ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ 100ಕ್ಕೆ 100 ರಷ್ಟು ಲಭಿಸಿದೆ.
ಪರೀಕ್ಷೆ ಬರೆದ ಎಲ್ಲ 25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 17 ಜನ ಶೇ 90 ಮೇಲ್ಪಟ್ಟು, 7 ಜನ ಶೇ 80 ಮೇಲ್ಪಟ್ಟು ಹಾಗೂ ಒಬ್ಬರು ಮಾತ್ರ ಶೇ 76 ಮೇಲ್ಪಟ್ಟು ಅಂಕ ಗಳಿಸಿ ಸಾಧನೆಗೈದಿದ್ದಾರೆ. ಒಟ್ಟು 23 ಜನ ಉನ್ನತ ದರ್ಜೆ,ಇಬ್ಬರು ಮಾತ್ರ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಗೆ ಪ್ರಥಮ : ಬಸವರಾಜ ತೋಟಗೇರ,ಬಸವರಾಜ ಕುಂಚಗನೂರ 625 ಕ್ಕೆ 591 ಅಂಕ (94.56%),
ಶಾಲೆಗೆ ದ್ವಿತೀಯ :ರೇಣುಕಾ ಗೋನಾಳ 625 ಕ್ಕೆ 589 ಅಂಕ (94.24%),
ಶಾಲೆಗೆ ತೃತೀಯ: ಸಂತೋಷ ಬಡಿಗೇರ 625 ಕ್ಕೆ 587 (93.92%) ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಗೌರವಾನ್ವಿತ ಶಾಸಕರಾದ ವೀರಣ್ಣ ಚರಂತಿಮಠ,ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾಂತೇಶ ಶೆಟ್ಟರ,ಕೆಲೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು,ಗ್ರಾಮದ ಹಿರಿಯರು,ನಾಗರಿಕರು,ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿಯವರು ಮೆಚ್ವುಗೆ ವ್ಯಕ್ತ ಪಡಿಸಿದ್ದಾರೆ.
Be the first to comment