ಜಿಲ್ಲಾ ಸುದ್ದಿಗಳು
ಬಾಗಲಕೋಟೆ:(ಇಳಕಲ್ಲ)ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ರಾಜ್ಯ ಗೌರವಾಧ್ಯಕ್ಷರಾಗಿ ಆಯ್ಕೆ ಆದ ನಂತರ ಪ್ರಥಮ ಬಾರಿಗೆ ಇಂದು ಇಳಕಲ್ ನಗರಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ “ಶ್ರೀ ಮಲ್ಲಿಕಾರ್ಜುನ ಬಿ ಬಳ್ಳಾರಿ” ರವರಿಗೆ ಇಳಕಲ್ ತಾಲ್ಲೂಕು ಶಾಖೆಯ ಪರವಾಗಿ “ಗೌರವ ಸನ್ಮಾನ” ಕಾರ್ಯಕ್ರಮವನ್ನು ಇಳಕಲ್ ನಗರದ ತಹಶಿಲ್ದಾರರ ಕಾರ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶ್ರೀ ಎಂಬಿ ಬಳ್ಳಾರಿ ರವರು ಇಳಕಲ್ ತಾಲ್ಲೂಕು ಶಾಖೆಯ ಪರವಾಗಿ ಸನ್ಮಾನ ಮಾಡಿದ್ದಕ್ಕೆ ಧನ್ಯವಾದ ತಿಳಿಸುತ್ತಾ;ತವರು ತಾಲೂಕಿನ ಸನ್ಮಾನ ಯಾವಾಗಲೂ ನೆನಪಿನಲ್ಲಿ ಉಳಿಯುವುದು ಎಂದರು ಹಾಗೂ ಇಳಕಲ್ ತಾಲ್ಲೂಕು ಶಾಖೆಗಾಗಿ ನೌಕರರ ಭವನ ನಿರ್ಮಾಣಕ್ಕಾಗಿ ನಿವೇಶನದ ಕಡತವು ಜಿಲ್ಲಾಧಿಕಾರಿಗಳ ಹಂತದಲ್ಲಿದ್ದು,ತ್ವರಿತವಾಗಿ ನಿವೇಶನ ಮಂಜೂರಿಸಲು ಪ್ರಯತ್ನ ಮಾಡಲಾಗುವುದು ಎಂದರು. ಹಾಗೂ ಸರ್ಕಾರಿ ನೌಕರರಿಗಾಗಿ ಕ್ಯಾಂಟಿನ್ ಪ್ರಾರಂಭ ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಇಳಕಲ್ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ರವರು ಜಿಲ್ಲಾಧ್ಯಕ್ಷರು ಅತ್ಯಂತ ಪಾದರಸವಾಗಿ ಕಾರ್ಯನಿರ್ವಹಿಸುತ್ತಿದ್ದು,ಇಳಕಲ್ ತಾಲ್ಲೂಕು ಶಾಖೆಯ ಮೇಲೆ ವಿಶೇಷವಾದ ಪ್ರೀತಿ ಇದ್ದು,ನಿವೇಶನ ಮಂಜೂರು ಹಾಗೂ ಕ್ಯಾಂಟಿನ್ ಪ್ರಾರಂಭ ಮಾಡಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದಕ್ಕೆ ತಾಲ್ಲೂಕು ಸಮಸ್ತ ಸರಕಾರಿ ನೌಕರರ ಪರವಾಗಿ ಧನ್ಯವಾದ ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ರಾಜ್ಯ ಪರಿಷತ್ತು ಸದಸ್ಯರಾದ ಶ್ರೀ ಈಶ್ವರ ಗಡ್ಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಆರ್ ಎಂ ಮಾಸರೆಡ್ಡಿ,ಜಿಲ್ಲಾ ಘಟಕದ ಖಜಾಂಚಿಗಳಾದ ಶ್ರೀ ಎಂ ಎಸ್ ಬೀಳಗಿ, ಖಜಾಂಚಿಗಳಾದ ಶ್ರೀ ಎಂ ಎಚ್ ಗೌಡರ, ಗೌರವಾಧ್ಯಕ್ಷರಾದ ಶ್ರೀ ಎಸ್ ಎನ್ ಗಡೇದ ರವರು ಮಾತನಾಡಿದರು.ಇಳಕಲ್ ಶಿಕ್ಷಕರ ಸಂಘದ ಪರವಾಗಿ ಗೌರವ ಸನ್ಮಾನವನ್ನು ಸಹ ಇದೇ ಸಂದರ್ಭದಲ್ಲಿ ಮಾಡಲಾಯಿತು.
ಕಾರ್ಯಕ್ರಮದಲ್ಲಿಎಸ್ ಡಿ ಮಲಗಿಹಾಳ, ಶರಣಗೌಡ ಕೊಣ್ಣೂರ,ಶ್ರೀಪಾಲ ಪತ್ತಾರ,ಶಂಕರ ಖತ್ರಿ,ಅನಿತ್ ನಾಯಕ,ಶಂಕರಗೌಡ ಹೀರೆಗೌಡರ,ಎಸ್ ಎಸ್ ರೇಶ್ಮಿ,ಪಿ ಎಸ್ ಲೂತಿಮಠ,ಬಿ ಕೆ ಕುಂಟೋಜಿ,ಎಸ್ ಬಿ ಬಿಜಾಪುರ, ಕುಬೇರ ಹೊಂಗಲ್,ವಿಜಯ ಗುಡಿಹಿಂದಿನ, ಭೀಮಣ್ಣ ಹೊಸಮನಿ,ಗೋರಖನಾಥ ರಾಠೋಡ ಹಾಗೂ ಪದಾಧಿಕಾರಿಗಳು, ನೌಕರ ಬಾಂಧವರು ಭಾಗವಹಿಸಿದ್ದರು.
Be the first to comment