Sharanappa Helavr ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದ ಕಿಡಿಗೇಡಿಗಳು ಹಣಕ್ಕಾಗಿ ಬೇಡಿಕೆ ಇಟ್ಟು, ಪರಿಚಿತರಿಂದ ಹಣವನ್ನು ಲಪಟಾಯಿಸುವ ಘಟನೆ ನಡೆದಿದೆ.ಫೇಸ್‍ಬುಕ್ ಗ್ರಾಹಕರೇ ಎಚ್ಚರ…ಎಚ್ಚರ… ನಿಮ್ಮ ಹೆಸರಲ್ಲಿ ನಿಮ್ಮ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಹೋಗಿರಬಹುದು ಒಮ್ಮೆ ಚೆಕ್ ಮಾಡಿಕೊಳ್ಳಿ. ಇವತ್ತು ಫ್ರೆಂಡ್ ರಿಕ್ವೆಸ್ಟ್ ಹೋಗುತ್ತೆ. ನಾಳೆ ಮೆಸೇಂಜರ್‍ನಲ್ಲಿ ಹಣ ಕೇಳ್ತಾರೆ.ಚೆನ್ನಾಗಿರೋ ನಮಗೆ ಆಸ್ಪತ್ರೆಯ ಐಸಿಯುನಲ್ಲಿ ಮಲಗಿಸ್ತಾರೆ. ಯಾಕಂದ್ರೆ, ಅಂತಹದ್ದೊಂದು ಪ್ರಕರಣ ಇಂದು ನನ್ನ ಹೆಸರಿನಲ್ಲೆ ಸೃಷ್ಟಿ ಸಿದ ಫೇಸ್‌ಬುಕ್ ಅಕೌಂಟ್ ಬೆಳಕಿಗೆ ಬಂದಿದೆ.
ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ Sharanappa Helavr ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದ ಆನ್‌ಲೈನ್ ಖದೀಮರು, ಪರಿಚಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡುವಂತೆ ಕೇಳುತ್ತಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಇಂತಹ ಘಟನೆ ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಬೆಳಕಿಗೆ ಬಂದದ್ದು ಇಂದು ಬೆಳಿಗ್ಗೆ ಸಾಕಷ್ಟು ಸ್ನೇಹಿತರಿಗೆ ಸಂದೇಶ ಬಂದಿದ್ದು, 15,000 ರೂ phonepe,goglepe ಮೂಲಕ ಖಾತೆಗೆ ಹಣ ಹಾಕಿ ಎಂದು ಕೇಳಿಕೊಂಡಿದ್ದಾರೆ. ಇದರಿಂದ ಅನುಮಾನಗೊಂಡ ಸ್ನೇಹಿತರು ಕೂಡಲೇ ಶರಣಪ್ಪ ಹೆಳವರ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಶರಣಪ್ಪ ತಮ್ಮ ಫೇಸ್‌ಬುಕ್ ಖಾತೆ ಪರಿಶೀಲಿಸಿದಾಗ ಅಂತಹ ಯಾವುದೇ ಸಂದೇಶ ಹೋಗಿರಲಿಲ್ಲ.
Be the first to comment