ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ರೈತರು ಹೆಧರುವ ಅವಶ್ಯಕತೆ ಇಲ್ಲಾ: ಶಾಸಕ ರಾಜುಗೌಡ

ವರದಿ: ಚೇತನ ಕೆಂದೂಳಿ, ಸಂಪಾದಕರು

ಜಿಲ್ಲಾ ಸುದ್ದಿಗಳು

ಸುರಪುರ:

CHETAN KENDULI

ಬೆಳೆ ವಿಮೆ‌ ಫಲಾನುಭವಿಗಳ ಸಮೀಕ್ಷೆ ಪಟ್ಟಿಯನ್ನು ಗ್ರಾಮ ಪಂಚಾಯತ್ ಗಳಲ್ಲಿ ಪ್ರಕಟಿಸಲಾಗುವುದು.‌ ಇದರಿಂದ ವಿಮೆ‌ ಕೈ ತಪ್ಪಿಹೋದವರ ರೈತರ ಹೆಸರನ್ನು ಸೇರ್ಪಡೆ ಮಾಡಲಾಗುವುದು.‌ರೈತರು ತಹಶಿಲ್ದಾರರ ಕಚೇರಿಯಲ್ಲಿ ಬೆಳೆ ವಿಮೆ‌ಪರಿಹಾರಕ್ಕೆ ನೋಂದಾಯಿಸಬಹುದು. ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ವಿಳಂಭವಿಲ್ಲದೆ ನೀಡಲು ಮುತುವರ್ಜಿ ವಹಿಸಲು ಅಧಿಕಾರಿಗಳಿಗೆ ಶಾಸಕ ರಾಜುಗೌಡ(ನರಸಿಂಹಾನಾಯಕ) ‌ಸೂಚಿಸಿದರು.

ಸುರಪುರ ತಾಲೂಕಿನಲ್ಲಿ  ಕೃಷ್ಣಾ ನದಿ‌ ಪ್ರವಾಹದಿಂದ ಮುಳುಗಡೆ ಸಾಧ್ಯತೆ ಹಿನ್ನೆಲೆಯಲ್ಲಿ ಸುರಪುರ ತಾಲೂಕಿನಲ್ಲಿ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯ ತಿಳಿಸಿದ್ದಾರೆ.

ಅವರು ಶನಿವಾರ ಪ್ರವಾಹ ಪ್ರದೇಶಗಳಿಗೆ, ಬೆಳೆ ಮುಳುಗಡೆಯಾದ ಪ್ರದೇಶಗಳಿಗೆ ಶಾಸಕ ರಾಜೂಗೌಡ ಅವರೊಂದಿಗೆ ಭೇಟಿ ನೀಡಿ ಮಾತನಾಡಿದರು. ಕೃಷ್ಣಾ ನದಿ ನೀರಿನ ಹರಿವಿನ ಮಾಹಿತಿಯಲ್ಲಿ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ಮೇಲೆ‌ ಜಿಲ್ಲಾಡಳಿತ ತೀವ್ರ ನಿಗಾ ಇಟ್ಟಿದೆ ಎಂದರು.

ಪ್ರವಾಹದಿಂದ ಹತ್ತಿ, ಭತ್ತ ಸೇರಿ ರೈತರ ಬೆಳೆಗಳು ಭಾಗಶ: ಮುಳುಗಡೆಯಾಗಿದೆ. ನಿಯಮಾನುಸಾರ ರೈತರಿಗೆ ಪರಿಹಾರ ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ರೈತರಿಂದ ಯಾವುದೇ ದೂರು ಬರದಂತೆ ಪರಿಹಾರ ನೀಡಲಾಗುತ್ತದೆ. ಬೆಳೆ ಹಾನಿಯನ್ನು ಪರಿಶೀಲಿಸಲಾಗುತ್ತಿದೆ. ಸರಕಾರದ ಗಮನಕ್ಕೂ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ 169 ಮನೆಗಳು ಭಾಗಶಃ ಹಾನಿಯಾಗಿವೆ. ಇದಕ್ಕೆ ಪರಿಹಾರ ನೀಡಲಾಗುವುದು ಎಂದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪ ಶರ್ಮಾ, ಉಪವಿಭಾಗಾಧಿಕಾರಿ ಪ್ರಶಾಂತ್ ಹನಗಂಡಿ, ತಹಶಿಲ್ದಾರ್ ಸುಬ್ಬಣ್ಣ ಜಮಖಂಡಿ ಮತ್ತಿತರರು ಇದ್ದರು.

ಜಿಲ್ಲಾಧಿಕಾರಿ ಗಳು ಮತ್ತು ಶಾಸಕರು ಪ್ರವಾಹ ಪೀಡಿತ ಗ್ರಾಮಗಳಾದ ಶೆಳ್ಳಗಿ, ಕರ್ನಾಳ, ದೇವಪುರ ಕ್ರಾಸ್ ಮತ್ತಿತರ ಕಡೆ ಭೇಟಿ ನೀಡಿದರು.

Be the first to comment

Leave a Reply

Your email address will not be published.


*