ಬಿಗ್ ಇಂಪ್ಯಾಕ್ಟ್
ಹದಿನೈದು ಇಪ್ಪತ್ತು ದಿನಗಳಾದರೂ ಕಸ ವಿಲೇವಾರಿ ಮಾಡಲು ಕ್ಯಾರೆ ಎನ್ನದ ಗುಡೂರ (ಎಸ್.ಸಿ) ಗ್ರಾಮಾಡಳಿತ ಎಂಬ ಸುದ್ದಿಯನ್ನು ಪ್ರಕಟಿಸಲಾಗಿತ್ತು
ಬಾಗಲಕೋಟೆ:(ಗುಡೂರ) ಗ್ರಾಮದ ಬಹುತೇಕ ಪ್ರಮುಖ ರಸ್ತೆಗಳ ಮೇಲೆ ಗಾಜಿನ ಚೂರು, ಪ್ಲಾಸ್ಟಿಕ್ ಹಾಗೂ ನಿರುಪಯುಕ್ತ ವಸ್ತುಗಳು, ಸಾರಾಯಿ ಬಾಟ್ಲಿ ಹಾಗೂ ಇತರೆ ಹಲವಾರು ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಒಂದೇ ದಿನದಲ್ಲಿ ಸಂಗ್ರಹವಾಗುವ ಕಸವನ್ನು ಹದಿನೈದು ಇಪ್ಪತ್ತು ದಿನ ಆದರೂ ಕಸದ ರಾಶಿ ಬಿದ್ದರು ಯಾರೊಬ್ಬ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ.ನಾಗರಿಕರು ಕಸಗಳನ್ನು ಮನಬಂದಂತೆ ರಸ್ತೆಬದಿಗೆ ಚೆಲ್ಲುತ್ತಾರೆ ಎಂಬ ಅಂಬಿಗ್ ನ್ಯೂಸ್ ವರದಿ ಪ್ರಕಟವಾದ ಬೆನ್ನಲ್ಲೆ ವರದಿಗೆ ಸ್ಪಂದಿಸಿ ಜೆಸಿಬಿ ಯಂತ್ರದ ಮೂಲಕ ಗುಡೂರ ಗ್ರಾಮದ ಕಸ ವಿಲೆವಾರಿಗೆ ಪಿಡಿಓ ಬಸವರಾಜ ರೇವಡಿ ಕೆಲಸವನ್ನು ಪ್ರಾರಂಭಿಸಿದ್ದಾರೆ.ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸುವುದರ ಜೊತೆಗೆ ಗ್ರಾಮ ಪಂಚಾಯತಿ ಅಧಿಕಾರಿಗಳ ಕೆಲಸ ಹೀಗೆ ಮುಂದುವರೆಯಲಿ ಎನ್ನುವುದೇ ಗ್ರಾಮಸ್ಥರ ಆಶಯ.
SHARANAPPA HELAWAR
Be the first to comment