ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮಕ್ಕೆ ಎಂಎಲ್ಸಿ ಸುನೀಲಗೌಡ ಪಾಟೀಲ ಬೇಟಿ

Reported by: Chetan kenduli

ಮುದ್ದೇಬಿಹಾಳ:

ತಾಲೂಕಿನ ಕುಂಚಗನೂರ, ಕಮಲದಿನ್ನಿ, ಮಸೂತಿ, ನಾಗರಾಳ, ಗಂಗೂರ ಗ್ರಾಮದ ಪ್ರವಾಹಪೀಡತರನ್ನು ಬೇಟಿ ಮಾಡಿದ ಎಂಎಲ್ಸಿ ಸುನೀಲಗೌಡ ಪಾಟೀಲ ಸಂತ್ರಸ್ತರಿಗೆ ಜಮಖಾನ ಮತ್ತು ಸಿರೆಗಳನ್ನು ವಿತರಿಸಿ ಸಾಂತ್ವ ಹೇಳಿದರು.



ಸಂತ್ರಸ್ತರಿಗೆ ವಿತರಿಸುವುದು ಮಾನವಿಯತೆಗಾಗಲ್ಲಾ. ಅದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಯಾವ ಸಂತ್ರಸ್ತರು ಧನ್ಯತೆ ಹೇಳುವ ಅಗತ್ಯವಿಲ್ಲಾ ಎಂದು ಸುನೀಲಗೌಡ ಪಾಟೀಲ ಹೇಳಿದರು.ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಮುದ್ದೇಬಿಹಾಳ ತಾಲೂಕಿಗೆ ಇಂತಹ ಪ್ರವಾಹ ಹಿಂದೆಯೂ ಬಂದಿತ್ತು. ಆದರೆ ಅಂದು ಪ್ರವಾಹಪೀಡಿತರಿಗೆ ಸರಕರದಿಂದ ಸಿಗಬೇಕಾದ ಸೌಕರ್ಯಗಳನ್ನು ಒದಗಿಸಿಕೊಡಲಾಗಿತ್ತು. ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಏಕಪಕ್ಷೀಯ ಸರಕಾರವಿದ್ದು ಮುದ್ದೇಬಿಹಾಳ ತಾಲೂಕಿನ ಪ್ರವಾಹಪೀಡಿತರಿಗೆ ಶೀಘ್ರದಲ್ಲೇ ಪರಿಹಾರ ಒದಗಿಸುವ ಕೆಲಸ ವಾಗಬೇಕು ಎಂದು ಅವರು ಹೇಳಿದರು.

ಇದೇ ವೇಳೆಯಲ್ಲಿ ತಹಸೀಲ್ದಾರ ವಿನಯಕುಮಾರ ಪಾಟೀಲ ಅವರಿಂದ ಪ್ರವಾಹದಿಂದ ಆದಂತಹ ಹಾನಿ ಬಗ್ಗೆ ಎಂಎಲ್ಸಿ ಸುನೀಲಗೌಡ ಮಾಹಿತಿ ಪಡೆದುಕೊಂಡು ಪ್ರವಾಹಪೀಡಿತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ, ಗ್ರಾಮ ಪಂಚಾಯತಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಮಾಜಿ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಎಸ್.ಎಂ.ಮುರಾಳ, ಬಸವರಾಜಗೌಡ ಕೊಂಗಿ, ಅಪ್ಪು ಮೋಟಗಿ, ಬಸವರಾಜ ಗಡೇದ, ಯಲ್ಲಪ್ಪ ಹಡಲಗೇರಿ, ವಾಯ್.ಎಚ್.ವಿಜಯಕರ, ಶರಣು ಚಲವಾದಿ, ತಾಲೂಕಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಅಶೋಕ ಅಜಮನಿ, ಬೀರಪ್ಪ ಯರಝರಿ, ಚಿನ್ನು ನಾಡಗೌಡ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ ಇದ್ದರು.

Be the first to comment

Leave a Reply

Your email address will not be published.


*