವಾಗಿ ಕಂಡುಬರುತ್ತವೆ.* ದುರ್ವಾಸನೆ, ಜಲಯುಕ್ತ ಮತ್ತು ಹಸಿರು ಅತಿಸಾರ. * ಕಂದು ಮಿಶ್ರಿತ ಕೆಂಪು ಬಣ್ಣದ ರಕ್ತ ಮತ್ತು ಹುಳುಗಳು ಸಗಣಿ ಕಾಣಿಸಿಕೊಳ್ಳುತ್ತವೆ. * ಮೇವು ಸೇವಿಸುತ್ತಿದ್ದರೂ ದೇಹದ ಬೆಳವಣಿಗೆ ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯ ಗಾತ್ರ ಹೆಚ್ಚಾಗುತ್ತದೆ.*ರಕ್ತಹೀನತೆ *ಹಾಲಿನ ಉತ್ಪಾದನೆಯು ಕಡಿಮೆಯಾಗಲಾರಂಭಿಸುತ್ತದೆ *ಗರ್ಭಾವಸ್ಥೆಯ ಸಮಯದಲ್ಲಿ ಸಮಸ್ಯೆ.

ಈ ಸಂದರ್ಭದಲ್ಲಿ ಸಂತೋಷ ಹನಮಸಾಗರ ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರು, ಹೆಚ್.ಆರ್.ದಾಸರ ಪಶುವೈದ್ಯಕೀಯ ಪರಿವೀಕ್ಷಕರು ಹಾಗೂ ರೈತರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*