ಗಾಯರಾನ ಆಶ್ರಯ ಯೋಜನೆ ಪ್ಲಾಟ್ ಅತಿಕ್ರಮಣ; ಖುಲ್ಲಾ ಪಡಿಸಿಕೊಡುವಂತೆ ಎಸಿ ಆಕೃತಿ ಬನ್ಸಾಲ್‍ಗೆ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿ 

CHETAN KENDULI

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಸ.ನಂ 51 ರಲ್ಲಿ ಸರಕಾರವು ಗಾಯರಾನ ಆಶ್ರಯ ಯೋಜನೆಯಲ್ಲಿ ನಿವೇಶನಕ್ಕಾಗಿ 16 ಪ್ಲಾಟ್‍ಗಳನ್ನು ಹಂಚಲಾಗಿತ್ತು. ಆದರೆ ಈ ಜಾಗವನ್ನು ಸ.ನಂ 50 ಮತ್ತು 52 ರವರು ಅತಿಕ್ರಮಣ ಮಾಡಿದ್ದಾರೆ ಇದನ್ನು ಖುಲ್ಲಾ ಪಡಿಸಿಕೊಡುವಂತೆ ಶಿರಶಿ ಎಸಿ ಆಕೃತಿ ಬನ್ಸಾಲ್ ಅವರಿಗೆ ಮಂಗಳವಾರ ಸನವಳ್ಳಿ ಗ್ರಾಮದ ಫಲಾನುಭವಿಗಳು ಮನವಿ ಸಲ್ಲಿಸಿದ್ದಾರೆ.

ಸರಕಾರವು ಗಾಯರಾನ ಆಶ್ರಯ ಯೋಜನೆಯಲ್ಲಿ ನಿವೇಶನ ಹಂಚಿದ್ದು ಅದನ್ನು ಜಮೀನದಾರರಾದ ಶಿವಲಿಂಗಪ್ಪ ಮತ್ತು ಮಕ್ಕಳು ಹಾಗೂ ಭೀಮಣ್ಣ ಎಂಬುವರು ಅತಿಕ್ರಮಣ ಮಾಡಿದ್ದಾರೆ. ಪ್ಲಾಟನ್ನು ಕೇಳಲು ಹೋದರೆ ಅತಿಕ್ರಮಣದಾರರು ಮಚ್ಚು ಕೊಡಲಿಗಳನ್ನು ತಂದು ಹೊಡೆಯಲು ಬರುತ್ತಿದ್ದಾರೆ. ಈ ಪ್ಲಾಟ್‍ಗಳನ್ನು ಖುಲ್ಲಾಪಡಿಸುವ ಕುರಿತು ಇಲ್ಲಿನ ತಹಸೀಲ್ದಾರರಿಗೆ 107 ಕಲಂ ಅಡಿಯಲ್ಲಿ ದೂರು ಸಲ್ಲಿಸಿದರು. ಯಾವುದೇ ಕ್ರಮ ಕೈಗೊಂಡಿಲ್ಲ. ಆದಕಾರಣ ಅತಿಕ್ರಮಣವನ್ನು ಖುಲ್ಲಾ ಪಡಿಸಿ ಮನೆಗಳನ್ನು ಕಟ್ಟಲು ಅನುವು ಮಾಡಿಕೊಡಬೇಕೆಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ಬಾಷಾಸಾಬ ಸಿದ್ದಿ, ಭೈರಪ್ಪ ಹನಕನಳ್ಳಿ, ಫಕ್ಕಿರಪ್ಪ ಕೇರಿಹೊಲದವರ, ಅಶೋಕ ಮಟ್ಟಿಮನಿ, ಶಿವಮೂರ್ತಯ್ಯಾ ಹಿರೇಮಠ, ಗಂಗಪ್ಪ ಕೇರಿ ಹೊಲದವರ, ಶಂಭು ಕೇರಿಹೊಲದವರ, ಹಸನಸಾಬ ಸಿದ್ದಿ, ನಾಗಪ್ಪ ಯಲ್ಲಾಪುರ ಮತ್ತು ತಿರಕಪ್ಪ ಸುಣಗಾರ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*