ಪ್ರವಾಹ ಸ್ವಲ್ಪಮಟ್ಟಿಗೆ ಕಡಿಮೆ… ಅಲುಗಾಡುತ್ತಿದೆ ಜಲದುರ್ಗ ಸೇತುವೆ


      ಜೀಲ್ಲಾ ಸುದ್ದಿಗಳು


ಲಿಂಗಸುಗೂರು : (ಅ:17)ಕೃಷ್ಣಾ ನದಿಯಲ್ಲಿನ ಪ್ರವಾಹ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ತಾಲೂಕಿನ‌ ಜಲದುರ್ಗ ಸೇತುವೆಯ ಮೇಲೆ ಜನರ ಸಂಚಾರ ಆರಂಭವಾಗಿದೆ. ಸೇತುವೆಯ ಕೆಳಭಾಗದಲ್ಲಿರುವ ಪಿಲ್ಲರ್ ಗಳು ನೀರಿನ ರಭಸಕ್ಕೆ ಸರಿಯುತ್ತಿರುವ ಪರಿಣಾಮ ಸೇತುವೆಯ ಮೇಲ್ಭಾಗ ಅಲುಗಾಡುತ್ತಿದೆ. ಇದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕದ ಛಾಯೆ ಮೂಡಿಸಿದೆ.

7 ಲಕ್ಷ ಕ್ಯೂಸೆಕ್ ಗೂ ಅಧಿಕ‌ ನೀರನ್ನು ನದಿಗೆ ಹತಿಬಿಟ್ಟಿದ್ದರಿಂದ ಜಲದುರ್ಗ ಸೇತುವೆ ಮುಳುಗಡೆಯಾಗಿತ್ತು. ಇದರಿಂದ ಜಲದುರ್ಗ, ಯಳಗುಂದಿ, ಹಂಚಿನಾಳ, ಯರಗೋಡಿ, ಕಡದರಗಡ್ಡಿ ಗ್ರಾಮಗಳು ನಡುಗಡ್ಡೆಗಳಾಗಿ ಮಾರ್ಪಟ್ಟಿದ್ದವು. ಇಂದಿನಿಂದ ನದಿಗೆ 7 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ನೀರು ಸೇತುವೆಯ ಕೆಳಭಾಗದಲ್ಲಿ ಹರಿಯುತ್ತಿದೆ. ಆದರೆ, ಸೇತುವೆಯ ಕೆಳಗಡೆ ಇರುವ ಪಿಲ್ಲರ್ ಗಳು ನೀರಿನ ರಭಸಕ್ಕೆ ಹಾನಿಗೊಳಗಾದ ಸಂಭವ ಇರುವ ಪರಿಣಾಮ ಮೇಲ್ಸೆತುವೆಯು ಅಲುಗಾಡುತ್ತಿದೆ.

ಮುನ್ನೆಚ್ಚರಿಕೆ

ಸೇತುವೆಯು ಅಲುಗಾಡುತ್ತಿರುವ ಪರಿಣಾಯ ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನಗಳನ್ನು ಮಾತ್ರ ಸೇತುವೆಯ ಮೇಲೆ ಸಂಚಾರಕ್ಕೆ ಆಸ್ಪದ ನೀಡಲಾಗಿದೆ. ದೊಡ್ಡ ವಾಹನಗಳ ಓಡಾಟದಿಂದ ಸೇತುವೆ ಮುರಿಯುವ ಸಾಧ್ಯತೆ ಇರುವುದರಿಂದ ಯಾವುದೇ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡದೇ ಪೋಲಿಸರು ಬಾರಿಕೇಡ್ ಗಳನ್ನು ಹಾಕಿ, ಸೇತುವೆಯ ಎರಡೂ ಬದಿ‌ ಕಾವಲು ಕಾಯುತ್ತಿದ್ದಾರೆ

 

Be the first to comment

Leave a Reply

Your email address will not be published.


*