ಮುದ್ದೇಬಿಹಾಳ:
ತಾಲೂಕಿನ ರಕ್ಕಸಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಬಸಮ್ಮ ಲಕ್ಮಣ ಬಿರಾದಾರ ಅವರನ್ನು ಅಮಾನತ್ತು ಮಾಡಿ ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ) ಉಪನಿರ್ಧೇಶಕ ಸಿ.ಪ್ರಸನ್ನಕುಮಾರ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಬಿ.ಎಲ್.ಗುರಿಕಾರ ಅವರು ಮಕ್ಕಳಿಗೆ ಸರಿಯಗಿ ಪಠ್ಯಭೋದನೆ ಮಾಡುತ್ತಿಲ್ಲ ಎಂದು ದೂರಲಾಗಿತ್ತು. ದೂರಿನ ಹಿನ್ನೆಲೆ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರು ಶಾಲೆ ಬೇಟಿ ನೀಡಿ ವರದಿ ಪಡೆದುಕೊಂಡು ಮೇಲಾಧಿಕಾರಿಗಳಿಗೆ ಕಳುಹಿಸಿದ್ದರು. ಆದರೆ ವರದಿಯನ್ನ ಒಪ್ಪದ ಶಿಕ್ಷಕಿ ಗಾಂಜಿ ಅವರ ವರದಿ ತಪ್ಪಾಗಿದೆ ಎಂದು ಮೇಲಾಧಿಕಾರಿಗಳಿಗೆ ಹೇಳಿದ್ದರು.
ನಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಆದೇಶ ಮೆರೆಗೆ ಉಪ ನಿರ್ಧೇಶಕರ ಕಚೇರಿಯ ಶಿಕ್ಷಣಾಧಿಕಾರಿ ಹಾಗೂ ಮಂಡಣಾಧಿಕಾರಿ ಎಸ್.ಎ.ಮುಜಾವರ ಅವರೊಂದ ಪ್ರತ್ಯೇಕವಾಗಿ ರವದಿ ಪಡೆದುಕೊಂಡ ನಂತರ ಶಿಕ್ಷಕಿಯರ ಗೋಲಮಾಲ ಹೊರ ಬಂದಿದ್ದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾದಿಕಾರಿಗಳ ವರದಿ ಅನ್ವಯವೇ ಶಿಕ್ಷಕಿಯನ್ನು ಅಮಾನತ್ತು ಮಾಡಲಾಗಿದೆ.
ವಿದ್ಯಾರ್ಥಿಗಳಿಂದಲೇ ದೂರು:
ರಕ್ಕಸಗಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಲ್ಲಿ ಸಹ ಶಿಕ್ಷಕಿ ಗುರಿಕಾರ ಅವರ ಬಗ್ಗೆ ವಿಚಾರಣೆ ಕೈಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳು ವಿದ್ಯಾರ್ಥಿಗಳ ದೂರನ್ನು ವರದಿಯಲ್ಲಿ ನೀಡಿದ್ದಾರೆ. ಅಲ್ಲದೇ ಶಿಕ್ಷಕಿಯು ಶಾಲೆಯಿಂದ ದೂರ ಉಳಿದು ಮಕ್ಕಳಿಗೆ ಪಾಠವೇ ಮಾಡುತ್ತಿರಲ್ಲಿಲ್ಲಾ. ಇವರ ಬದಲಿಗೆ ಬೆರೊಬ್ಬರಿಂದ ಪಾಠ ಮಾಡಿಸಲಾಗುತ್ತಿತ್ತು ಎಂಬುವುದು ಖಾತರಿಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Be the first to comment