ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ : ನಡುಗಡ್ಡೆಯಲ್ಲಿ ಸಿಲುಕಿದವರ ರಕ್ಷಣೆ


     ರಾಜ್ಯ ಸುದ್ದಿಗಳು


ಲಿಂಗಸುಗೂರು : (ಅ:8)ಕೃಷ್ಣಾ ನಡುಗಡ್ಡೆಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸಿಲುಕಿಕೊಂಡಿದ್ದ ಗರ್ಭಿಣಿಯೂ ಸೇರಿ 6 ಜನರನ್ನು ಶನಿವಾರ ಸಂಜೆ ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಸೇರಿಸಲಾಗಿದೆ.

ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದರಿಂದ ಬೋಟ್ ನಲ್ಲಿ ಸಂತ್ರಸ್ತರ ಬಳಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಆಡಳಿತ ಸೇನಾ ಹೆಲಿಕಾಪ್ಟರ್ ಗೆ ಮೊರೆ ಹೋಗಿತ್ತು.

ತಾಲೂಕಿನ ಯಳಗುಂದಿ ಬಳಿಯ ಕರಕಲಗಡ್ಡಿಯಲ್ಲಿ ಸಿಲುಕಿದ್ದ ಕುಟುಂಬದ ಆರು ಜನ ಸದಸ್ಯರು ಇಂದು ಸುರಕ್ಷಿತವಾಗಿ ದಡ ಸೇರಿದ್ದಾರೆ.

ಹಂಚಿನಾಳ ಗ್ರಾಮದ ಗಂಜಿಕೇಂದ್ರದಲ್ಲಿ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕೃಷ್ಟೆಯ ಭೋರ್ಗರೆತ 6 ಲಕ್ಷ ಕ್ಯೂಸೆಕ್ ಗೂ ಹೆಚ್ಚಾಗಿದೆ.‌ ಯರಗೋಡಿ ಹಾಗೂ ಜಲದುರ್ಗ ಸೇತುವೆಗಳೂ ಮುಳುಗಿವೆ. ಪರಿಣಾಮ ಯಳಗುಂದಿ, ಕಡದರಗಡ್ಡಿ, ಹಂಚಿನಾಳ, ಯರಗೋಡಿ, ಜಲದುರ್ಗ ಗ್ರಾಮಗಳು ಬಾಹ್ಯ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡಿವೆ.

ಸಂತ್ರಸ್ತರ ಜೊತೆಗೆ ಕೆಲ ಅಧಿಕಾರಿಗಳೂ ನಡುಗಡ್ಡೆಯಲ್ಲಿ ಸಿಲುಕಿಕೊಂಡು ಗಂಜಿಕೇಂದ್ರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ ಎನ್ನುವ ಮಾಹಿತಿ ಇದೆ.

ವರದಿ : ಅಮರೇಶ್

Be the first to comment

Leave a Reply

Your email address will not be published.


*