ನಕಲಿ ದಾಖಲೆ ಸೃಷ್ಟಿಸಿ ದೇಶದ್ರೋಹ ಎಸಗುವವರ ಮೇಲೆ ಉಗ್ರ ಕ್ರಮಕ್ಕೆ ಹಿಂಜಾವೇ ಆಗ್ರಹ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENSULI

ಶಿರಸಿ: ಇತ್ತೀಚೆಗೆ ಬೆಳಕಿಗೆ ಬಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಯ ಬಳಿ ದೊರೆತಿರುವ ನಕಲಿ, ಅಕ್ರಮ ದಾಖಲೆಗಳ ಹಿಂದೆ ದೊಡ್ಡ ದುಷ್ಟಶಕ್ತಿಗಳ ಕೈವಾಡವಿದ್ದು, ಪೆÇೀಲಿಸ್ ಇಲಾಖೆ ಈ ಕೂಡಲೇ ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಶಿರಸಿ ಜಿಲ್ಲಾಧ್ಯಕ್ಷ ಗೋಪಾಲ ದೇವಾಡಿಗ ಆಗ್ರಹಿಸಿದ್ದಾರೆ.ಶುಕ್ರವಾರ ನಗರದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಕೆಲ ದಿನಗಳ ಹಿಂದೆ ಪಾಕಿಸ್ತಾನಿ ಪ್ರಜೆಯನ್ನು ಪತ್ತೆಹಚ್ಚಿ ಬಂಧಿಸಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದ ವಿಷಯವಾಗಿದೆ. ಇದರ ಜೊತೆಗೆ ಬಂಧಿತ ಮಹಿಳೆಯ ಬಳಿ ನಕಲಿ ಆಧಾರ ಕಾರ್ಡ, ನಕಲಿ ಪಾಸ್ ಪೆÇೀರ್ಟ್, ನಕಲಿ ರೇಶನ್ ಕಾರ್ಡ, ನಕಲಿ ಓಟರ್ ಕಾರ್ಡ ಸೇರಿದಂತೆ ಇತರ ಅಕ್ರಮ ದಾಖಲೆಗಳು ದೊರಕಿರುವುದನ್ನು ಕೂಡಾ ಬಹಿರಂಗವಾಗಿದೆ.

ಇದು ಅತ್ಯಂತ ಗಂಭೀರ ವಿಚಾರವಾಗಿದ್ದಲ್ಲದೇ ದೇಶದ ರಕ್ಷಣಾತ್ಮಕ ವಿಚಾರದೊಂದಿಗೆ ತಳಕು ಹಾಕಿಕೊಂಡಿರುವುದರಿಂದ ಈ ವಿಚಾರಕ್ಕೆ ಅತ್ಯಂತ ಮಹತ್ವ ಕೊಟ್ಟು ತನಿಖೆ ನಡೆಯಬೇಕಿದೆ. ಅದಕ್ಕಿಂತಲೂ ಮುಖ್ಯವಾಗಿ ಓರ್ವ ಪಾಕಿಸ್ತಾನಿ ಪ್ರಜೆಗೆ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟ ಪ್ರಕರಣವನ್ನೂ ಕೂಡಾ ಅತ್ಯಂತ ಗಂಭೀರವಾಗಿ ಪರಿಗಣಿಸಿ ಈ ನಕಲಿ ದಾಖಲೆಗಳ ಹಿಂದಿರುವ ಎಲ್ಲಾ ದೇಶದ್ರೋಹಿ ಶಕ್ತಿಗಳನ್ನು ಪತ್ತೆ ಮಾಡುವುದು ಜೊತೆಗೆ ಅವರನ್ನೂ ಕೂಡಾ ಬಂಧಿಸಿ ಸೂಕ್ತ ತನಿಖೆ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಅದಲ್ಲದೇ ಇಷ್ಟು ದಿನಗಳ ಕಾಲ ಇಲ್ಲ ನೆಲೆಸಿರಲು ಸಹಕರಿಸಿದ ಎಲ್ಲಾ ಸ್ಥಳೀಯ ದೇಶದ್ರೋಹಿಗಳನ್ನು ಕೂಡಾ ಪತ್ತೆಹಚ್ಚಿ ಬಂಧಿಸಿ ತನಿಖೆಗೊಳಪಡಿಸುವುದು ಕೂಡಾ ಮಹತ್ವದ್ದಾಗಿದೆ.
ಇದಲ್ಲದೇ ಇವರಂತೇ ಮತ್ತೂ ಕೂಡಾ ಅನ್ಯ ದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಸಾಧ್ಯತೆಗಳೂ ಕೂಡಾ ದಟ್ಟವಾಗಿದ್ದು ಇವರನ್ನೆಲ್ಲರನ್ನೂ ತನಿಖೆಗೆ ಒಳಪಡಿಸಿದ. ಅಂತವು ಕೂಡಾ ಹೊರಬೀಳುವ ಸಾಧ್ಯತೆಗಳಿವೆ.

ದೇಶ ವಿದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆದಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಭಟ್ಕಳದೊಂದಿಗೆ ತಳಕು ಹಾಕಿಕೊಳ್ಳುತ್ತಿರುವುದು ಉತ್ತರ ಕನ್ನಡ ಜಿಲ್ಲೆಯವರಾದ ನಮಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಇದರ ಜೊತೆಗೆ ಇಂತಹ ಅಕ್ರಮಗಳು ಕೂಡಾ ನಡೆಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿ ಮತ್ತಷ್ಟು ವಿಷಮವಾಗುವ ಮುನ್ನ ಎಲ್ಲವನ್ನೂ ಪತ್ತೆಹಚ್ಚಿ ಬಯಲಿಗೆಳೆಯುವ ಕೆಲಸ ಆಗಲಿ ಎಂದು ಹಿಂದೂ ಜಾಗರಣ ವೇದಿಕೆಯು ಆಗ್ರಹಿಸಿದೆ.
ಅಕ್ರಮ ಗೋಮಾಂಸ ಸಾಗಾಣಿಕೆ ಕಡಿವಾಣಕ್ಕೆ ಆಗ್ರಹ: ಶುಕ್ರವಾರ ಬೆಳಿಗ್ಗೆ ಶಿರಸಿ ನ್ರದಲ್ಲಿ ಪೆÇೀಲೀಸರ ಅಕ್ರಮ ಗೋಮಾಂಸ ಸಾಗಿಸುತ್ತಿದ್ದವರನ್ನು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ನಿತ್ಯವೂ ದೊಡ್ಡ ಪ್ರಮಾಣದಲ್ಲಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪೆÇೀಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಈ ವೇಳೆ ಹಿಂಜಾವೇ ತಾಲೂಕು ಸಂಘಟನಾ ಕಾರ್ಯದರ್ಶಿ ಗಿರೀಶ್ ನರೇಗಲ್, ತಾಲೂಕು ಸಂಪರ್ಕ ಪ್ರಮುಖ ಸತೀಶ ಕೆ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ ಈರಣ್ಣ ಕಲ್ಲೂರ, ಲವ್ ಜಿಹಾದ್ ಪ್ರಮುಖ ಮಂಜುನಾಥ ಕಡ್ಡಿ ಹಾಜರಿದ್ದರು.

Be the first to comment

Leave a Reply

Your email address will not be published.


*