ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಆಶ್ರಯ ಪಡೆದಿರುವ ಕಮಲದಿನ್ನಿ, ಗಂಗೂರ, ಕುಂಚಗನೂರ ಗ್ರಾಮದ ಪ್ರವಾಹಪೀಡಿತರನ್ನು ಬೇಟಿ ಮಾಡಿದ ಸಂಸದ ರಮೇಶ ಜಿಗಜಿಣಗಿ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ
ಮುದ್ದೇಬಿಹಾಳ:
ತಾಲೂಕಿನ ನದಿತೀರದ ಗ್ರಾಮಗಳಾದ ನಾಗರಾಳ, ಹಂಡರಗಲ್ಲ, ಗಂಗೂರ, ಕಮಲದಿನ್ನಿ, ಕುಂಚಗನೂರ, ದೇವೂರ ಸೇರಿದಂತೆ ಕೃಷ್ಣಾ ನದಿಯ ಪ್ರವಾಹಕ್ಕೆ ಒಳಗಾದ ಗ್ರಾಮಗಳಿಗೆ ರವಿವಾರ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಬೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಪ್ರವಾಹಕ್ಕೆ ಒಳಗಾದ ಜನರನ್ನು ಬೇಟಿ ಮಾಡಿ ಅವರ ಅಹವಾಲುಗಳನ್ನು ಸ್ವಿಕರಿಸಿದರ.
ಸಂತ್ರಸ್ತರು ಭಯಪಡುವ ಅಗತ್ಯವಿಲ್ಲ: ಜಿಗಜಿಣಗಿ
ಪ್ರವಾಹಕ್ಕೆ ಒಳಗಾದ ಜನರಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಆದರೆ ಪ್ರವಾಹಪೀಡಿತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಈಗಾಗಲೆ ತಾಲೂಕಾಮಟ್ಟದ ಅಧಿಕಾರಿಗಳು ಪ್ರವಾಹದಿಂದ ಆಗಿರುವ ಹನಿಯ ಬಗ್ಗೆ ವರದಿ ಪಡೆದುಕೊಳ್ಳುತ್ತಿದ್ದು ವರದಿ ಪೂರ್ಣವಾದ ನಂತರ ಅದನ್ನು ಸರಕಾರಕ್ಕೆ ಸಲ್ಲಿಸಿ ಸೂಕ್ತ ಪರಿಹಾರ ಒದಗಿಸಲಾಗುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
“ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದ್ದು ವಿಜಯಪುರ ಜಿಲ್ಲೆಯಲ್ಲಿ ಪ್ರವಾಹಪೀಡಿತರಿಗೆ ಸೂಕ್ತ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪ್ರವಾಹಪೀಡಿತರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು.”-ರಮೇಶ ಜಿಗಜಿಣಗಿ, ಸಂಸದರು, ವಿಜಯಪುರ.
ವರದಿ: ಚೇತನ ಕೆಂದೂಳಿ.
Be the first to comment