ಜಿಲ್ಲಾ ಸುದ್ದಿಗಳು
ಶಿರಸಿ
ನಿನ್ನೆ ನೀಡಿದ ಮಾಹಿತಿಯಂತೆ ಶಿರಸಿಯ ಅಂಬೇಡ್ಕರ್ ಭವನದಲ್ಲಿ 400 ಡೋಸ್ ಕೋವಿಶೀಲ್ಡ ವ್ಯಾಕ್ಸಿನ್ ನೀಡಲಾಗುವುದು ಎಂದು ಮಾಹಿತಿ ನೀಡಿದ್ದ ಇಲಾಖೆ, ಇಂದು ಅದು ಕೇವಲ ಶಾಲಾ ಮಕ್ಕಳಿಗಾಗಿ ಎಂದು ಬಂದವರನ್ನು ಹಿಂದಿರುಗಿಸಿ ಕಳುಹಿಸಲಾಗಿದೆ.ಇಲಾಖೆ ನಿನ್ನೆ ನೀಡಿದ ಮಾಹಿತಿಯಲ್ಲಿ ಎಲ್ಲಿಯೂ ಇದು ಕೇವಲ ಶಾಲಾ ಮಕ್ಕಳಿಗಾಗಿ ಎಂದು ನಮೂದು ಮಾಡದೇ, ಜನರಿಗೆ ಪರ್ಯಾಪ್ತ ಮಾಹಿತಿಯೂ ನೀಡದೇ, ಇಂದು ಬೆಳಿಗ್ಗೆ ಏಕಾಏಕಿ ಕೇವಲ ಮಕ್ಕಳಿಗಾಗಿ ಎಂದಿದ್ದು, ಹಲವು ಗೊಂದಲಗಳಿಗೆ ಕಾರಣವಾಗಿದೆ.
ವ್ಯಾಕ್ಸಿನ್ ನೀಡುವ ವ್ಯವಸ್ಥೆಯನ್ನು ನಿಜವಾಗಿಯೂ ಯಾರು ನಿಯಂತ್ರಿಸುತ್ತಿದ್ದಾರೆ ಎನ್ನುವುದು ಅರ್ಥವೇ ಆಗದ ಪರಿಸ್ಥಿತಿ ಸಧ್ಯ ಶಿರಸಿಯಲ್ಲಿದೆ.ಕಾರವಾರದಲ್ಲಿ ವ್ಯವಸ್ಥಿತವಾಗಿ ವ್ಯಾಕ್ಸಿನ್ ನೀಡುವ ಕೆಲಸವಾಗುತ್ತಿದ್ದು, ಶಿರಸಿಯಲ್ಲಿ ಮಾತ್ರ ಗೊಂದಲದ ಗೂಡಾಗಿದೆ. ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಬಗ್ಗೆ ಮಾತ್ರ ಯಾವುದೇ ನಿಖರತೆಯಾಗಲಿ, ಸ್ಪಷ್ಟತೆಯಾಗಲಿ ಇಲ್ಲದೇ ಜನರಿಗೆ ಕಿರಿಕಿರಿ ಎದುರಿಸುವಂತಾಗಿದೆ.
ಶಿರಸಿಯ ಜನರು ಬೆಳ್ಳಂಬೆಳಿಗ್ಗೆ ಎರಡು ಮೂರು ಗಂಟೆಗಳ ಕಾಲ ಸಾಲಿನಲ್ಲಿ ನಿಂತು, ಇಂದಲ್ಲ ನಾಳೆ ಬನ್ನಿ ಎನ್ನಿಸಿಕೊಳ್ಳುತ್ತಿರುವುದು ಹೊಸ ವಿಷಯವೇ ಅಲ್ಲ.ಶಿರಸಿಯಲ್ಲಿ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಮಾತ್ರ ಸಂಪೂರ್ಣ ಹಳ್ಳಹಿಡಿದಿದೆ. ಹೇಳುವವರು ಕೇಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ.
Be the first to comment