ದಿಡೀರ್ ದಾಳಿ ನಡೆಸಿದ ಅಧಿಕಾರಿಗಳು: ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟಗಾರರಿಗೆ ದಂಡ

Reported by: ಚೇತನ ಕೆಂದೂಳಿ

ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರಿನ ಸ್ಟೊರ್ ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗಗಳನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು.

ಮುದ್ದೇಬಿಹಾಳ:

ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುತ್ತಿದ್ದ ಮುಖ್ಯ ಬಜಾರಿನ ವಿವಿಧ ಅಂಗಡಿಗಳ ಮೇಲೆ ಬುಧವರಾ ಪುರಸಭೆ ಮುಖ್ಯಾಧಿಕಾರಿ ಎಸ್.ಎಫ್.ಈಳಗೇರ ದಾಳಿ ನಡೆಸಿ ದಂಡ ವಿಧಿಸಿದರು.

ಕಳೆದ ಎರಡು ದಿನಗಳ ಕಾಲ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡದಂತೆ ಅದೀಕಾರಿಗಳು ಸೂಚನೆಯನ್ನು ನೀಡಿದ್ದರೂ ಕೆಲ ಅಂಗಡಿಕಾರರು ಯಾವದಕ್ಕೂ ಕ್ಯಾರೆ ಎನ್ನದೆ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟಕ್ಕೆ ಮುಂದಾಗಿದ್ದರು. ಇಂತಹ ಅಂಗಡಿಗಳ ಮೇಲೆ ದಿಡೀರ್ ದಾಳಿ ನಡೆಸಿ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ತೆಗೆದುಕೊಂಡು ಮಾಲಿಕರಿಗೆ ದಂಡ ವಿಧಿಸಲಾಯಿತು.


ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರಿನ ಸ್ಟೊರ್ ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗಗಳನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು.

ದಾಳಿಯ ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಸ್.ಎಫ್.ಈಳಗೇರ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿಯಾಗುತ್ತದೆ. ಅಲ್ಲದೆ ಪ್ಲಾಸ್ಟಿಕ್‌ಗಳು ರಸ್ತೆಯಲ್ಲಿ ಬಿದ್ದು ಅವುಗಳನ್ನು ದನಗಳು ತಿನ್ನುವುದರಿಂದ ತೊಂದರೆಯಾಗುತ್ತದೆ. ಇದರಿಂದ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟವನ್ನು ಮಾಡದಂತೆ ಈಗಾಗಲೇ ಸೂಚನೆ ನೀಡಿದ್ದರೂ ಕೆಲವರು ಬಳಕೆ ಮತ್ತು ಮಾರಾಟ ಮಾಡುತ್ತಿದ್ದರು. ಆದ್ದರಿಂದ ಈ ದಿಢಿರ್ ದಾಳಿ ಮಾಡಿ ಅಂತಹ ಅಂಗಡಿಕಾರರಿಗೆ ದಂಡವಿಧಿಸಿದ್ದೇವೆ. ಅಲ್ಲದೇ ಅವರಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.



200ರಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ: 50ಕೆಜಿ ಪ್ಲಾಸ್ಟಿಕ್ ಹಾಗೂ 3800 ದಂಡ

ಬುಧವಾರ ಪ್ಲಾಸ್ಟಿಕ್ ಬಳಕೆ ಅಂಗಡಿಗಳ ಮೇಲೆ ದಾಳಿ ನಡೆಸಲು ಮುಂದಾದ ಪುರಸಭೆ ಅಧಿಕಾರಿಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಸುಮಾರು 200ಗಳು ಸಿಕ್ಕಿವೆ. ದಾಳಿ ಮಾಡಿದ ಎಲ್ಲ ಅಂಗಡಿಗಳ ಮೇಲೆ ದಂಡ ವಿಧಿಸಿ ಪ್ಲಾಸ್ಟಿಕ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಇದನ್ನು ಜಿಲ್ಲಾಧಿಕಾರಿಗಳಿಗೆ ರಹವಾನಿಸುವುದಾಗಿ ತಿಳಿಸಿದ್ದಾರೆ.

ಆಕ್ರೋಶ ವ್ಯಕ್ತಪಡಿಸಿದ ಅಂಗಡಿಕಾರರು:

ಪ್ಲಾಸ್ಟಿಕ್‌ಗಳನ್ನು ಉಪಯೋಗಿಸಲು ನಮಗೂ ಇಷ್ಟವಿಲ್ಲ. ಆದರೆ ಈಗಿರುವ ಪ್ಲಾಸ್ಟಿಕ್‌ಗಳು ನಮ್ಮ ಹಳೆಯ ಸ್ಟಾಕ್ ಆಗಿವೆ. ಇವುಗಳನ್ನು ಹಿಂದೆ ಖರಿದಿ ಮಾಡುವಾಗ ಸಾವಿರಾರು ರೋಗಿಗಳನ್ನು ನೀಡಿದ್ದೇವೆ. ಇವುಗಳು ಮಾರಾಟವಾದರೆ ನಮ್ಮ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಸಿಗುವುದೇ ಇಲ್ಲಾ. ಇದನ್ನು ಅಧಿಕಾರಿಗಳಿಗೆ ತಿಳಿಸಿದರೂ ದಂಡ ಹಾಕಿದ್ದಾರೆ. ಇದಕ್ಕೆ ಏನೂ ಮಾಡಲೂ ಸಾದ್ಯವಿಲ್ಲ. ನಮಗೆ ನಷ್ಟವಾದರೂ ಸುಮ್ಮನಿರುವ ಪರಿಸ್ಥಿತಿ ಎದುರಾಗಿದೆ ಎಂದು ಅಂಗಡಿಕಾರರು ನಮ್ಮ ಅಂಬಿಗಾ ನ್ಯೂಸ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.


 

Be the first to comment

Leave a Reply

Your email address will not be published.


*